Karnataka Times
Trending Stories, Viral News, Gossips & Everything in Kannada

Anu Prabhakar: ಮೊದಲ ಮದುವೆ ಮುರಿದು ಬೀಳಲು ನಿಜವಾದ ಕಾರಣ ಕೊಟ್ಟ ಅನು ಪ್ರಭಾಕರ್

ಚಿತ್ರಲೋಕ (Chitra Loka) ಎಂಬ ಸಂದರ್ಶನದಲ್ಲಿ ಮದುವೆಯ (Marriage) ಬಗ್ಗೆ ಮಾತನಾಡಿರುವ ನಟಿ ಅನುಪ್ರಭಾಕರ್ (Anu Prabhakar) ರವರು ಧೈರ್ಯವಾಗಿ ತಮ್ಮ ಜೀವನದ ಕಥೆಯನ್ನು ಹೇಳಿದ್ದು ಮೊದಲ ಮದುವೆ ಮುರಿದು ಬಿಳಲು ಕಾರಣ ಕೂಡ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ನಾನು ಜಯಂತಿ (Jayanti) ಅಮ್ಮ ಅವರ ಸೊಸೆಯಾಗಿ ಹೋಗಿ ಬಹಳ ವಿಚಾರಗಳನ್ನು ಅವರಿಂದ ಕಲಿತಿದ್ದೇನೆ. ಒಂದು ಹೆಣ್ಣಾಗಿ ಮಾತ್ರವಲ್ಲದೆ ಒಬ್ಬ ನಟಿಯಾಗಿ (Actress) ಹೇಗಿರಬೇಕು ಎನ್ನುವುದನ್ನು ಕೂಡ ನಾನು ಅವರಿಂದ ಕಲಿತೆ. ಅವರ ಜೊತೆ ನನಗೆ ಉತ್ತಮ ಸಂಬಂಧ ಇದ್ದು ಮಗಳಿಗಿಂತ (Daughter) ಹೆಚ್ಚಾಗಿ ಪ್ರೀತಿಯಿಂದ ಅವರು ನನ್ನನ್ನು ನೋಡಿಕೊಳ್ಳುತ್ತಿದ್ದರು. ಹೌದು ಆದರೆ ಗಂಡ ಹೆಂಡತಿ ಎಂಬ ಸಂಬಂಧ ಬಂದಾಗ ಸ್ವಲ್ಪ ಏರುಪೇರು ಆಗಿ ನಾವು ಅನಿವಾರ್ಯ ಕಾರಣಗಳಿಂದ ದೂರ ಆಗಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಮಾತು ಮಂದುವರಿಸಿದ ನಟಿ ಅನುಪ್ರಭಾಕರ್ ರವರು 10 ರಿಂದ 12 ವರ್ಷಗಳ ಕಾಲ ನಾನು ಅವರ ಜೊತೆಗೆ (Jayanti) ಇದ್ದೆ.. ಆದರೆ ಇಂತಹದೊಂದು ದಿನ ಬರುತ್ತದೆ ಎಂದು ನಾವು ಎಂದಿಗೂ ಕೂಡ ಬಯಸಿರಲಿಲ್ಲ. ಜೀವನ ಎಂದರೆ ಹೀಗೆ ಅಂದುಕೊಂಡದ್ದಕ್ಕಿಂತ ಅನಿರೀಕ್ಷಿತವಾದುದ್ದೇ ಹೆಚ್ಚಾಗಿ ಆಗುವುದು. ಹೌದು ಹಾಗೆ ನನ್ನ ಜೀವನದಲ್ಲೂ ಕೂಡ ಅಂತಹ ಕಹಿ ಘಟನೆ ಬಂತು ನಾವಿಬ್ಬರು (Husband) ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎನ್ನುವ ಸಂದರ್ಭ ಬಂದಾಗ ಈ ಕಹಿ ನಿರ್ಧಾರವನ್ನು ನಾವು ತೆಗೆದುಕೊಳ್ಳಲೇ ಬೇಕಾಯಿತು. ಇನ್ನು ಒಂದು ದಿನ ನಾನು ನನ್ನ ಅಮ್ಮನ ಮನೆಗೆ ವಾಪಸ್ ಬರಬೇಕಾಗಿದ್ದು ಆ ಸಮಯಕ್ಕೆ ನನ್ನ ತಂದೆ ಇರಲಿಲ್ಲ ಆದರೂ ನನ್ನ ಕುಟುಂಬದ ಎಲ್ಲರೂ ನನ್ನನ್ನು ಸಪೋರ್ಟ್ ಮಾಡಿ ಕುಗ್ಗಿ ಹೋಗಿದ್ದ ನನ್ನನ್ನು ಚೇತರಿಸಿಕೊಳ್ಳುವ ರೀತಿ ಮಾಡಿದರು ಎಂದು ಮೊದಲ ಪತಿಯ ಜೊತೆ ಸಂಬಂದ ಕಳೆದುಕೊಂಡ ಬಗ್ಗೆ ಮಾತನಾಡಿದ್ದಾರೆ.

Join WhatsApp
Google News
Join Telegram
Join Instagram

ಆ ಒಂದು ಕಾರಣಕ್ಕಾಗಿ ನಾನು ಇಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು. ಹೌದು ಇದೇ ಕಾರಣಕ್ಕಾಗಿ ನಾನು ಎಲ್ಲಾ ಹೆತ್ತವರನ್ನು ಕೇಳಿಕೊಳ್ಳುತ್ತೇನೆ ಒಂದು ವೇಳೆ ನಿಮ್ಮ ಮಕ್ಕಳ ಮದುವೆಗಳು ಈ ರೀತಿಯಾಗಿ ಆದಾಗ ದಯವಿಟ್ಟು ಅವರನ್ನು ಸ್ವಾಗತಿಸಿ ಅವರಿಗೆ ಸಪೋರ್ಟ್ ಮಾಡಿ ಅವರ ಜೊತೆ ನಿಲ್ಲಿ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಒಂದು ಸಂಬಂಧ ಅದರಲ್ಲೂ ಕೂಡ ಗಂಡ ಹೆಂಡತಿ ಮಧ್ಯೆ ಏನಾಯ್ತು ಎನ್ನುವುದನ್ನು ವಿವರವಾಗಿ ಆಚೆ ಹೇಳುವ ಅವಶ್ಯಕತೆ ಇಲ್ಲ. ಹೌದು ಅದು ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಚಾರವಾಗಿದ್ದು ಈ ಕಾರಣದಿಂದಾಗಿ ಏನೋ ಸರಿ ಬರಲಿಲ್ಲ. ಹಾಗಾಗಿ ದೂರವಾಗಿದ್ದೇವೆ ಅಷ್ಟೇ. ಆದರೆ ಈಗ ರಘು (Raghu Mukarji) ನನ್ನ ಜೀವನದಲ್ಲಿ ಮತ್ತೆ ಸಿಕ್ಕಿ ಮತ್ತೆ ಒಂದು ಹೊಸ ಜೀವನ ಸೃಷ್ಟಿ ಆಗಿದೆ ಈ ಬಗ್ಗೆ ನಾನು ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಬಹಳ ವೈರಲ್ ಆಗುತ್ತಿದ್ದು ಎಲ್ಲ ಹೆಣ್ಣು ಮಕ್ಕಳ ಹೆತ್ತವರು ಕೇಳಲೇಬೇಕಾದ ಮಾತು ಇದಾಗಿದ್ದು ಅನು ಪ್ರಭಾಕರ್ ಅವರ ಪ್ರಬುದ್ಧತೆಯ ಮಾತುಗಳು ಅನೇಕರಿಗೆ ದೈರ್ಯ ನೀಡಿದೆ.

Leave A Reply

Your email address will not be published.