Karnataka Times
Trending Stories, Viral News, Gossips & Everything in Kannada

Kabzaa 2: ಕಬ್ಜ 2 ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ನಿರ್ದೇಶಕ ಚಂದ್ರು, ಕಾದಿದೆ ಸರ್ಪ್ರೈಸ್

Advertisement

ಬಾಹುಬಲಿ (Bahubali) ಮತ್ತು ಕೆಜಿಎಫ್​ (KGF) ಚಿತ್ರಗಳು ಎರಡು ಪಾರ್ಟ್​ನಲ್ಲಿ ಬಂದು ಧೂಳೆಬ್ಬಿಸಿದವು. ಇನ್ನು ಪೊನ್ನಿಯಿನ್​ ಸೆಲ್ವನ್​ 1 ಸೂಪರ್​ ಹಿಟ್​ ಆಗಿದ್ದು ಸದ್ಯ ಈಗ ಅದರ ಸೀಕ್ವೆಲ್​ ಕೂಡ ಸಿದ್ಧವಾಗುತ್ತಿದೆ. ಕಾಂತಾರ 2 (Kantara 2) ಕೂಡ ಬರಲಿದ್ದು ಹಾಗೆಯೇ ಕಬ್ಜ 2 (Kabza 2) ಚಿತ್ರವೀಗ ನಿರೀಕ್ಷೆ ಮೂಡಿಸಿದೆ. ಮಾರ್ಚ್​ 17 ರಂದು ಕಬ್ಜ ಸಿನಿಮಾದ (Kabzaa Movie) ಕ್ಲೈಮ್ಯಾಕ್ಸ್​ನಲ್ಲಿ ಸೀಕ್ವೆಲ್​ನ ಸೂಚನೆ ನೀಡಲಾಗಿದ್ದು ಚಿತ್ರ ನೋಡಿ ಹೊರಬಂದವರೆಲ್ಲರೂ ಪಾರ್ಟ್​ 2 ಕಥೆಯನ್ನು ಊಹಿಸುತ್ತಿದ್ದಾರೆ. ಹೌದು ನಿರ್ದೇಶಕ ಆರ್. ಚಂದ್ರು ಅವರು (R. Chandru) ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಬೇಕಿದೆ.

ಇನ್ನು ಕಬ್ಜ ಸಿನಿಮಾದ ಕಥೆ ಎರಡು ಪಾರ್ಟ್​ಗಳಲ್ಲಿ ಬರಲಿದೆ ಎಂದು ಚಿತ್ರತಂಡ ನಿಶ್ಚಿತವಾಗಿ ಹೇಳಿರಲಿಲ್ಲ. ಆದರೆ ಇದೀಗ ಆ ವಿಚಾರ ಬಯಲಾಗಿದ್ದು ಕಬ್ಜ ಸಿನಿಮಾದಲ್ಲಿ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕೌತುಕ ಹಾಗೆಯೇ ಇದ್ದು ಅದನ್ನು ಕಬ್ಜ 2 ಚಿತ್ರದಲ್ಲಿ ನಿರ್ದೇಶಕ ಆರ್​. ಚಂದ್ರು ಮುಂದುವರಿಸಲಿದ್ದಾರೆ. ಇನ್ನು ಈ ಬಗ್ಗೆ ಈಗ ಅಭಿಮಾನಿಗಳ ವಲಯದಲ್ಲಿ ಟಾಕ್​ ಕೂಡ ಕ್ರಿಯೇಟ್​ ಆಗಿದೆ.

Advertisement

ನಟ ಉಪೇಂದ್ರ ಅವರು ಕಬ್ಜ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದು ಕಿಚ್ಚ ಸುದೀಪ್​ ರವರ ಧ್ವನಿಯಲ್ಲಿ ಇಡೀ ಸಿನಿಮಾದ ಕಥೆ ನಿರೂಪಿತವಾಗಿದೆ. ಇನ್ನು ಶಿವರಾಜ್​ಕುಮಾರ್(Shivarajkumar)​ ರವರು ಅತಿಥಿ ಪಾತ್ರ ಮಾಡಿ ಗಮನ ಸೆಳೆದಿದ್ದು ಆ ಪಾತ್ರದ ಹಿನ್ನೆಲೆ ಏನು ಎಂಬುದನ್ನು ಇನ್ನೂ ರಿವೀಲ್​ ಆಗಿಲ್ಲ. ಇದನ್ನು ಕಬ್ಜ 2 ಚಿತ್ರದಲ್ಲಿ ವಿವರಿಸಬೇಕಿದೆ. ಇನ್ನು ಹಾಗಾದರೆ ಸೀಕ್ವೆಲ್​ನಲ್ಲಿ ಯಾರ ಪಾತ್ರ ಹೈಲೈಟ್​ ಆಗಲಿದೆ? ಯಾರು ಅತಿಥಿ ಪಾತ್ರ ಮಾಡಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೂ ಕೂಡ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

ಇನ್ನು ಕಬ್ಜ ನೋಡಿದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು ಮೊದಲ ದಿನ ಈ ಚಿತ್ರಕ್ಕೆ ಒಳ್ಳೆಯ ಓಪನಿಂಗ್​ ಸಿಕ್ಕಿದೆ. ಇನ್ನು ಎಲ್ಲ ಕಡೆಗಳಲ್ಲಿ ಹೌಸ್​ ಫುಲ್​(Housefull) ಪ್ರದರ್ಶನ ಆಗಿದ್ದು ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಕೂಡ ಕಬ್ಜ ಬಗ್ಗೆ ಜನರು ಮಾತನಾಡುತ್ತಿದ್ದಾರೆ.ಹೌದು ತಾಂತ್ರಿಕವಾಗಿ ಈ ಚಿತ್ರದ ಗುಣಮಟ್ಟ ಎಲ್ಲರಿಗೂ ಇಷ್ಟ ಆಗಿದ್ದು ಜನರಿಂದ ಕೂಡ ಸಿಕ್ಕಿರುವ ಉತ್ತಮ ಸ್ಪಂದನೆ ಕಂಡು ಬೇರೆ ಭಾಷೆಯ ಸೆಲೆಬ್ರಿಟಿಗಳು ಕೂಡ ಕಬ್ಜ ಬಗ್ಗೆ ಟ್ವೀಟ್​ ಮಾಡುತ್ತಿದ್ದಾರೆ.

Advertisement

Leave A Reply

Your email address will not be published.