Karnataka Times
Trending Stories, Viral News, Gossips & Everything in Kannada

Rashmika Mandanna: ದೀಪಿಕಾ ಪಡುಕೋಣೆ ಬಗ್ಗೆ ಕೇಳಿದ್ದಕ್ಕೆ ಬೆರೆಯದನ್ನೇ ಹೇಳಿದ ರಶ್ಮಿಕಾ

Advertisement

ಇದು ನಟಿ ರಶ್ಮಿಕಾ ಮಂದಣ್ಣನಾ (Rashmika Mandanna) ಎಂದು ಅನುಮಾನ ಹಾಗೂ ಆಶ್ಚರ್ಯ ಪಡುವಷ್ಟು ನಟಿ ರಶ್ಮಿಕಾ ಇತ್ತೀಚೆಗೆ ಹಾಟ್ ಅಂಡ್ ಹಾಟ್ (Hot & Hot) ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ವಾಹಿನಿಯೊಂದರ (Channel) ಪ್ರಶಸ್ತಿ (Award) ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲು ಅವರು ಶಾರ್ಟ್ ಡ್ರೆಸ್ ನಲ್ಲಿ (Short Dress) ಬಂದಿದ್ದರು.ಇದನ್ನು ನೋಡಿದ ಕೆಲವರು ಬ್ಯೂಟಿಫುಲ್ ಡಾಲ್ (Beautiful Doll) ಎಂದು ಪ್ರಶಂಸೆ ವ್ಯಕ್ತ ಪಡಿಸಿದರೆ ಟ್ರೋಲಿಗರು ಮಾತ್ರ ಕಾಲೆಳೆದಿದ್ದರು.

ಹೌದು ಬಾಲಿವುಡ್ (Bollywood) ನಟಿ ಉರ್ಫಿ ಜಾವೇದ್ ಗೆ ಇನ್ನೂ ಕೆಲವರು ಹೋಲಿಸಿದ್ದಾರೆ. ಹೌದು ವಾಹಿನಿಯೊಂದರ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದಾಗಿದ್ದರಿಂದ ಬಹುತೇಕ ನಟಿಯರು ಈ ರೀತಿ ಕಾಸ್ಟ್ಯೂಮ್ ಗಳಲ್ಲಿ ಬರುವುದು ವಾಡಿಕೆ.ಇನ್ನು ಈ ರೀತಿಯಾ ಕಾರ್ಯಕ್ರಮಕ್ಕಾಗಿಯೇ ವಿವಿಧ ವಿನ್ಯಾಸದ ಕಾಸ್ಟ್ಯೂಮ್ ಗಳನ್ನು ರೆಡಿ ಮಾಡಿಸಲಾಗತ್ತದೆ.ಇನ್ನೂ ಕೆಲವರಿಗೆ ಫ್ಯಾಷನ್ ಡಿಸೈನರ್ ಕಂಪೆನಿಗಳು ಸ್ಪಾನ್ಸರ್ ಮಾಡುತ್ತವೆ.

Advertisement

ಈ ಕಾರಣದಿಂದಾಗಿ ಸದಾ ನಟಿಯರು ಇಂತಹ ಸಮಾರಂಭದಲ್ಲಿ ಹಾಟ್ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ.ಇನ್ನು ರಶ್ಮಿಕಾ ಮಂದಣ್ಣ ಸಹ ತುಂಡುಡುಗೆಯಲ್ಲಿ ಬಂದು ಕ್ಯಾಮೆರಾಗಳ ಗಮನ ಸೆಳೆದಿದ್ದಾರೆ. ಹೌದು ನಿಜಕ್ಕೂ ಈಕೆ ರಶ್ಮಿಕಾ ಮಂದಣ್ಣನಾ ಎಂದು ಅಚ್ಚರಿ ಪಡುವಷ್ಟರ ಮಟ್ಟಿಗೆ ರಶ್ಮಿಕಾ ಶಾರ್ಟ್ ತೊಟ್ಟಿದ್ದು ರಶ್ಮಿಕಾ ವೇದಿಕೆಯತ್ತ ಎಂಟ್ರಿ ಕೊಡುತ್ತಿದ್ದರೆ ಎಲ್ಲ ಕ್ಯಾಮೆರಾಗಳು ಅವರತ್ತ ತಿರುಗಿ ಒಂದರ ಮೇಲೊಂದು ಫೋಟೋ ಕ್ಲಿಕ್ಕಿಸಿದ್ದವು. ನಗುನಗುತ್ತಲೇ ಎಲ್ಲರಿಗೂ ಫೋಸ್ ಕೂಡ ನೀಡಿದ್ದರು ರಶ್ಮಿಕಾ. ಸದ್ಯ ಇದೀಗ ರಶ್ಮಿಕಾ ಅವಕಾಶ ಸಿಕ್ಕರೆ ದೀಪಿಕಾ ಪಡುಕೋಣೆ (Deepika Padukone) ಅವರ ಕಪಾಟಿಗೆ ಕನ್ನ ಹಾಕುತ್ತೇನೆ ಎಂದಿದ್ದಾರೆ.. ಯಾಕೆ ಗೊತ್ತಾ?

ನಟಿ ರಶ್ಮಿಕಾ ಮಂದಣ್ಣ ರವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ (Interview) ತಮ್ಮ ಫ್ಯಾಷನ್ ಬಗೆಗಿನ ಒಲವನ್ನು ಬಿಚ್ಚಿಟ್ಟಿದ್ದು ನಾನು ಆರಾಮದಾಯಕವಾಗಿರುವ ಬಟ್ಟೆಗಳನ್ನು ಧರಿಸಲು ಹೆಚ್ಚು ಇಷ್ಟು ಪಡುತ್ತೇನೆ ಮತ್ತು ಅಂತಿಮವಾಗಿ ತೊಡುವ ಬಟ್ಟೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡುವಂತಿರಬೇಕಿದ್ದು ವಾಸ್ತವದಲ್ಲಿ ನನಗೆ ಫ್ಯಾಷನ್ ಬಗೆಗಿನ ಜ್ಞಾನ ಕಡಿಮೆ.

ಇನ್ನು ದಿನದಿಂದ ದಿನಕ್ಕೆ ಸರಳವಾದ ಉಡುಪು ಧರಿಸಲು ಹೆಚ್ಚು ಇಷ್ಟವಾಗುತ್ತದೆ ಎಂದು ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಮಾತನಾಡುತ್ತಾ ಅವಕಾಶ ಸಿಕ್ಕರೆ ದೀಪಿಕಾ ಪಡುಕೋಣೆ ಅವರ ಕಪಾಟಿಗೆ ದಾಳಿ ಮಾಡುತ್ತೇನೆ ಎಂದಿದ್ದು ನಾನು ದೀಪಿಕಾ ಪಡುಕೋಣೆ ರವರ ಫ್ಯಾಷನ್ ಶೈಲಿಯನ್ನು ಇಷ್ಟವಾಗುತ್ತದೆ. ಹೌದು ಹೆಚ್ಚಾಗಿ ಅವರ ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಈ ಸಂದರ್ಶನ ವೈರಲ್ ಆಗುತ್ತಿದೆ.

Advertisement

Leave A Reply

Your email address will not be published.