Karnataka Times
Trending Stories, Viral News, Gossips & Everything in Kannada

Actor Suriya: ಈ ಮುಖ್ಯ ಕಾರಣಕ್ಕೆ ಪತ್ನಿಯಿಂದ ದೂರ ಹೋದ ನಟ ಸೂರ್ಯ.

ನಟ ಸರವಣನ್ ಶಿವಕುಮಾರ್ (Sarvanan Shivakumar) ಎಂದರೆ ಖಂಡಿತವಾಗಿಯೂ ಕೂಡ ಯಾರಿಗೂ ಕೂಡ ಗೊತ್ತಾಗುವುದಿಲ್ಲ. ಹೌದುವ ಆದರೆ ತಮಿಳು(Tamil) ನಟ ಸೂರ್ಯ (Surya) ಅಂದರೆ ಕೇವಲ ಕಾಲಿವುಡ್ (Kollywood) ಮಾತ್ರವಲ್ಲದೇ ಇಡೀ ದಕ್ಷಿಣ ಭಾರತೀಯ ಚಿತ್ರರಂಗದವರಿಗೆ (South Indian Film Industry) ಈ ಹೆಸರು ಚಿರಪರಿಚಿತ. ಇನ್ನು ಅಪಾರ ಸಂಖ್ಯೆಯ ಅಭಿಮಾನಿ ಬಳಗ (Fan Follwing) ಹೊಂದಿರುವ ನಟ ಸೂರ್ಯ ರವರು ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ.

ಇನ್ನು ಸಿನಿಮಾ ಹೊರತಾಗಿ ಸರಳತೆ ಹಾಗೂ ಸೌಮ್ಯ ಸ್ವಭಾವದ ಮೂಲಕವಾಗಿ ಚಿತ್ರಪ್ರಿಯರ ಹೃದಯಗೆದ್ದಿದ್ದಾರೆ. ಇನ್ನು ಇವರು ತಮಿಳಿನ ಖ್ಯಾತ ನಟ ಶಿವಕುಮರ್ (Shivakumar) ಪುತ್ರ . 1997ರಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಸೂರ್ಯ ಇಂದು ಸ್ಟಾರ್ ನಟನಾಗಿ ಖ್ಯಾತಿಗಳಿಸಿದ್ದು ಸೂರ್ಯ ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಳ್ಳುವ ಮೊದಲೇ ಖ್ಯಾತ ನಟಿಯಾಗಿ ಮೆರೆಯುತ್ತಿದ್ದ ಜ್ಯೋತಿಕಾ (Jyothika) ಅವರ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ.

Join WhatsApp
Google News
Join Telegram
Join Instagram

1999ರಲ್ಲಿ ನಟ ಸೂರ್ಯ ರವರು ಪುವೆಲ್ಲಂ ಕೇಟ್ಟುಪ್ಪರ್ ಸಿನಿಮಾ ಸೆಟ್ ನಲ್ಲಿ ಮೊದಲ ಬಾರಿಗೆ ನಟಿ ಜೋತಿಕಾ ರವರನ್ನು ಭೇಟಿಯಾಗಿದ್ದು ಈ ಸಿನಿಮಾ ಸೂರ್ಯ ಅಭಿನಯದ 5ನೇ ಸಿನಿಮಾ. ಇತ್ತ ಜ್ಯೋತಿಕಾಗಿ 3ನೇ ಸಿನಿಮಾ. ಆ ಸಿನಿಮಾ ಮಾಡುವಾಗ ಇಬ್ಬರು ಕೂಡ ಇನ್ನೂ ಸ್ಟಾರ್ ಆಗಿ ಹೊರಹೊಮ್ಮಲಿಲ್ಲ. ನಟಿ ಜ್ಯೋತಿಕಾ ಮುಂಬೈ(Mumbai) ಮೂಲದವರಾಗಿದ್ದರಿಂದ ತಮಿಳಿಗೆ ಬರುತ್ತಿರಲಿಲ್ಲ. ಇನ್ನು ಜ್ಯೋತಿಕಾ ಕಷ್ಟಪಟ್ಟು ತಮಿಳು ಕಲಿಯುತ್ತಿದ್ದು ಜ್ಯೋತಿಕಾ ಆಗಿನ್ನು ತಮಿಳು ಕಲಿಯುತ್ತಿದ್ದರೂ ಸ್ಪಷ್ಟವಾಗಿ ಡೈಲಾಗ್ ಹೇಳುವ ರೀತಿಗೆ ಸೂರ್ಯ ಫಿದಾ ಆಗಿದ್ದರು.

ಇನ್ನು ಪುವೆಲ್ಲಂ ಕೇಟ್ಟುಪ್ಪರ್ ಸಿನಿಮಾ ನಂತರ ಜ್ಯೋತಿಕಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಾರೆ. ತಮಿಳು ಚಿತ್ರರಂಗದಲ್ಲಿ ಜ್ಯೋತಿಕಾ ಸ್ಟಾರ್ ನಟಿಯಾಗಿ ಗುರುತಿಕೊಳ್ಳುತ್ತಾರೆ. ಇನ್ನು ಜ್ಯೋತಿಕಾ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ವೇಳೆ ಸೂರ್ಯ ಹಾದು ಹೋಗುತ್ತಾರೆ. ಆಗ ಜ್ಯೋತಿಕಾ ಸಹಚರರನ್ನು ಕಳುಹಿಸಿ ಸೂರ್ಯರನ್ನು ಕರೆಸಿಕೊಳ್ಳುತ್ತಾರೆ. ತದ ನಂತರ ಇಬ್ಬರು ಉತ್ತಮ ಸ್ನೇಹಿತರಾಗುತ್ತಾರೆ. ಇನ್ನು ಅಲ್ಲಿಂದ ಪ್ರಾರಂಭವಾದ ಇಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗುತ್ತೆ.

ಕೊನೆಗೆ ಇಬ್ಬರು 2006 ಸೆಪ್ಟಂಬರ್ ನಲ್ಲಿ ಹಸೆಮಣೆ ಏರುತ್ತಾರೆ. ಚೆನೈನ ಪಾರ್ಕ್ ಶರಟನ್ ಹೋಟೆಲ್ ನಲ್ಲಿ ಇಬ್ಬರು ಹಸೆಮಣೆ ಏರುತ್ತಾರೆ. ಹೌದು ಸರಳವಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಮದುವೆಗೆ ನಟ ಸೂರ್ಯ ರವರ ತಂದೆ ವಿರೋಧ ವ್ಯಕ್ತಪಡಿಸುತ್ತಾರೆ. ಹೌದು ಸೂರ್ಯ ಅವರ ತಂದೆಗೆ ಜ್ಯೋತಿಕಾ ಚೆನ್ನೈ ಭಾಗದವರಲ್ಲ ಮತ್ತು ಅವರ ತಾಯಿ ಮುಸ್ಲಿಂ (Muslim) ಸಮುದಾಯಕ್ಕೆ ಸೇರಿದವರಾಗಿದ್ದು ಇದರ ಜೊತೆಗೆ ಸಿನಿಮಾ ಇಂಡಸ್ಟ್ರಿಯವರು ಸೊಸೆಯಾಗಿ ಬರುವುದು ಬೇಡ ಎಂದು ನಿರ್ಧರಿಸುತ್ತಾರೆ. ಹೌದು ಆದರೆ ನಟ ಸೂರ್ಯ ಮಾತ್ರ ಪ್ರೀತಿಸಿದ ಹುಡುಗಿಯನ್ನು ಕೈಬಿಡಲು ಸಿದ್ಧವಿರಲಿಲ್ಲ. ಆ ಸಮಯದಲ್ಕಿ ನಟ ಸೂರ್ಯ ಅವರ ತಂದೆ ಶಿವಕುಮಾರ್ ಒಂದು ಕಂಡಿಷನ್ ಅನ್ನು ವಿಧಿಸುತ್ತಾರೆ ಏನೆಂದರೆ ಜ್ಯೋತಿಕಾ ಅವರು ಯಾವುದೇ ಕಾರಣಕ್ಕೂ ಸಿನಿಮಾದಲ್ಲಿ ನಟಿಸಬಾರದು ಎಂದು ಹೇಳುತ್ತಿದ್ದಾರೆ.

ಆ ಸಮಯದಲ್ಲಿ ಜ್ಯೋತಿಕಾ ಅವರು ಯಶಸ್ಸಿನ ಉತ್ತುಂಗದಲ್ಲಿ ಇದ್ದರೂ ಕೂಡ ತಮ್ಮ ಪ್ರೀತಿಗಾಗಿ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸುತ್ತಾರೆ. ಹೌದು ಇದಾದ ಬಳಿಕ ಇಬ್ಬರಿಗೂ ಮದುವೆಯಾಗುತ್ತದೆ ತದನಂತರ ಕುಟುಂಬಕ್ಕೆ ಅನುಸರಿಸಿಕೊಂಡು ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ.
ಇನ್ನು ಜ್ಯೋತಿಕಾ ಅವರು 2015ರ ನಂತರ ಮತ್ತೆ ಚಿತ್ರದಲ್ಲಿ ಕಮ್ ಬ್ಯಾಕ್ ಮಾಡಲು ಪ್ರಾರಂಭ ಮಾಡುತ್ತಾರೆ. ಆ ಸಮಯದಲ್ಲಿ ನಟ ಸೂರ್ಯ ರವರ ತಂದೆ ಮತ್ತೊಮ್ಮೆ ಆಕ್ಷೇಪವನ್ನು ವ್ಯಕ್ತಪಡಿಸುತ್ತಾರೆ.

ಹೌದು ಆಗ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಆದರೆ ಈ ಬಾರಿ ಜ್ಯೋತಿಕಾ ಸಿನಿಮಾ ಇಂಡಸ್ಟ್ರಿಯಿಂದ ಹಿಂದೆ ಸರಿಯಲಿಲ್ಲ. ಆದರೆ ನಟ ಸೂರ್ಯ ಅವರ ತಂದೆಗೆ ಜ್ಯೋತಿಕಾ ಅವರು ಸಿನಿಮಾದಲ್ಲಿ ಮುಂದುವರಿಯುವುದು ಮಾತ್ರ ಇಷ್ಟವಿರಲಿಲ್ಲ. ಮನಸ್ತಾಪ ಹಾಹೂ ಭಿನ್ನಾಭಿಪ್ರಾಯಗಳು ಮನೆಯೊಳಗೆ ಮಾತ್ರ ಇದ್ದವು. ಆದರೆ ಅದು ಯಾವಾಗ ಒಂದು ಬಾರಿ ಹೊರಗಿನವರಿಗೆ ವಿಷಯ ಬಹಿರಂಗವಾಯಿತೋ ಆಗ ಅದು ಹೀಗೆ ನಡೆದರೆ ಸರಿ ಹೋಗುವುದಿಲ್ಲ ಎಂದು ನಿರ್ಧರಿಸಿ ನಟ ಸೂರ್ಯ ರವರು ತಮ್ಮ ಚೆನ್ನೈ ನಿವಾಸವನ್ನು ಬಿಟ್ಟು ಮುಂಬೈಗೆ ಶಿಫ್ಟ್ ಆದರು. ಹೌದು ಸದ್ಯ ಸೂರ್ಯ ಅವರು ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಮುಂಬೈನಲ್ಲಿ(Mumbai) ವಾಸ ಮಾಡುತ್ತಿದ್ದಾರೆ.

Leave A Reply

Your email address will not be published.