S. S. Rajamouli: ರಾಜಮೌಳಿ ಆಸ್ಕರ್ ಗೆದ್ದ ಬೆನ್ನಲ್ಲೇ ಬೇರೆಯೇ ಹೇಳಿಕೆ ಕೊಟ್ಟ AR ರೆಹಮಾನ್

Advertisement
ಅಂದ್ಹಾಗೆ ಭಾರತದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿನಿಮಾ ಕಡಿಮೆಯೇ, ಅದ್ರೆ ಈ ಅವರ್ಡ್ ಅಂದಾಗ ರೆಹಮಾನ್ (A. R. Rahman) ಅವರ ನೆನಪು ಆಗುತ್ತಿದೆ, ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್ ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್.ಎಸ್. ಶೇಖರ್ ಅವರ ಮಗನಾಗಿ ದಿಲೀಪ್ ಕುಮಾರ್ ಜನಿಸಿದ್ದಾರೆ, 2008ರಲ್ಲಿ ರಿಲೀಸ್ ಆಗಿ ಸಿನಿಮಾರಂಗದಲ್ಲಿ ಒಂದು ಹೊಸ ಹವಾ ಕ್ರಿಯೇಟ್ ಮಾಡಿದ್ದ ಸ್ಲಮ್ಡಾಗ್ ಮಿಲಿಯನೇರ್ (slum dog millionaire) ಚಿತ್ರಕ್ಕಾಗಿ A.R ರೆಹಮಾನ್ ಅವರಿಗೆ ಆಸ್ಕರ್ ಪ್ರಶಸ್ತಿ ದೊರೆತಿದೆ.
ಆಸ್ಕರ್‌ಗೆ ತಪ್ಪಾದ ಸಿನಿಮಾಗಳನ್ನು ಕಳುಹಿಸುತ್ತಿದೆ ಎಆರ್ ರೆಹಮಾನ್ ಹೇಳಿಕೆ:
ಆಸ್ಕರ್ ಆವಾರ್ಡ್ ಬಗ್ಗೆ ಮಾತನಾಡಿದ ರೆಹಮಾನ್, ಕೆಲವೊಮ್ಮೆ, ನಮ್ಮ ಚಲನಚಿತ್ರಗಳು ಆಸ್ಕರ್‌ವರೆಗೆ ಹೋಗುತ್ತವೆ, ಆದರೆ ಅದಕ್ಕೆ ಆಸ್ಕರ್ ಸಿಗಲ್ಲ. ಆಸ್ಕರ್‌ಗೆ ಕಳುಹಿಸುವ ಸಿನಿಮಾಗಳ ಆಯ್ಕೆ ತಪ್ಪಾಗಿದೆ ಎನ್ನುತ್ತಾರೆ, ಈ ಬಾರಿ ಭಾರತದಿಂದ ಚೆಲ್ಲೋ ಶೋ ಸಿನಿಮಾವನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಆದರೆ ಈ ಸಿನಿಮಾ ಆಸ್ಕರ್ ನಿಂದ ಹೊರಬಿತ್ತು. ಆದರೆ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.
Advertisement
ಪದ್ಮಭೂಷಣ ಪಡೆದ ರೆಹಮಾನ್:
ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ರೆಹಮಾನ್ ಭಾರತೀಯ ಚಿತ್ರರಂಗದ ಹಾಡುಗಳಿಗೆ ಅಂತರಾಷ್ಟ್ರೀಯ ಹೊಸ ಅಲೆಯನ್ನು ಸೃಷ್ಟಿಸಿದ, ಜನಮನ್ನಣೆ ತಂದು ಕೊಟ್ಟ ಸಂಗೀತ ನಿರ್ದೇಶಕ. 1992 ರಲ್ಲಿ ತಮಿಳಿನ ರೋಜಾ ಚಿತ್ರದಿಂದ ಸಂಗೀತ ಪಯಣ ಆರಂಭಿಸಿದ್ದಾರೆ ಇವರು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿದ್ದ ಆರ್.ಕೆ.ಶೇಖರ್ ಅವರ ಪುತ್ರ ದಿಲೀಪ್ ಕುಮಾರ್, ರೆಹಮಾನ್ ಆಗಿ ಬೆಳೆದು ಸಂಗೀತ ಮಾಂತ್ರಿಕವೆಂಬ ಬಿರುದು ಪಡೆದಿದ್ದಾರೆ.
ನಾಟು ನಾಟು ಹಾಡಿಗೆ ಆಸ್ಕರ್:
ರಾಜಮೌಳಿ (S. S. Rajamouli) ನಿರ್ದೇಶನ , ರಾಮ್ ಚರಣ್ , ಜ್ಯೂನಿಯರ್ NTR ನಟನೆ , MM ಕೀರವಾಣಿ ಅವರು ಸಂಗೀತ ನೀಡಿರುವ RRR ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ RRR ಕೂಡ ಇತಿಹಾಸ ನಿರ್ಮಿಸಿದೆ. ಇನ್ನೂ ಆಸ್ಕರ್ ಗೆದ್ದ ಎಂ.ಎಂ ಕೀರವಾಣಿ ಹಾಗೂ ಕಾರ್ತಿಕಿ ಗೊನ್ಸಾಲ್ವೆಸ್ ಅವರಿಗೆ ರೆಹಮಾನ್ ಅವರು ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ
Advertisement