Karnataka Times
Trending Stories, Viral News, Gossips & Everything in Kannada

Vishnu-Anant Nag: ಎಷ್ಟೇ ಆಫರ್ ಬಂದರೂ ವಿಷ್ಣು ಹಾಗೂ ಅನಂತ್ ನಾಗ್ ಒಟ್ಟಿಗೆ ನಟಿಸಲಿಲ್ಲ, ಇಲ್ಲಿದೆ ಕಾರಣ

ನಮ್ಮ ಕನ್ನಡ ಚಿತ್ರರಂಗದ (KFI) ಅತ್ಯದ್ಭುತ ನಟರಲಿ ಅನಂತ್ ನಾಗ್ (Ananth Nag) ಅವರು ಕೂಡ ಒಬ್ಬರು. ಹೌದು 1948 ರಲ್ಲಿ ಬಾಂಬೆಯಲ್ಲಿ (Bombay) ಜನಿಸಿದ ಅನಂತ್ ನಾಗ್ ಅವರಿಗೆ ಇದೀಗ 72 ವರ್ಷ ವಯ್ಯಸ್ಸಾಗಿದ್ದು ಇವರ ಮಾತೃಭಾಷೆ ಕೊಂಕಣಿ (Konkani). ಇನ್ನು ಅನಂತ್ ನಾಗ್ ರವರಿಗೆ ಒಬ್ಬ ತಮ್ಮ ಹಾಗೂ ಓರ್ವ ಅಕ್ಕ ಇದ್ದು, ಇವರ ತಮ್ಮನ ಹೆಸರು ಶಂಕರ್ ನಾಗ್ (Shankar Nag) ಹಾಗೂ ಇವರ ಅಕ್ಕನ ಹೆಸರು ಶೈಮಾಲಾ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ರಾಜಕೀಯದಲ್ಲೂ (Political) ಕೂಡ ತಮನ್ನು ತಾವು ತೊಡಗಿಸಿಕೊಂಡೊದ್ದ ಅನಂತ್ ನಾಗ್ ಅವರು ಒಂದು ಬಾರಿ ಎಮ್ ಏನ್ ಸಿ (MNC) ಮತ್ತು ಎಮ್ ಎಲ್ ಎ (MLA) ಆಗಿದ್ದು ವಿಶೀಷ. ಇನ್ನು ಇವರು ಹಿಂದಿ (Hindi) ಮರಾಠಿ (Marati) ತಮಿಳು (Tamil) ಹಾಗೂ ಕನ್ನಡ (Kannada) ಸಿನಿಮಾಗಳಲ್ಲಿ ನಟಿಸಿದ್ದು ಅದರಲ್ಲೂ ಅನಂತ್ ನಾಗ್ ಅವರು ಹೆಚ್ಚಾಗಿ ಅಭಿನಯಿಸಿರುವ ಸಿನಿಮಾರಂಗವೆಂದರೆ ಅದು ಕನ್ನಡ ಚಿತ್ರರಂಗ. ಹೌದು ಬರೋಬ್ಬರಿ 100 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅನಂತ್ ನಾಗ್ ಅವರು ನಟಿಸಿದ್ದಾರೆ.

ಇನ್ನು ಸಾಕಷ್ಟು ವರ್ಷಗಳು ಕಳೆದರೂ ಸಹ ಇಂದಿಗೂ ನಟ ಅನಂತನಾಗ್ ರವರ ನಟನೆಯಲ್ಲಿ ಕಿಂಚಿತ್ತು ಕೂಡ ಕಿಲುಬು ಬಂದಿಲ್ಲ ಎಂದು ಹೇಳಬಹುದಾಗಿದೆ. ಹೌದು ಅಷ್ಟರಮಟ್ಟಿಗೆ ಪರಿಪಕ್ವವಾಗಿ ಈ ವಯಸ್ಸಿನಲ್ಲಿ ಸಹ ಅನಂತನಾಗ್ ರವರು ಅಭಿನಯಿಸುತ್ತಾರೆ. ನಟ ಅನಂತಾಗ್(Ananth Nag) ರವರು 70ರ ದಶಕದಿಂದ ಪ್ರಾರಂಭಿಸಿ ಇಂದಿನವರೆಗೂ ಸಹ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಪ್ರೇಕ್ಷಕ ಬಳಗವನ್ನು ಹೊಂದಿದ್ದಾರೆ ಎನ್ನಬಹುದು.ಇನ್ನು ಕನ್ನಡ ಚಿತ್ರರಂಗದ ದಿಗ್ಗಜರು ಆಗಿರುವ ಅಂಬರೀಶ್ (Ambreesh) ವಿಷ್ಣುವರ್ಧನ್ (Vishnuvardhan) ರಾಜಕುಮಾರ್ (Rajkumar) ಶಂಕರ್ ನಾಗ್ (Shankar nag) ಸೇರಿದಂತೆ ಹಲವಾರು ಕಲಾವಿದರೊಂದಿಗೆ ತೆರೆಯನ್ನು ಹಂಚಿಕೊಂಡಿರುವ ಅನುಭವವನ್ನು ಅನಂತನಾಗ್ ಹೊಂದಿದ್ದಾರೆ. ಹೌಸು ನಿಜಕ್ಕೂ ಕೂಡ ಅವರನ್ನು ಕನ್ನಡದ ಅನರ್ಘ್ಯ ರತ್ನ ಎಂದರು ಕೂಡ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಅವರ ಕೊಡುಗೆ ಕನ್ನಡ ಚಿತ್ರರಂಗಕ್ಕಿದೆ ಎನ್ನಬಹುದು.

Join WhatsApp
Google News
Join Telegram
Join Instagram

ಇನ್ನುವಿಷ್ಣುವರ್ಧನ್ ಹಾಗೂ ಅನಂತನಾಗ್ ರವರು ವಿಶೇಷ ಸ್ನೇಹ ಬಾಂಧವ್ಯವನ್ನು ಹೊಂದಿದ್ದು ಇವರಿಬ್ಬರೂ ಕೂಡ ಒಂದಾಗಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಚಿತ್ರರಂಗಕ್ಕೆ ಬಹುತೇಕ ಕೆಲವು ವರ್ಷಗಳ ಅಂತರದಲ್ಲಿಯೇ ಕಾಲಿಟ್ಟರೂ ಸಹ ಇವರಿಬ್ಬರು ಮೊದಲ ಬಾರಿಗೆ ನಟಿಸಲು 17 ವರ್ಷಗಳೇ ಬೇಕಾಯಿತು. ಹೌದು ಇವರಿಬ್ಬರು ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ 17 ವರ್ಷಗಳ ನಂತರ ಮತ್ತೆ ಹಾಡಿತು ಕೋಗಿಲೆ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ.

ಚಿ ಉದಯ್ ಶಂಕರ್(Chi Uday Shankar) ರವರ ಕಥೆಯಲ್ಲಿ ಮೂಡಿಬಂದಂತಹ ಈ ಚಿತ್ರ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಸಾಕಷ್ಟು ಯಶಸ್ವಿಯಾಯಿತು ಎಂದರು ಸಹ ಅತಿಶಯೋಕ್ತಿ ಎನಿಸಲಾರದು. ಹೌದು ಈ ಇಬ್ಬರು ಧೀಮಂತ ನಟರು ಒಂದೇ ಸಿನಿಮಾದಲ್ಲಿ ಮೊದಲ ಬಾರಿ ಕಾಣಿಸಿಕೊಂಡಾಗ ಅದರಲ್ಲೂ ಕೂಧೆ ಇಂತಹ ಕಥೆಯಲ್ಲಿ ಅಂತಹ ನಟನ ಚಾತುರ್ಯತೆಯನ್ನು ಹೊಂದಿರುವ ಕಲಾವಿದರು ಜೊತೆಯಾಗಿ ಕಾಣಿಸಿಕೊಂಡಾಗ ಆ ಪರದೆ ನಿಜಕ್ಕೂ ಧನ್ಯ ಎಂಬಂತೆ ಭಾವನೆಯಿಂದ ಕೂಡಿತ್ತು ಎನ್ನಬಹುದು. ಇನ್ನು ಇಂದಿಗೂ ಕೂಡ ಪ್ರತಿಯೊಬ್ಬ ಕಲಾವಿದರು ಮತ್ತು ಕಲಾ ಪ್ರೇಮಿಗಳು ನೆನಪಿಸಿಕೊಳ್ಳುವಂತಹ ಸಿನಿಮಾ ಇದಾಗಿದೆ.

Leave A Reply

Your email address will not be published.