ಈಗಂತೂ ಎಲ್ಲಿ ಕೇಳಿದರೂ ನಾಟು ನಾಟು ಹಾಡಿನದ್ದೆ ಸದ್ದು. ಇತ್ತೀಚೆಗೆ RRR ಸಿನೆಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ (Oscar) ಭಾಜನರಾದ ಬಳಿಕ ಈಗ ಇದೇ ಸಿನೆಮಾ ತಂಡದ ಬಗ್ಗೆ ಇನ್ನೊಂದು ಗಾಸಿಪ್ ಸುದ್ದಿ ಹರಿದಾಡುತ್ತಿದೆ.
ಎಲ್ಲೆಲ್ಲೂ ಸಂಭ್ರಮ:
ಭಾರತದ RRR ಸಿನೆಮಾಕ್ಕೆ ಪ್ರಶಸ್ತಿ ಸಿಕ್ಕಿತ್ತು ಎಂದು ತಿಳಿಯುತ್ತಲೇ ಎಲ್ಲರ ಸ್ಟೇಟಸ್ ನಲ್ಲೂ ಅದರದ್ದೆ ಕಮಾಲು. ಅದೇ ರೀತಿ ಈ ಸಿನೆಮಾದ ನಿರ್ದೇಶಕ ತಮ್ಮ ಸಿನೆಮಾ ತಂಡದ ಹೀರೋಗಳ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನಿರ್ದೇಶಕ ರಾಜಮೌಳಿ (Rajmouli), ರಾಮ್ ಚರಣ್ (Ramcharan) ಜೂನಿಯರ್ ಎನ್.ಟಿ.ಆರ್ (Junior NTR) ಸೇರಿ ಫೋಟೋ ಹಂಚಿಕೊಂಡಿದ್ದಾರೆ. ಡಿವಿವಿ ಧನಿಯಾ (DVV Dania) ಅವರ ಅನುಪಸ್ಥಿತಿಯೂ ಎಲ್ಲೆಡೆ ಬಿಸಿ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ರಾಜಮೌಳಿ ಹಾಗೂ ನಿರ್ಮಾಪಕರ ನಡುವೆ ವೈ ಮನಸ್ಸು ಕೂಡಿದೆ ಎನ್ನಲಾಗುತ್ತಿದೆ.
ಏನಂದ್ರು ನಿರ್ಮಾಪಕರು?
ಈ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಲೇ ನಿರ್ಮಾಪಕರ ಬಳಿ ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಸರ್ ನೀವು ನಿಮ್ಮ ಸಿನೆಮಾ ತಂಡ ಆಸ್ಕರ್ ಪ್ರಶಸ್ತಿ ಗೆದ್ದರೂ ಆ ಸಂಭ್ರಮದ ಕ್ಷಣದಲ್ಲಿ ಇಲ್ಲ ಯಾಕೆ? ನಿಮ್ಮನ್ನು ಸಿನೆಮಾ ತಂಡದವರು ಕರೆಯಲಿಲ್ಲವೇ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ್ದ ಅವರು ನಾನು ಮೊದಲಿಂದಲೂ ಸಿನೆಮಾ ತಂಡದಿಂದ ದೂರನಾ ಉಳಿದಿದ್ದೆ ಎಂದು ಹೇಳಿದ್ದಾರೆ. RRR ಸಿನೆಮಾಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಖುಷಿ ನೀಡಿದ್ದು ಮುಂದಿನ ದಿನದಲ್ಲಿ ಈ ಸಿನೆಮಾ ಮತ್ತಷ್ಟು ಯಶಸ್ಸು ಪಡೆದು ಇನ್ನಷ್ಟು ಹೊಸ ಸಿನೆಮಾ ನಿರ್ಮಾಣಕ್ಕೆ ಉತ್ತೇಜನ ನೀಡುವುದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ನಾಟು ಹಾಡು ಈಗ ಸಿನೆಮಾ ಪ್ರತಿಷ್ಟೆ ಹೆಚ್ಚಿಸಲು ಕಾರಣವಾಗಿದ್ದು ಮುಂದಿನ ದಿನದಲ್ಲೂ ಈ ರೀತಿಯ ಸಿನೆಮಾ ಹಾಗೂ ಹಾಡುಗಳು ಮೂಡಿ ಬರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ ಎನ್ನಬಹುದು.