Karnataka Times
Trending Stories, Viral News, Gossips & Everything in Kannada

Kabzaa Movie: ಕಬ್ಜ ಸಿನೆಮಾ ರಿಲೀಸ್ ಗು ಮುನ್ನವೇ ಆಘಾತ? ನಿಜಕ್ಕೂ ಆಗಿದ್ದೇ ಬೇರೆ.

ಆರ್‌ ಚಂದ್ರು ನಿರ್ದೇಶಿಸಿ, (R Chandru) ನಿರ್ಮಿಸಿರುವ ಕಬ್ಜ (Kabzaa) ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿದೆ. ಎಲ್ಲೇ ಹೋದರು ಕಬ್ಜ ಚಿತ್ರದ ಇವೆಂಟ್ ಗಳು ನಡಿತಾ ಇದೆ, ನುರಿತ ತಂತ್ರಜ್ಞರು ಕಬ್ಜ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಎ.ಜೆ. ಶೆಟ್ಟಿ (A.J, Sheety) ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ

ಕಬ್ಜ ಪ್ರಿ ಬುಕಿಂಗ್ ಡಲ್ ಆಗಿದೆಯಾ?

Join WhatsApp
Google News
Join Telegram
Join Instagram

ಕಬ್ಜದ ಪ್ರಿ ಬುಕಿಂಗ್ ಮೊನ್ನೆಯೇ ಆರಂಭವಾಗಿದ್ದರೂ ತಕ್ಕ ರೆಸ್ಪಾನ್ಸ್(Response) ಬಂದಿಲ್ಲ ಎಂದು ಮಾತುಗಳು ಕೇಳಿಬರುತ್ತೀವೆ. ಇದಕ್ಕೆ ಕಾರಣ ಕಬ್ಜ ಪ್ರಚಾರ ಕಡಿಮೆ ಎಂದು ಕೆಲವರ ವಾದ, ಕೆಜಿಎಫ್ ನಷ್ಟೆಲ್ಲಾ ಪ್ರಚಾರ ಇಲ್ಲ ಎನ್ನುವುದು ಅಭಿಮಾನಿಗಳ ಮಾತು, ಕೆಲವರು ಮೊದಲು ಸಿನಿಮಾ ವಿಮರ್ಶೆ ನೋಡೋಣ. ಆಮೇಲೆ ಬುಕಿಂಗ್ ಅನ್ನುತ್ತಿದ್ದಾರೆ, ಇದಕ್ಕೆ ಕಾರಣ ಚಿತ್ರತಂಡ ನೀಡಿದ ಪ್ರಚಾರ ಸಾಕಾಗಿಲ್ಲ ಎನ್ನುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಬಹುದು.

ಮೂವರು ಸ್ಟಾರ್ ನಟರ ಚಿತ್ರ

ಚಿತ್ರದಲ್ಲಿ ಮೂರು ಸ್ಟಾರ್ಸ್ ಇದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, (Upendra) ಕಿಚ್ಚ ಸುದೀಪ್ (Kiccha Sudeep) ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Raj Kumar) ಕುಮಾರ್ ಈ ಮೂಲಕ ಕನ್ನಡದ ಕಬ್ಜ ಚಿತ್ರ ಹೊಸ ಖದರ್ ಸೃಷ್ಟಿ ಮಾಡಲಿದೆ, ಚಿತ್ರದ ಗಳಿಕೆ ಬಗ್ಗೆಯು ಎಲ್ಲರಲ್ಲೂ ನಿರೀಕ್ಷೆ ಮೂಡಿದೆ, ಕನ್ನಡದಲ್ಲಂತೂ ವಿತರಕರು ನಾ ಮುಂದು ತಾ ಮುಂದು‌ ಎಂದು ಕಬ್ಜ ಖರೀದಿಗೆ ಮುಗಿಬಿದ್ದಿದ್ದಾರೆ. ‌ ಈ ಎಲ್ಲ ಲೆಕ್ಕಾಚಾರಗಳ ಆಧಾರದ ಮೇಲೆ, ಕಬ್ಜ ಹೆಚ್ಚು ಗಳಿಕೆ ಮಾಡಬಹುದು ಎಂದು ಹೇಳುತ್ತಿದ್ದಾರೆ.

ಕಬ್ಜ ಸಿನಿಮಾ 4 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆ. ಕೆಜಿಎಫ್(KGF) ಖ್ಯಾತಿಯ ಶಿವಕುಮಾರ್ ಕಲಾ(Shivakumar Kala) ನಿರ್ದೇಶನ ಮಾಡಿದ್ದಾರೆ ಸಿನಿಮಾ ಬಿಡುಗಡೆಗೂ ಮುನ್ನ ಬರೋಬ್ಬರಿ 100 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆದಿದೆಯಂತೆ. ಕಬ್ಜ ಸಿನಿಮಾವನ್ನು ಒಟಿಟಿಗೆ ಅಮೇಜಾನ್ ಪ್ರೈಂ(Amazon Prime) ಖರೀದಿ ಮಾಡಿದೆ. ಚಿತ್ರಕ್ಕೆ ಅಡ್ವಾನ್ಸ್​ ಬುಕ್ಕಿಂಗ್(Advance Booking) ಈಗಾಗಲೇ ಆಗಿದೆ. ಹಲವು ಕಡೆಗಳಲ್ಲಿ ಟಿಕೆಟ್​ ಸೋಲ್ಡ್​ ಔಟ್​ ಆಗಿದೆ. ಚಿತ್ರದ ಮುಂಗಡ ಬುಕ್ಕಿಂಗ್ ಹೆಚ್ಚಾಗಿದ್ದು ಕಲೆಕ್ಷನ್(Collection) ಎಷ್ಟು ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

Leave A Reply

Your email address will not be published.