Meghana Raj: ಮುಂದಿನ ಜೀವನದ ಮಹತ್ವದ ಹೇಳಿಕೆ ಕೊಟ್ಟ ಮೇಘನಾ ರಾಜ್

Advertisement
ಪತಿ ಚಿರಂಜೀವಿ ಸರ್ಜಾ(Chiranjeevi Sarja) ಅಗಲಿಕರಯ ನೋವಿನಲ್ಲಿದ್ದ ಮೇಘನಾ ರಾಜ್(Meghana Raj) ರವರು ಸದ್ಯ ಇದೀಗ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಆಗಿದ್ದಾರೆ. ಹೌದು ಮಗ ರಾಯನ್ ರಾಜ್ ಸರ್ಜಾ (Rayan Raj Sarja) ಪೋಷಣೆಯಲ್ಲಿ ಬ್ಯುಸಿಯಿದ್ದ ನಟಿ ಸ್ನೇಹಿತರ (Friends) ಬೆಂಬಲದ ಮೇರೆಗೆ ಮತ್ತೆ ನಟನೆಯತ್ತ ವಾಲಿದ್ದು ಮೇಘನಾ ರಾಜ್ ನಟಿಸುವ ಹೊಸ ಚಿತ್ರದಲ್ಲಿ ಸ್ಟಾರ್ ನಟರೊಬ್ಬರು (Star Actor) ಕೂಡ ಸಾಥ್ ನೀಡುತ್ತಿದ್ದಾರೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ನಟಿ ಮೇಘನಾರಾಜ್ ರವರು ನಾನು ಚಿತ್ರರಂಗದಿಂದ (Filim Industry) ದೂರ ಹೋಗಿಲ್ಲ ಮತ್ತೆ ಆಕ್ಟಿಂಗ್ (Acting) ಮಾಡ್ತಾಯಿದ್ದೀನಿ ಎಂದಿದ್ದು ಸದ್ಯ ಈ ವಿಚಾರ ಎಲ್ಲಾ ಅಭಿಮಾನಿಗಳಿಗೂ ಸಂತಸ ನೀಡಿದೆ ಎನ್ನಬಹುದು.
ರಾಜಹುಲಿ (Rajahuli) ನಟಿ ಮೇಘನಾ ರಾಜ್ (Meghana Raj) ಕನ್ನಡ (Kannada) ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿ ಪತಿ ಚಿರಂಜೀವ ಸರ್ಜಾ ಅಗಲಿಕೆಯ ನಂತರ ಪುತ್ರ ರಾಯನ್ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ ಸ್ನೇಹಿತರ ಒತ್ತಾಯ ಮತ್ತು ಬೆಂಬಲದ ಮೇರೆಗೆ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಹೌದು ನಿರ್ದೇಶಕ ಪನ್ನಗಭರಣ (Phannagabharana) ಡೈರೆಕ್ಷನ್‌ನಲ್ಲಿ ಮೇಘನಾ ಕಾಣಿಸಿಕೊಳ್ಳುತ್ತಿದ್ದಾರೆ. ಸ್ನೇಹಿತ ಪನ್ನಗ ಕೂಡ ಮೇಘನಾಗೆ ಹೋಲುವ ಕಥೆಯನ್ನೇ ರೆಡಿ ಮಾಡಿದ್ದು ಈ ಇಬ್ಬರ ಕಾಂಬಿನೇಷನ್‌ನ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ (Prajwal Devaraj) ಕೂಡ ಸಾಥ್ ನೀಡುತ್ತಿದ್ದಾರೆ.
Advertisement
ನಟಿ ಮೇಘನಾ ರಾಜ್ ರವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿದ್ದರು. ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನ ಹೊಂದಿರುವ ನಟಿ ಮೇಘನಾ ರಾಜ್ ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದರು. ಹೌದು ಮದುವೆಯಾದ ಎರಡು ವರ್ಷದಲ್ಲಿ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನಟಿ ಮೇಘನಾ ರಾಜ್ ರವರು ಈಗ ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.
ಇನ್ನು ಕಳೆದ ವರುಷ ಕಿರುತೆರೆಯಲ್ಲಿ ನಡೆದ ಕೆಲವು ರಿಯಾಲಿಟಿ ಶೋ(Reality Show) ಗಳಲ್ಲಿ ಜಡ್ಜ್(Judge) ಆಗಿ ಕಾರ್ಯ ನಿರ್ವಹಿಸಿದ ಮೇಘನಾ ರಾಜ್ ರವರಿಗೆ ಕೆಲವು ದಿನಗಳ ಹೀರೋ ಫಾಗ್ ಅವಾರ್ಡ್ ಕೂಡ ಸಿಕ್ಕಿದ್ದು ಸದ್ಯ ಕೆಲವು ದಿನಗಳಿಂದ ಹಿಂದೆ ವಿದೇಶದಲ್ಲಿ ಸುತ್ತಾಟವನ್ನ ಮಾಡಿ ಅಲ್ಲಿನ ಫೋಟೋಗಳನ್ನ ಶೇರ್ ಮಾಡಿದ್ದ ನಟಿ ಮೇಘನಾ ರಾಜ್ ರವರು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral) ಆಗಿದ್ದಾರೆ ಎನ್ನಬಹುದು .
Advertisement