Karnataka Times
Trending Stories, Viral News, Gossips & Everything in Kannada

Puneeth Rajkumar: ಅಪ್ಪು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂತು ಆರೋಪ…ಇದೆಷ್ಟು ಸರಿ?

Advertisement

ಕನ್ನಡ ಚಿತ್ರರಂಗದ ಪವರ್ ಸ್ಟಾರ್ (Power Star) ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ (Puneeth Rajkumar) ರವರ ಜನುಮ ದಿನೋತ್ಸವ ನಿನ್ನೆಯಷ್ಟೆ (March 17) ನಡೆದಿದ್ದು ರಾಜ್ಯದ ಹಲವೆಡೆ ವಿಶ್ವ ಮಾನವನ ಹುಟ್ಟುಹಬ್ಬವನ್ನು ಸಮಾಜ ಸೇವೆ ಮಾಡುವ ಮೂಲಕ ಅಭಿಮಾನಿಗಳು (Fans) ಆಚರಿಸಿದ್ದಾರೆ. ಇನ್ನು ಅಪ್ಪು (Appu) ಹುಟ್ಟುಹಬ್ಬದ ನಡುವೆ ಟ್ಟಿಟರ್‌ನಲ್ಲಿ (Tweeter) ಪುನೀತ್‌ ರಾಜಕುಮಾರ್‌ ಸ್ಕ್ಯಾಮ್ಸ್‌ (Puneeth Rajkumar Scams) ಎಂಬ ಹ್ಯಾಷ್‌ ಟ್ಯಾಗ್‌ ಸದ್ದು ಮಾಡುತ್ತಿದ್ದು ನಟ ಪುನೀತ್‌ ಯಾವುದೇ ಸಮಾಜಸೇವೆ ಮಾಡಿಲ್ಲ ಎಂದು ಕೆಲವು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಸಾಮಾನ್ಯವಾಗಿ ಅಪ್ಪು (Appu) ಅವರು ಅದೆಷ್ಟೋ ಯುವಕರಿಗೆ (Youths) ದಾರಿ ದೀಪವಾಗಿದ್ದಾರೆ. ಇನ್ನು ಅವರ ಅಗಲಿಕೆಯ ಬಳಿಕ ನಡೆದ ರಕ್ತದಾನದಂತಹ ಕೆಲಸಗಳು ದಾಖಲೆ ಸೃಷ್ಟಿಸಿವೆ. ಇನ್ನು ಅನಾಥಾಶ್ರಮ ನಡೆಸುವ ಮೂಲಕ ಅದೇಷ್ಟೋ ಜನರಿಗೆ ಆಸರೆಯಾಗಿರುವ ವಿಚಾರ ಕೂಡ ಬೆಳಕಿಗೆ ಬಂದಿತ್ತು.

ಇತ್ತ ಸ್ವತಃ ವೈದ್ಯರು (Doctors) ಕೂಡ ಅಪ್ಪು ಅವರ ಸ್ಪೂರ್ತಿಯಿಂದ ಹೆಚ್ಚಿನ ರಕ್ತದಾನ ಮತ್ತು ನೇತ್ರದಾನ ನೊಂದಣಿ ಜರುಗುತ್ತಿವೆ ಎಂದು ಹೇಳಿದ್ದರು. ಆದರೆ ಮಾತ್ರ ಇದೀಗ ಕೆಲವು ಕಿಡಿಗೇಡಿಗಳು ಅಪ್ಪು ಅವರ ಕುರಿತು ಕೆಟ್ಟದಾಗಿ ಮಾಹಿತಿಯನ್ನ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚುತ್ತಿದ್ದಾರೆ. ಹೌದು ಪುನೀತ್‌ ಯಾವುದೇ ರೀತಿಯ ಸಾಮಾಜಿಕ ಸೇವೆ ಮಾಡಿಲ್ಲ ಶಾಲೆಗಳನ್ನು(Schools) ತೆರೆದಿಲ್ಲ ಅನಾಥಾಶ್ರಮ ಇವರದಲ್ಲ ಎಂದು ಉದ್ಧಟತನದಿಂದ ಟ್ರೋಲ್‌ (Troll) ಮಾಡುತ್ತಿದ್ದಾರೆ. ಈ ಕುರಿತು ಹಲವಾರು ಪೋಸ್ಟರ್‌ಗಳು (Poster) ಟ್ಟಿಟರ್‌ನಲ್ಲಿ ಬಹಳಾನೇ ಹರಿದಾಡುತ್ತಿವೆ. ಒಂದು ಕಡೆ ದೊಡ್ಮನೆ ಹುಡೂಗನ ಅಭಿಮಾನಿಗಳು ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರೆ ಕೆಲ ನೆಟ್ಟಿಗರು ಮಾತ್ರ ಈ ರೀತಿಯಾಗಿ ಅವರ ಹೆಸರು ಕೆಡಿಸುತ್ತಿರುವುದು ಬೆಳಗಿಗೆ ಬಂದಿದೆ.

Advertisement


ಇನ್ನು ಪುನೀತ್ ರಾಜ್‌ಕುಮಾರ್ ಅಗಲಿ ಒಂದೂವರೆ ವರ್ಷ ಕಳೆದಿದ್ದು ಅಭಿಮಾನಿಗಳು ಇಂದಿಗೂ ಅಪ್ಪು ನೆನಪಿನಲ್ಲೇ ದಿನ ದೂಡುತ್ತಿದ್ದಾರೆ. ಹೌದು ಪುನೀತ್ ಜನ್ಮದಿನೋತ್ಸವದಂದು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಭಿಮಾನಿಗಳು ಭೇಟಿ ನೀಡಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನನ್ನು ನೆನೆಯುತ್ತಿದ್ದು ಸ್ಯಾಂಡಲ್‌ವುಡ್ ತಾರೆಯರು ರಾಜಕೀಯ ಮುಖಂಡರು ಕೂಡ ದೊಡ್ಮನೆ ಹುಡುಗನನ್ನು ನೆನೆದಿದ್ದಾರೆ.

ಕಿಚ್ಚ ಸುದೀಪ್ ಧ್ರುವ ಸರ್ಜಾ ಸುಮಲತಾ ಅಂಬರೀಶ್ ಸೇರಿದಂತೆ ಸಾಕಷ್ಟು ಜನ ತಾರೆಯರು ರಾಜಕೀಯ ಮುಖಂಡರು ಟ್ವೀಟ್ ಮಾಡಿ ಅಪ್ಪುನ ನೆನೆಯುತ್ತಿದ್ದಾರೆ. ಹೌದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಪುನೀತ್ ಅಭಿಮಾನಿಗಳು ಸ್ನೇಹಿತರು ಮತ್ತು ಕುಟುಂಬಕ್ಕೆ ಇದು ಬಹಳ ವಿಶೇಷವಾದ ದಿನ. ಅಪ್ಪುನ ಸದಾ ಸಂಭ್ರಮಿಸೋಣ ಎಂದು ಬರೆದುಕೊಂಡಿದ್ದಾರೆ. ಧ್ರುವ ಸರ್ಜಾ ಟ್ವೀಟ್ ಮಾಡಿ ಸ್ವರ್ಗ ಒಂದು ಸುಂದರವಾದ ಸ್ಥಳ ಎಂದು ಗೊತ್ತು. ಯಾಕೆಂದರೆ ನಿಮ್ಮನ್ನು ಪಡೆದಿದ್ದಾರೆ. ದಿ ಲೆಜೆಂಡ್ ಪುನೀತ್ ರಾಜ್‌ಕುಮಾರ್ ಎಂದು ಬರೆದು ವಿಡಿಯೋ ಮಾಡಿ ಶುಭ ಕೋರಿದ್ದಾರೆ.

Advertisement

Leave A Reply

Your email address will not be published.