Kabzaa Movie Budget: ಸಕತ್ ಸೌಂಡ್ ಮಾಡುತ್ತಿರುವ ಕಬ್ಜ ಚಿತ್ರದ ಒಟ್ಟು ಬಜೆಟ್ ಇಲ್ಲಿದೆ.
ಭಾರತ ಚಿತ್ರರಂಗದ (Indian Film Industry) ರಿಯಲ್ ಸ್ಟಾರ್ ಸ್ಯಾಂಡಲ್‌ವುಡ್ (Sandalwood) ಸೂಪರ್ ಸ್ಟಾರ್ ನಟ ನಿರ್ದೇಶಕ ಉಪೇಂದ್ರ (Upendra) ನಟನೆಯ ಹಾಗೂ ಆರ್. ಚಂದ್ರು (R Chandru) ನಿರ್ದೇಶನಕ ಕಬ್ಜ (Kabza) ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ರಾರಾಜಿಸುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ ರವರ ಜೊತೆಗೆ ಕಿಚ್ಚ ಸುದೀಪ್ (Kiccha Sudeep) ಶ್ರಿಯಾ ಸರಣ್ ಮತ್ತು ಶಿವ ರಾಜ್‌ಕುಮಾರ್ (Shivarajkumar) ನಟಿಸಿದ್ದಾರೆ. ಕನ್ನಡ (Kannada) ಸೇರಿದಂತೆ ಮಲಯಾಳಂ(Malyalam) ತೆಲುಗು(Telugu) ತಮಿಳು ಮತ್ತು ಹಿಂದಿ (Tamil & Hindi) ಭಾಷೆಗಳಲ್ಲಿ ವಿಶ್ವದಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ.
ಕಬ್ಜದ ಕಥಾವಸ್ತುವು ಗಾಂಧಿವಾದಿ ಅನುಯಾಯಿ ಮತ್ತು ಕ್ರೂರವಾಗಿ ದಾಳಿಗೊಳಗಾದ ಸ್ವಾತಂತ್ರ್ಯ ಹೋರಾಟಗಾರನ ಸುತ್ತ ಸುತ್ತುತ್ತದೆ. ಇನ್ನು ಅನಿವಾರ್ಯ ಸಂದರ್ಭಗಳಿಂದಾಗಿ ಸ್ವಾತಂತ್ರ್ಯ ಹೋರಾಟಗಾರ ಮಗ ಮಾಫಿಯಾ ಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಹೌದು ಈ ಕಥೆಯು 1942 ರಿಂದ 1986 ರ ನಡುವೆ ಸುತ್ತುತ್ತದೆ. ಈ ವಾರಾಂತ್ಯದಲ್ಲಿ ನೀವು ಕಬ್ಜವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಯೋಜಿಸುತ್ತಿದ್ದರೆ ಪ್ಯಾನ್-ಇಂಡಿಯಾ ಆಕ್ಷನ್ ಲವರ್ಸ್ ಗೆ ಇದು ಪರ್ಫೆಕ್ಟ್ ಸಿನಿಮಾ ಎನ್ನಬಹುದು.
ಇನ್ನು ಉಪೇಂದ್ರ ಕಿಚ್ಚ ಸುದೀಪ್ ಶ್ರಿಯಾ ಶರಣ್(Shriya Saran) ಅಂತಹ ಸ್ಟಾರ್ ನಟರು ಸಿನಿಮಾದಲ್ಲಿರುವ ಕಾರಣಕ್ಕೆ ಕಬ್ಜ ದೇಶದ ಉದ್ದಗಲಕ್ಕೂ ಗಮನ ಸೆಳೆದಿದೆ. ಇನ್ನು ಈ ಕಾರಣಕ್ಕೆ ಆನಂದ್ ಪಂಡಿತ್ ಕೂಡ ಮುಂದೆ ಬಂದಿದ್ದು ಹಿಂದಿ ತೆಲುಗು ಹಾಗೂ ಮರಾಠಿ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಬಾಲಿವುಡ್ ಹಂಗಾಮ ವೆಬ್‌ಸೈಟ್‌ಗೆ(Website) ನೀಡಿರುವ ಸಂದರ್ಶನದಲ್ಲಿ ಆರ್.ಚಂದ್ರು ರವರು ಸಿನಿಮಾ ಬಗ್ಗೆ ಆನಂದ್ ಪಂಡಿತ್ ಕಾನ್ಫಿಡೆಂಟ್ ಆಗಿದ್ದು ಸಿನಿಮಾದ ಬಜೆಟ್ ರಿವೀಲ್ ಮಾಡಿದ್ದಾರೆ. ನಾನು ಯಾವಾಗಲೂ ಸ್ಟ್ರಾಂಗ್ ಕಂಟೆಂಟ್ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ. ಈ ಸಿನಿಮಾದಲ್ಲಿ ಕೇವಲ ಕಥೆಯಷ್ಟೇ ಅದ್ಭುತವಾಗಿಲ್ಲ ದುಬಾರಿ ಆಕ್ಷನ್ ಇದೆ. ಇದು ₹120 ಕೋಟಿ ಸಿನಿಮಾ ಅನ್ನುವುದಕ್ಕಿಂತ ಹೆಚ್ಚಾಗಿ ಪ್ಯಾಷನ್ ಇಟ್ಟುಕೊಂಡು ಮಾಡಿದ ಸಿನಿಮಾ ಎಂದು ಆನಂದ್ ಪಂಡಿತ್ ಹೇಳಿದ್ದಾರೆ.
ಹೀಗಾಗಿ ಕಬ್ಜ ಬಜೆಟ್ 120 ಕೋಟಿ ರೂ. ಇರಬಹುದಾ? ಎಂದು ಲೆಕ್ಕ ಹಾಕಲಾಗುತ್ತು. ಸದ್ಯ ಇದೀಗ ನಟ ಉಪೇಂದ್ರ ರವರೇ ಸಿನಿಮಾ ಬಜೆಟ್ 120 ಕೋಟಿ ಎಂದು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದು ಅಕುಲ್ ಭಾಲಾಜಿ ರವರ ಸಂದರ್ಶನದಲ್ಲಿ ಈ ವಿಚಾರ ಬಹಿರಂಗವಾಗಿದೆ. ಇನ್ನು ಕಬ್ಜ ಸದ್ಯ ಕನ್ನಡ ಮೊದಲ ಹೈ ಬಜೆಟ್ ಸಿನಿಮಾವಾಗಿದ್ದು ಕೆಜಿಎಫ್(KGF) 80 ಕೋಟಿಯಲ್ಲಿ ತಯರಾದರೆ ಕೆಜಿಎಫ್ 2 ಸಿನಿಮಾ 100 ಕೋಟಿಯಲ್ಲಿ ತಯಾರಾಗಿತ್ತು. ಇದೀಗ ಕಬ್ಜ ಎಲ್ಲದನ್ನು ಕೂಡ ಮೀರಿಸಿದೆ ಎನ್ನಬಹುದು.
ಇನ್ನು ಅರ್ಕೇಶ್ವರನ ಪಾತ್ರದಲ್ಲಿ ಉಪೇಂದ್ರ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಹೌದು ಇದೇ ಮೊದಲ ಬಾರಿಗೆ ರೆಟ್ರೋ ಲುಕ್‌ನಲ್ಲಿ ಕಂಡಿರೋ ಉಪ್ಪಿ ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಆಕ್ಷನ್ ಸೀಕ್ವೆನ್ ಅದ್ಧೂರಿಯಾಗಿದ್ದು ಎಜೆ ಶೆಟ್ಟಿ ಸಿನಿಮ್ಯಾಟೋಗ್ರಫಿ ಕಣ್ಣುಗಳಿಗೆ ಖುಷಿ ಕೊಡುತ್ತದೆ. ಹಾಡುಗಳು ಮಾಸ್ ಆಗಿವೆ. ಸುನೀಲ್ ಪುರಾಣಿಕ್ ಅನೂಪ್ ರೇವಣ್ಣ ಗಮನ ಸೆಳೆಯುತ್ತಾರೆ. ತಾನ್ಯ ಹೋಪ್ ಸ್ಪೆಷಲ್ ಸಾಂಗ್ ಪ್ರೇಕ್ಷಕರಿಗೆ ರಿಲೀಫ್ ಕೊಡುತ್ತದೆ. ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ(Climax) ಶಿವಣ್ಣನ ಎಂಟ್ರಿ ಚಿಂದಿ. ಇಡೀ ಸಿನಿಮಾಗೆ ಮಾಸ್ ಸೀನ್ ಇದೇ ಅಂತ ಅನಿಸಿದರೂ ಅಚ್ಚರಿ ಪಡಬೇಕಿಲ್ಲ.