Kirik Keerthi And Arpitha: ದೂರವಾಗಿರುವ ಕಿರಿಕ್ ಕೀರ್ತಿ ಹಾಗೂ ಪತ್ನಿ ಅರ್ಪಿತ ನಡುವಿನ ನಿಜವಾದ ವಯಸ್ಸಿನ ಅಂತರ ಇಷ್ಟು.
ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಕಿರಿಕ್ ಕೀರ್ತಿ(Keerthi) ರವರು ಮೊದಮೊದಲು ಎಲ್ಲರಿಗೂ ಕೂಡ ಪರಿಚಿತರಾಗಿದ್ದು ನಮ್ಮ ಕನ್ನಡ (Kannada) ಪರ ಹೋರಾಟಗಾರನಾಗಿ. ಹೌದು ಆ ಸಮಯದಲ್ಲಿ ಎಲ್ಲರೂ ಸಹ ಮೆಚ್ಚು ವಂತಹ ವ್ಯಕ್ತಿತ್ವವನ್ನು ಅವರು ಹೊಂದಿದ್ದರು ಎನ್ನಬಹುದು. ಇನ್ನು ಅವರ ವೈಯಕ್ತಿಕ ಜೀವನವೂ ಸಹ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕೆಂದರೆ ಅವರು ಸಿನಿಮಾ ಕಥೆಗಳಲ್ಲಿ (Movie Story) ತೋರಿಸುಂತೆ ಕುಟುಂಬದವರ ವಿರೋಧ ಕಟ್ಟಿಕೊಂಡು ಮದುವೆಯಾಗುತ್ತಾರೆ.
ಇನ್ನು ಕಿರಿಕ್ ಕೀರ್ತಿ ರವರ ಪತ್ನಿ ಅರ್ಪಿತ(Arpitha Keerthi) ಯವರು ಬಹಳ ಒಳ್ಳೆ ಅನುಕೂಲತೆ ಕುಟುಂಬದಲ್ಲಿ ಜನಿಸಿದ್ದು ಆದರೂ ಸಹ ಕೀರ್ತಿಯವರನ್ನು ಮದುವೆಯಾದ (Marriage) ಕಾರಣ ಮನೆಯವರನ್ನ ಬಿಟ್ಟು ಕಿರ್ತಿ ಅವರ ಜೊತೆಗೆ ಬಾಳಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಕಷ್ಟವನ್ನು ಅನುಭವಿಸಿದರು ಕೂಡ ಕೀರ್ತಿ ಅವರ ಪ್ರತಿಯೊಂದು ಕಷ್ಟದ ಹೆಜ್ಜೆಗಳಲ್ಲಿ ಸಹ ಅವರ ಬೆಂಬಲವಾಗಿ ನಿಂತಿದ್ದರು. ಹೌದು ಕನ್ನಡ ಕಿರುತೆರೆಯ (Kannada Television) ಖ್ಯಾತ ಕಾರ್ಯಕ್ರಮ ಬಿಗ್ ಬಾಸ್(Biggboss) ಗೆ ಹೋಗಿ ಬಂದ ನಂತರ ಕಿರಿಕ್ ಕೀರ್ತಿ ಅವರ ಅದೃಷ್ಟವೇ ಬದಲಾಯಿತು ಎನ್ನಬಹುದು.
ಇನ್ನು ಹಲವಾರು ಕಾರ್ಯಕ್ರಮಗಳ ನಿರೂಪಕರಾಗಿ (Anchor) ಹಾಗೂ ಇನ್ನು ಹಲವಾರು ಸಿನಿಮಾಗಳಲ್ಲಿ ಕೂಡ ಕಿರಿಕ್ ಕೀರ್ತಿ ಅವರಿಗೆ ಅವಕಾಶ ಹುಡುಕಿಕೊಂಡು ಬಂತು. ಇನ್ನೊಂದು ಕಡೆ ಅರ್ಪಿತ ಅವರಿಗೂ ಸಹ ಧಾರವಾಹಿಗಳಲ್ಲಿ (Serials) ನಟಿಸುವಂತಹ ಅವಕಾಶ ಹುಡುಕಿಕೊಂಡು ಬಂದು ಇಬ್ಬರೂ ಕೂಡ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಕೂಡ ಹೋಗಿ ತಮ್ಮ ದಾಂಪತ್ಯ ಜೀವನದ ಕುರಿತಂತೆ ಎಲ್ಲರೊಂದಿಗೂ ಹಂಚಿಕೊಂಡಿದ್ದರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಇಬ್ಬರೂ ಸಹ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದು ಇದರ ಕುರಿತಂತೆ ನೇರ ನೇರವಾಗಿಯೇ ಕಿರಿಕ್ ಕೀರ್ತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಬರೆದುಕೊಳ್ಳುತ್ತಿದ್ದಾರೆ.
ಇನ್ನು ಇತ್ತ ಅರ್ಪಿತ ಕೂಡ ತಮ್ಮ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಇರುವಂತಹ ಕೀರ್ತಿ ಎನ್ನುವ ಹೆಸರನ್ನು ತೆಗೆದು ಕೇವಲ ಅರ್ಪಿತ ಎನ್ನುವ ಹೆಸರನ್ನು ಮಾತ್ರ ಇಟ್ಟಿದ್ದಾರೆ. ಕಿರಿಕ್ ಕೀರ್ತಿ ಸಹ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದೆ ಈಗ ಅದರಿಂದ ಹೊರಬರುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂಬುದಾಗಿ ಹೇಳುವ ಮೂಲಕ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಈಗ ಜೋಡಿಯ ವಯ್ಯಸ್ಸಿನ ಅಂತರದ ಬಗ್ಗೆ ಕೇಳಲಾಗುತ್ತಿದ್ದು ಇದನ್ನು ನೋಡುವುದಾದರೆ ಕೀರ್ತಿ ಅವರಿಗೆ ಈಗ 33 ವರ್ಷ ಅರ್ಪಿತಾ ಅವರಿಗೆ 28 ವರ್ಷ. ಇವರಿಬ್ಬರ ನಡುವೆ 5 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ.