ಸದ್ಯ ಭಾರತ ಚಿತ್ರರಂಗದ (Indian Filim Industry)ಬಹುನಿರೀಕ್ಷಿತ ಕಬ್ಜ (Kabza) ಚಿತ್ರ ತೆರೆಕಾಣಲು (Release) ಆಗಲು ಇದೀಗ ದಿನಗಣನೆ ಶುರುವಾಗಿದೆ ಎನ್ನಬಹುದು. ಸದ್ಯ ಈ ಬೆನ್ನಲ್ಲೆ ನಟ ಉಪೇಂದ್ರ (Upendra) ಮತ್ತವರ ತಂಡ ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿ ಸಿನಿಮಾ ಪ್ರಚಾರ ಮಾಡುತ್ತಿದ್ದು ಮುಂಬೈ (Mumbai) ನಂತರ ಚೆನ್ನೈನಲ್ಲೂ (Chennai) ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದೆ.
ಹೌದು ತಮಿಳುನಾಡಿನಲ್ಲೂ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದ್ದು ಆರ್. ಚಂದ್ರು (R Chandru) ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಶುಕ್ರವಾರ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ (Trailer) ಹಾಗೂ ಸಾಂಗ್ಸ್ ರಿಲೀಸ್ (Song Release) ಆಗಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದ್ದು ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈ ಫಿಕ್ಷನ್ ಪೀರಿಯಡ್ ಆಕ್ಷನ್ ಚಿತ್ರದಲ್ಲಿ ಉಪೇಂದ್ರ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸಿದ್ದು ನಾಯಕಿಯಾಗಿ ಶ್ರಿಯಾ ಶರಣ್ ಮಿಂಚಿದ್ದು ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ (Shivarajkumar) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar)ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಈಗ ಉಪ್ಪಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅಪ್ಪು(Appu) ಹುಟ್ಟುಹಬ್ಬದಂದೇ ಬಿಡುಗಡೆಯಾಗುತ್ತಿದ್ದು ಉಪೇಂದ್ರ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ತುಂಬಾನೇ ಆತ್ಮೀಯರಾಗಿದ್ದರು.
ಹೌದು ಒಟ್ಟಿಗೆ ಸಿನಿಮಾ ಮಾಡದಿದ್ದರೇನು ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಇದು ಇಡೀ ಚಿತ್ರರಂಗಕ್ಕೂ ಗೊತ್ತಿದ್ದು ಇಬ್ಬರೂ ಒಟ್ಟಿಗೆ ಸೇರುತ್ತಿದ್ದರು. ಸಿನಿಮಾ ಬಗ್ಗೆ ಚರ್ಚೆನೂ ಮಾಡುತ್ತಿದ್ದರು. ಈ ಕಾರಣದಿಂದಾಗಿ ಅಪ್ಪು ಹುಟ್ಟುಹಬ್ಬದಂದೇ ಕಬ್ಜ ರಿಲೀಸ್ ಕಾಕತಾಳೀಯವೆನಿಸಿದರೂ ಇಬ್ಬರ ಸ್ನೇಹಕ್ಕೆ ಸಾಕ್ಷಿ ಎಂಬಂತೆ ಇದೆ. ಈ ನಡುವೆ ಪ್ರೆಸ್ ಮೀಟ್ ನಲ್ಲಿ ಉಪ್ಪಿ ಸ್ಟಾರ್ ವಾರ್ (Star War) ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.
ಮಲ್ಟಿ ಸ್ಟಾರ್ (Multi Star) ಸಿನಿಮಾಗಳೆಂದ ಮೇಲೆ ಸ್ಟಾರ್ ವಾರ್ ಗಳು ಖಚಿತ. ಎಲ್ಲಾ ಪ್ಯಾನ್ಸ್ ಗಳಿಗೂ ಏನು ಹೇಳುತ್ತಿರ ಎಂಬ ಪ್ರಶ್ನೆಗೆ ಉತ್ತರಿಸಿದ ಉಪ್ಪಿ ನನಗೆ ಈ ಸ್ಟಾರ್ ವಾರ್ ಗಳ ಬಗ್ಗೆ ನಂಬಿಕೆ ಅನ್ನೋದೇ ಇಲ್ಲ. ಸ್ಟಾರ್ಸ್ ಗಳು ಏನಿದ್ರು ಸ್ಕ್ರೀನ್ ಮೇಲೆ ಫೈಟ್ ಮಾಡಬೇಕು. ಆದರೆ ಹೊರಗಡೆ ಫೈಟ್ ಆಗೋದು ನನಗೆ ಅರ್ಥನೇ ಆಗಲ್ಲ.
ಅಭಿಮಾನಗಳು ಕೂಡ ನನಗೆ ಈ ಸ್ಟಾರ್ ಇಷ್ಟ ಆ ಸ್ಟಾರ್ ಇಷ್ಟ ಅವ್ರ್ನ ಹೇಟ್ (Hate) ಮಾಡೋದು ನನಗೆ ಸರಿ ಅನ್ಸಲ್ಲ. ಸಾಮಾನ್ಯವಾಗಿ ಸಾಕಷ್ಟು ಅಭಿಮಾನಿಗಳು ಎಲ್ಲಾ ಸ್ಟಾರ್ ಗಳನ್ನು ಇಷ್ಟ ಪಡುತ್ತಾರೆ. ಆದ್ರಲ್ಲಿ ಕೆಲವರನ್ನ ಜಾಸ್ತಿನ ಇಷ್ಟಪಡಬಹುದು. ಹಾಗಂತ ಬೇರೆಯವರನ್ನ ಹೇಟ್ ಮಾಡೋದು ಇದ್ಯಲ್ಲ ಅದು ನನಗೆ ಅರ್ಥನೇ ಆಗಲ್ಲ. ಅದು ಆಗಬಾರದು. ಕಂಡಿತ ನಮ್ಮ ಸಿನಿಮಾದಲ್ಲೂ ಆಗಲ್ಲ ಅನ್ಕೋತ್ತೀನಿ. ಅದು ಆಗರದು ಒಳ್ಳೆ ಬೆಳವಣಿಗೆ ಅಲ್ಲ ಅನ್ಕೋತ್ತೀನಿ ಎಂದಿದ್ದಾರೆ ಉಪೇಂದ್ರ..