ಕಬ್ಜ (Kabja) ಸಿನೆಮಾ ರಿಲೀಸ್ ಯಾವಾಗ ಆಗುತ್ತಪ್ಪ ಎಂದು ಜನರು ಕಾಯುತ್ತಿದ್ದರು ಕಡೆಗೂ ಆ ದಿನವೂ ಬಂದೆ ಬಿಟ್ಟಿತು. ಕರ್ನಾಟಕದ ಪಾಲಿನ ಹೆಮ್ಮೆಯ ಹೀರೋ ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar). ಅವರು ಹುಟ್ಟಿದ ದಿನವಾದ ಇಂದು ಸೂಪರ್, ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಹಾಗೂ ನಿರ್ದೇಶಕ ಚಂದ್ರು (R Chandru) ಸೇರಿಕೊಂಡು ಪುನೀತ್ ಫ್ಯಾನ್ಸ್ ಗೆ ಈ ಸಿನೆಮಾವನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಕಬ್ಜ ಸಿನೆಮಾ ಬಹುತೇಕ ತಾರಾಗಣದ ಸಂಗಮವಾಗಿದ್ದು ಇದರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep), ಹ್ಯಾಟ್ರಿಕ್ ಹೀರೋ ಶಿವಣ್ಣ (Shivarajkumar) ಹಾಗೂ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಸಮಾಗಮವಾಗಿದ್ದಾರೆ. ಈ ಮೂಲಕ ಸಿನೆಮಾ ಬಹುಭಾಷೆಯಲ್ಲಿ ರಿಲೀಸ್ ಆಗಿದ್ದು ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಆದರೆ ಸಿನೆಮಾ ರಿಲೀಸ್ ಗೂ ಮೊದಲೇ ಉಪೇಂದ್ರ ಹಾಗೂ ನಾಯಕಿ ಶ್ರೀಯಾ ಶರಣ್ (Shriya Saran) ಅವರು ಸಿನೆಮಾ ತಂಡದ ಬಗ್ಗೆ ಮಾತಾಡಿದ್ದ ವೀಡಿಯೋ ಒಂದು ವೈರಲ್ ಆಗಿದೆ.
ಏನಂತಾರೆ ಈ ತಾರೆಯರು:
ಮೊದಲು ಉಪೇಂದ್ರ ಅವರಿಗೆ ನೀವು ಬೇರೆ ಭಾಷೆ ಡಬ್ಬಿಂಗ್ ಗೆ ನಿಮ್ಮ ವಾಯ್ಸ್ ಯಾಕೆ ನೀಡೊಲ್ಲ ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿದ್ದ ಉಪ್ಪಿ ಅವರು ನಾನು ಎ ಹಾಗೂ ಉಪೇಂದ್ರ ಸಿನೆಮಾ ವನ್ನು ನಾನೇ ವಾಯ್ಸ್ ನೀಡಬೇಕೆಂದು ಇದ್ದೆ, ಆದರೆ ನಂಗೆ ಟೈಂ ಸಿಗಲಿಲ್ಲ ಈಗ ಈ ಸಿನೆಮಾ ಮಾಡಬೇಕೆಂದು ಕೊಂಡೆ ಅದು ಆಗಲಿಲ್ಲ. ಮುಂದಿನ ಸಿನೆಮಾ ಟ್ರೈ ಮಾಡ್ತೀನಿ ಅಂದಿದ್ದಾರೆ. ಬಳಿಕ ಶ್ರೀಯಾ ಅವರಿಗೆ ಈ ಮೂರು ನಟರ ಪೈಕಿ ಯಾರು ನಿಮಗೆ ಇಷ್ಟವಾದರು ಎಂದು ಕೇಳಿದ್ದಕ್ಕೆ ನಂಗೆ ಎಲ್ಲರೂ ಇಷ್ಟವಾದರೂ ಅವರೆಲ್ಲರ ಪಾಲಿಗೆ ನಾನು ಪ್ರಿನ್ಸ್ ಅಂದರೆ ರಾಣಿತರ ಆಗಿದ್ದೀನಿ ಸದಾ ಹಾಗೇ ಇರ್ತೇನೆ ನೀವು ಸಿನೆಮಾ ನೋಡಿ ಅದರಲ್ಲಿ ನೀವು ಡಿಸೈಡ್ ಮಾಡಬಹುದು ಎಂದಿದ್ದಾರೆ.