ಕನ್ನಡ ಕಿರುತೆರೆಯ ಖ್ಯಾತ ನಟಿ ಅಮೃತಾ ನಾಯ್ಡು(Amrutha Naidu) ಅವರು ತಮ್ಮ ಗಂಡು ಮಗುವಿನ ನಾಮಕರಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಶೇರ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದಷ್ಟೆ ಅವರ ಮಗಳು ಸಮನ್ವಿ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು.
ಹೌದು ಕಲರ್ಸ್ ಕನ್ನಡ(Colours Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಫೇಮಸ್ ಕಾರ್ಯಕ್ರಮ ‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ಭಾಗವಹಿಸಿದ್ದರು. ಸಮನ್ವಿ ತನ್ನ ತುಂಟ ಮಾತುಗಳು ಹಾಗೂ ನಟನಾ ಶೈಲಿಯಿಂದ ರಾಜ್ಯದ ಜನರ ಮನಸ್ಸನ್ನು ಕದ್ದಿದ್ದಳು.
ಆದರೆ ಕಳೆದ ವರ್ಷ ಜೂನ್(June) ನಲ್ಲಿ ಕೋಣನ ಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಮನ್ವಿ ಸವನಪ್ಪಿದ್ದಳು, . ಅಪಘಾತದಲ್ಲಿ 6 ವರ್ಷದ ಸಮನ್ವಿ(Samanvi) ಸ್ಥಳದಲ್ಲೇ ಸಾವನ್ನಪ್ಪಿದ್ರೆ . ತಾಯಿ ಅಮೃತಾಗೆ ಗಂಭೀರ ಗಾಯಗಾಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆಗ ತುಂಬು ಗರ್ಭಿಣಿಯಾಗಿದ್ದ ಅಮೃತ ನಾಯ್ಡು ಮಗಳನ್ನು ಕಳೆದುಕೊಂಡ ಅಪಾರ ನೋವು ಅನುಭವಿಸಿದ್ರು.
ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ತಾಯಿ ಅಮೃತಾ ಹಾಗೂ ಮಗಳು ಸಮನ್ವಿ ಒಳ್ಳೆಯ ಆಟ ಆಡಿದ್ದರು. ಅಮೃತಾ, ಸಮನ್ವಿ ಹರಿಕಥೆ ಕೂಡ ಮಾಡಿದ್ದರು, ಅಮೃತಾ ಪ್ರತಿಭೆ ಕಂಡು ಎಲ್ಲರೂ ಚಪ್ಪಾಳೆ ತಟ್ಟಿದ್ದರು. ನಟಿ ಅಮೃತಾ ನಾಯ್ಡು ಅವರು ಚಿತ್ರರಂಗಕ್ಕೆ ಕಾಲಿಟ್ಟು, 25ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗಂಗೋತ್ರಿ ಧಾರಾವಾಹಿ ಅವರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿದೆ.
ಪುಣ್ಯಕೋಟಿ, ಕುಸುಮಾಂಜಲಿ, ಮನೆಯೊಂದು ಮೂರು ಬಾಗಿಲು, ಅಮೃತ ವರ್ಷಿಣಿ ಮುಂತಾದ ಕನ್ನಡದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲಿಯೂ ಅಮೃತಾ ಬಣ್ಣ ಹಚ್ಚಿದ್ದಾರೆ.ಒಟ್ಟಾರೆ ಮಗಳ ಸಾವಿನ ನೋವು ಮರೆಸುವ ಸಲುವಾಗ ಮನೆಗೆ ಮಗನ ಆಗಮನವಾಗಿದ್ದು, ಮಗನ ಆಗಮನದಿಂದ ಅಮೃತ ನಾಯ್ಡು ಖುಷಿಯಾಗಿದ್ದಾರೆ.