ಉಪೇಂದ್ರ (Upendra) ನಟನೆಯ ಕಬ್ಜ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ, ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ, ವಿಶ್ವಾದ್ಯಂತ ಒಟ್ಟು 4000 ತೆರೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಂಡಿದೆ. ಕಬ್ಜ ಒಂದು ಪ್ಯಾನ್ ಇಂಡಿಯಾ ಚಿತ್ರ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ
ನಿರೀಕ್ಷೆ ಹುಟ್ಟಿಸಿದ ಚಿತ್ರ
ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಕನ್ನಡದ ಕಬ್ಜ ಹೇಗಿದೆ ಎಂದು ನೋಡಲು ಅಭಿಮಾನಿಗಳು ಮೋಸ್ಟ್ ಥ್ರಿಲ್ ಆಗಿದ್ದಾರೆ, ಬಿಡುಗಡೆಯಾಗಿರುವ ಟ್ರೇಲರ್, ಹಾಡುಗಳು ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿತ್ತು, ತುಂಬಾ ಕುತೂಹಲ ಕೆರಳಿಸಿತ್ತು, ಇದು ಸಹ ಕನ್ನಡದ ಮತ್ತೊಂದು ಬಿಗ್ ಹಿಟ್ ಸಿನಿಮಾವಾಗಲಿದೆ ಎಂಬುದು ಹಲವರ ಅಭಿಪ್ರಾಯವಾಗಿತ್ತು, ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಅಭಿಮಾನಿಗಳು ಕಬ್ಜ ನೋಡಿ ಸಂಭ್ರಮಿಸುತ್ತಿದ್ದಾರೆ.
ಕಬ್ಜ ಸಿನಿಮಾ ನೋಡಲೇಬೇಕು ಯಾಕೆ?
1945 ರಿಂದ 1987 ರ ಕಾಲಘಟ್ಟದಲ್ಲಿ ನಡೆಯೋ ಕಥೆ , ಒಂದು ಕಡೆ ಸ್ವತಂತ್ರ ಪೂರ್ವ ಮತ್ತೊಂದು ಕಡೆ ಸ್ವತಂತ್ರದ ನಂತರ ಭಾರತ ಹೇಗಿತ್ತು ಅನ್ನುವುದು ಚಿತ್ರದಲ್ಲಿದೆ. ಉಪ್ಪಿ (Uppi) ಶಿವಣ್ಣ (Shivanna) ಹಾಗೂ ಕಿಚ್ಚ (Kiccha) ನಟನೆಯ ಕಬ್ಜ ಸಿನಿಮಾ ಇದಕ್ಕಾಗಿ ನೋಡಲೇಬೇಕು, ಈ ಸಿನಿಮಾ ಪುನೀತ್ ಅವರಿಗೆ ಗೌರವ ಸಲ್ಲಿಸಿದ ಚಿತ್ರ, ಪುನೀತ್ ಗೆ ಕಬ್ಜ ಚಿತ್ರ ಸಲ್ಲಿಸಿದ ಗೌರವ ತುಂಬ ವಿಶೇಷವಾಗಿದೆ.
ಅಭಿಮಾನಿಗಳಿಗೆ ಹಬ್ಬದ ವಾತಾವರಣ ನೀಡುವ ಚಿತ್ರವಿದು. ತಾಂತ್ರಿಕವಾಗಿ ಈ ಚಿತ್ರ ತುಂಬ ಬಲಿಷ್ಠವಾಗಿದ್ದರಿಂದಲೂ ಈ ಚಿತ್ರ ನೋಡಲೇಬೇಕು, ದಿನ ಕಳೆದಂತೆ ಒಂದೊಂದೇ ಅಪ್‌ಡೇಟ್ ಮೂಲಕ ಕಬ್ಜ ಭಾರಿ ಹವಾ ಕ್ರಿಯೇಟ್ ಮಾಡಿತ್ತು. ಈ ನಿಟ್ಟಿನಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದೆ
ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದೇನು
ಕಬ್ಜ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ ತುಂಬಾ ಇಷ್ಟವಾದರೆ ಇನ್ನೂ ಕೆಲಸವರಿಗೆ ಕೊಂಚ ಅಸಮಾಧಾನ ಮೂಡಿಸಿದೆ ಎನ್ನಬಹುದು, ಈ ಸಿನಿಮಾದ ಮೇಲೆ ಕನ್ನಡ ಮಾತ್ರವಲ್ಲದೇ ಎಲ್ಲಾ ಭಾಷೆಗಳಲ್ಲಿಯೂ ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಇತ್ತು, ಜೊತೆಗೆ ಕೆಜಿಎಫ್(KGF) ಸಲಾರ್(Salar) ಸಿನಿಮಾಗಳ ರವಿ ಬಸ್ರೂರು ಈ ಸಿನಿಮಾಕ್ಕೆ ಕೆಲಸ ಮಾಡಿರುವುದು ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣವಾಗಿತ್ತು, ಉಪೇಂದ್ರ ಜೊತೆಗೆ ಶಿವಣ್ಣ, ಸುದೀಪ್ ಹೆಸರು ಯಾವಾಗ ಕೇಳಿಬಂತೋ, ಆಗ ಫ್ಯಾನ್ಸ್ ಥ್ರಿಲ್ ಆಗಿದ್ದರು, ಇವರ ಜೊತೆಗೆ ಇನ್ನೂ ಅನೇಕ ಕಲಾವಿದರು ಕಬ್ಜದಲ್ಲಿದ್ದಾರೆ. ಈ ಎಲ್ಲ ಕಾರಣಕ್ಕಾಗಿ ಚಿತ್ರ ನೋಡಬೇಕು.