Upendra: ನಾನು ಯಾವಾಗ್ಲೋ ಮಾಡಿ ಬಿಟ್ಟಿದ್ದೇನೆ ಕೆಲವರು ಈಗ ಮಾಡ್ತಾರಷ್ಟೇ, ಉಪೇಂದ್ರ ಹೇಳಿದ್ದೇ ಬೇರೆ
ನಟ ಸೂಪರ್ ಸ್ಟಾರ್ ಉಪೇಂದ್ರ (Upendra) ಅವರು ಒಂದು ಸಿನೆಮಾ ಮಾಡ್ತಾರೆ ಎಂದರೆ ಅದು ಏನೊ ಒಂದು ಹೊಸ ವಿಚಾರ ಇದ್ದೆ ಇರುತ್ತೆ ಎಂದೆ ಅರ್ಥ. ಅದೇ ರೀತಿ ಸಿನೆಮಾಕ್ಕೆ ಮೊದಲಿಂದಲೂ ಪ್ರಾಮುಖ್ಯತೆ ನೀಡಿ ಜನರಿಗೆ ತಿಳುವಡಿಕೆ ನೀಡುವ ನಿಟ್ಟಿನಲ್ಲಿ ಉಪ್ಪಿ ಅಂತೂ ಸರ್ವ ಪ್ರಯತ್ನ ಮಾಡುತ್ತಾರೆ. ಸದ್ಯ ಉಪೇಂದ್ರ ಎಂದಾಗ ನೆನಪಾಗೋ ಇನ್ನೊಂದು ಹೆಸರು ಕಬ್ಜ(Kabzaa). ಈ ಸಿನೆಮಾ ಮಾ.17 ರಂದು ಇಂದು ರಿಲೀಸ್ ಆಗಿದ್ದು ಈ ಸಿನೆಮಾ ಪ್ರೀ ರಿಲೀಸ್ ಇವೆಂಟ್(Pre Release Event) ಕಾರ್ಯಕ್ರಮಕ್ಕೆ ಮಾಡಿದ್ದ ವೀಡಿಯೋ ಒಂದು ವೈರಲ್ ಆಗಿದೆ.
ಉಪ್ಪಿ ಕೌಂಟರ್ ಅಟ್ಯಾಕ್
ನಟ ಉಪೇಂದ್ರ ಅವರಿಗೆ ಕಬ್ಜ(Kabzaa) ಸಿನೆಮಾದ ಪತ್ರಿಕಾ ಗೋಷ್ಠಿಯಲ್ಲಿ ಕೆಲವೊಂದಿಷ್ಟು ಪ್ರಶ್ನೆಯನ್ನು ಕೇಳಲಾಗಿದೆ. ಇ ಬಗ್ಗೆ ಕೇಳಿದ್ದ ಪತ್ರಕರ್ತ ರೊಬ್ಬರು ಸರ್ ನೀವು ಎಲ್ಲ ಸಿನೆಮಾಕ್ಕೂ ಒಂದೇ ತರ ಹೇರ್ ಸ್ಟೈಲ್(Hair Style) ಮಾಡ್ತಿರಲ್ಲ ಇದಕ್ಕೆ ನಿರ್ದೇಶಕರಿಗೆ ಒಪ್ಪಿಸಲು ನಿಮಗೆ ಕಷ್ಟವಾಗಿಲ್ಲವಾ ಎಂದೆಲ್ಲ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ್ದ ಉಪೇಂದ್ರ ಅವರು ಸರ್ ನೀವು ಮೊದಲು ನಂಗೆ ಈ ಪ್ರಶ್ನೆ ಕೇಳಿದ್ದು ನನ್ನ ಎಲ್ಲ ಸಿನೆಮಾವನ್ನು ನೋಡಿ ನಾನು ಡಿಫರೆಂಟ್ ಹೇರ್ ಸ್ಟೈಲ್ ಮಾಡ್ತೆನೆ.
ಅಷ್ಟೇಲ್ಲ ಪ್ರಯೋಗಕ್ಕೆ ಒಳಪಟ್ಟರೂ ಕೂಡ ಈ ಹೇರ್ ಇನ್ನು ಹಾಗೇ ಉಳಿದುಕೊಂಡದ್ದು ನಿಜಕ್ಕೂ ಆಶ್ಚರ್ಯವಾಗುತ್ತೆ ಬಿಡಿ. ಬಅದೇ ರೀತಿ ಈಗೆಲ್ಲ ಉದ್ದ ಗಡ್ಡ ಹಾಗೂ ಉದ್ದ ಕೂದಲು ಬಿಡುವುದು ಕಾಮನ್ ಆದರೆ ನಾನು ಆಸ್ಟೈಲ್ ಅನ್ನು ಯಾವುದೊ ಕಾಲಕ್ಕೆ ಮಾಡಿ ಬಿಟ್ಟಿದ್ದೇನೆ ಇವರು ಈಗ ಮಾಡ್ತಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
ಒಟ್ಟಾರೆ ಕಬ್ಜ (Kabzaa) ಈಗ ರಿಲೀಸ್ ಆಗಿದ್ದು ಜನರಿಗೆ ಸಿನಿ ರಸಿಕರಿಗೆ ಈ ಸಿನೆಮಾ ಬಗ್ಗೆ ತುಂಬಾ ನಿರೀಕ್ಷೆ ಮೂಡಿದೆ. ಸಿನೆಮಾ ಪಕ್ಕ ಮಾಸ್ ಆಗಿದೆ ಎಂಬ ಅಭಿಪ್ರಾಯ ಕೂಡ ಹೊರಹೊಮ್ಮಿದ್ದು ಈ ಸಿನೆಮಾವನ್ನು ಸಿನಿ ರಸಿಕರು ಒಪ್ಪಿಕೊಳ್ತಾರ ಅಥವಾ ಇಲ್ಲವಾ ಎಂದು ಕಾದು ನೋಡಬೇಕು. ನೀವು ಉಪೇಂದ್ರ ಅವರ ಅಭಿಮಾನಿಯಾಗಿದ್ದಲ್ಲಿ ಉಪೇಂದ್ರ ಅವರ ಯಾವ ಸಿನೆಮಾದ ಹೇರ್ ಸ್ಟೈಲ್ ನಿಮಗೆ ಇಷ್ಟ ಎಂದು ಕಮೆಂಟ್ ಮಾಡಿ ತಿಳಿಸಿ.