Villain Ponnambalam: ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಸತ್ಯ ಬಿಚ್ಚಿಟ್ಟ ಖಳನಾಯಕ ಪೊನ್ನಂಬಲಂ

Advertisement
ಸ್ಕ್ರೀನ್ ಮೇಲೆ ಹೀರೋ ಆಗೋದು ನಾವು ಕಂಡಿರುವೆವು ಆದರೆ ರಿಯಲ್ ಲೈಫ್ ನಲ್ಲೂ ಹೀರೋ ತರ ಇರೋದು ಕಡಿಮೆ ಇದೀಗ , ಆ ಸಾಲಿಗೆ ನಟ ಚಿರಂಜೀವಿ (Chiranjeevi) ಸಹ ಸೇರಿದ್ದಾರೆ. ಹಳೆ ಕಾಲದ ಸಿನೆಮಾಗಳಿಗೆ ಖಳನಾಯಕನಾಗಿ ನಟಿಸಿದ್ದ ನಟ ಪೊನ್ನಂಬಲಂ (Ponnambalam) ಅವರು ಚಿರಂಜೀವಿ ಅವರ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದು ಸದ್ಯ ಈ ವಿಚಾರ ಎಲ್ಲೆಡೆ ವೈರಲ್ (Viral)ಆಗಿದೆ.
ಬಹುಭಾಷ ನಟ
ಕನ್ನಡ, ತಮಿಳು , ತೆಲುಗು ಮಲಯಾಳಂ ಸೇರಿದಂತೆ ಅನೇಕ ಸಿನೆಮಾದಲ್ಲಿ ಅಭಿನಯಿಸಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಈ ಮೂಲಕ ಹಲವು ಪ್ರಶಸ್ತಿಗೂ ಇವರು ಭಾಜೀನರಾಗಿದ್ದಾರೆ. ತಮ್ಮ ಕ್ರಿಯಾತ್ಮಕ ನಟನೆ ಮೂಲಕ ಅಭಿಮಾನಿಗಳ ನೆಚ್ಚಿನ ನಟನಾಗಿದ್ದಾರೆ, ಇತರರಿಗೂ ಸಹಾಯ ಮಾಡುವುದರಲ್ಲೂ ಇವರ ಎತ್ತಿದ ಕೈ ಎನ್ನಬಹುದು.
Advertisement
ಬಿಡದ ಆರೋಗ್ಯ ಸಮಸ್ಯೆ
ಪೊನ್ನಂಬಲಂ ಅವರು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಮೂಲಕ ಎರಡು ಕಿಡ್ನಿ ಕೂಡ ಅವರದ್ದು ಹಾಳಾಗಿದ್ದು ಆರ್ಥಿಕ ಸಂಕಷ್ಟ ಕೂಡ ಎಡೆಮಾಡಿತಂತೆ. ಆಗ ಅವರು ಅನೇಕ ಕಲಾವಿದರ ಬಳಿ ತಮ್ಮ ಕಷ್ಟಕ್ಕೆ ಸ್ಪಂದಿಸಲು ಮೆಸೇಜ್ ಕಳುಹಿಸಿದ್ದು ಇದನ್ನು ಓದಿದ್ದ ಮೇಘಾಸ್ಟಾರ್ ಚಿರಂಜೀವಿ ಅವರು ತಮ್ಮ ಸಹೃದಯದಿಂದ ಅಪಾರ ಮೊತ್ತದ ಹಣವನ್ನು ದಾನ ಮಾಡಿದ್ದಾರೆ. ಇತ್ತೀಚೆಗೆ ಚಿಕಿತ್ಸೆಯಿಂದ ಚೇತರಿಸಿಕೊಂಡ ಅವರು ಚಿರಂಜೀವಿ ಅವರ ಬಗ್ಗೆ ಮನದಾಳದ ಮಾತನ್ನು ಆಡಿದ್ದಾರೆ.
ಏನಂದ್ರು ಪೊನ್ನಂಬಲಂ?
ಈಗಷ್ಟೇ ಆಸ್ಪತ್ರೆಯಿಂದ ಚೇತರಿಸಿಕೊಂಡು ಬಂದೆ. ನಂಗೆ ಈ ಕಷ್ಟ ಬಂದಾಗ ಕಂಗಾಲಾದೆ ಯಾರನ್ನು ಹಣ ಕೇಳುವುದು ಏನಂದುಕೊಳ್ಳುತ್ತಾರೆ ಎಂಬ ಭಯ ಇತ್ತು ಆದರೆ ಕಷ್ಟ ಅಂದಾಗ ನೆನಪಾದದ್ದು ಅಣ್ಣ ಮೇಗಾ ಸ್ಟಾರ್ ಚಿರಂಜೀವಿ ಅವರು. ಸಮಸ್ಯೆ ತಿಳಿದಾಗ ಹೈದರಾಬಾದ್(Hyderbadh) ಬನ್ನಿ ಇಲ್ಲವಾದರೆ ಅಪೋಲಾಗೆ ಹೋಗಿ ಅಡ್ಮಿಟ್(Admit) ಆಗಿ ನಾನು ವ್ಯವಸ್ಥೆ ಮಾಡುವೆ ಭಯ ಬೇಡ ನಿಮ್ಮ ಜೊತೆ ನಾನಿದ್ದೇನೆ ಎಂದರು. ಆಗ ನಾನು ಒಂದೆರಡು ಲಕ್ಷ ರೂ. ಸಾಕಾಗುತ್ತದೆಂದು ಭಾವಿಸಿದ್ದೇ ಆದರೆ ಬರೋಬರಿ 40ಲಕ್ಷ ರೂ. ಖರ್ಚಾಯಿತು. ಇದು ನಂಗೆ ಭರಿಸಲು ಸಾಧ್ಯವೇ ಎನ್ನುವಾಗಲೇ ಅಷ್ಟು ಖರ್ಚನ್ನು ಅವರೇ ಭರಿಸಿದ್ದಾರೆ. ಇಷ್ಟು ದೊಡ್ಡ ಮಟ್ಟಿಗಿನ ಸಹಾಯ ನೀರಿಕ್ಷಿಸಲಿಲ್ಲ ಎಂದು ಭಾವುಕರಾಗಿ ಮಾತಾಡಿದ್ದಾರೆ.
Advertisement