Srinidhi Shetty: ಕೆಜಿಎಫ್ ಶೂಟಿಂಗ್ ಸಮಯದಲ್ಲಿ ಕಿರುಕುಳ ನೀಡಿದ್ದಾರೆ ಎನ್ನುವ ಬಗ್ಗೆ ಸತ್ಯಾಂಶ ಬಾಯ್ಬಿಟ್ಟ ಶ್ರೀನಿಧಿ ಶೆಟ್ಟಿ.
ಚೆಂದನವನದ ಸಿನೆಮಾಗಳು ಇತ್ತೀಚೆಗೆ ಪ್ಯಾನ್ ಇಂಡಿಯಾ ಮಟ್ಟಕ್ಕೆ ದಾಪುಗಾಲಿಟ್ಟಿದೆ. ಅದೇ ರೀತಿ ಇಂತಹ ಸಿನೆಮಾಗಳ ಪೈಕಿ ಮೊದಲು ಫೇಮಸ್ ಆದ ಸಿನೆಮಾ ಯಾವಿದೆಂದಾಗ ನೆನಪಾಗೋದು ಕೆಜಿಎಫ್ KGF. ಈ ಸಿನೆಮಾ ರಿಲೀಸ್ ಗೂ ಮೊದಲೆ ತನ್ನ ಹವಾ ಮೆರೆದು ಬಳಿಕ ಎರಡು ಭಾಗ ಕೂಡ ವಿಭಿನ್ನವಾಗಿ ನೀಡಿ ಪ್ರಪಂಚಕ್ಕೆ ಕನ್ನಡ ಸಿನೆಮಾ ರಂಗದ ಕ್ರಿಯೆಟಿವಿಟಿಯನ್ನು ಪರಿಚಯಿಸಿದೆ.
ಈ ಸಿನೆಮಾ ಇಂದು ಎಲ್ಲರೂ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಕ್ಯಾಮರಾ ವರ್ಕ್ (Camera work) ಹಾಗೂ ಸಿನೆಮಾ ಕತೆ ಎನ್ನಬಹುದು. ನಿರ್ದೇಶಕ ಪ್ರಶಾಂತ್‌ನೀಲ್ (Director Prashanath Neel) ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basruru), ಕಲಾ ನಿರ್ದೇಶಕ ಶಿವಕುಮಾರ್ (Shivakumar) ಛಾಯಾಗ್ರಾಹಕ ಭುವನ್ ಗೌಡ. (Bhuvan Gowda). ರಾಕಿಂಗ್ ಸ್ಟಾರ್ ಯಶ್ (Yash) ನಟಿ ಶ್ರೀನಿಧಿ ಶೆಟ್ಟಿ, ಅನಂತ್ ನಾಗ್ ಸೇರಿದಂತೆ ಬಹುತೇಕ ತಾರಾಗಣ ಕೂಡ ಪ್ಯಾನ್ ಇಂಡಿಯಾ ಮಟ್ಟಕ್ಕೆ ಗುರುತಿಸಲ್ಪಟ್ಟರು. ಈಗ ಇದರ ಬೆನ್ನಲ್ಲ ವಿವಾಧದ ಸುಳಿಯಲ್ಲಿ ಈ ಸಿನೆಮಾ ಹೆಸರು ಸಹ ಕೇಳಿಬರುತ್ತಿದೆ.
ವಿವಾಧದ ಸುಳಿಯಲ್ಲಿ ಕೆಜಿಎಫ್ (KGF)ಬೆಡಗಿ:
ನಟಿ ಶ್ರೀನಿಧಿ ಶೆಟ್ಟಿ ಅವರು ಸದ್ಯ ವಿವಾಧದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಮೂಲಕ ಶ್ರೀನಿಧಿ ಅವರಿಗೆ ಕೆಜಿಎಫ್ ಸಿನೆಮಾ ಶೂಟಿಂಗ್ ವೇಳೆ ಹಲವು ಬಾರಿ ಕಿರುಕುಳವಾಗಿದೆಯಂತೆ ಅದು ಮತ್ಯಾರು ಅಲ್ಲ ಸ್ವತಃ ಸಿನೆಮಾ ನಾಯಕ ರಾಕಿಂಗ್ ಸ್ಟಾರ್ ಯಶ್ ಅವರೇ ಕಿರುಕುಳ ನೀಡಿರುವುದಾಗಿ ಇನ್ನೆಂದಿಗೂ ಅವರೊಂದಿಗೆ ಸಿನೆಮಾ ಮಾಡೊಲ್ಲ ಎಂದು ಶ್ರೀನಿಧಿ ಅವರು ಅವರ ಆಪ್ತರಾದ ಉಮೈರ್ ಸಂಧು (Ummair Sandhu) ಅವರಲ್ಲಿ ಹೇಳಿದ್ದಾರಂತೆ.
ಈ ಮೂಲಕ ಕೆಜಿಎಫ್ ಚಾಪ್ಟರ್ 2 ಮಾಡುವಾಗ ಯಶ್ ಅವರಿಂದ ಸಾಕಷ್ಟು ಬಾರಿ ಕಿರುಕುಳ ಹಾಗೂ ಮುಜುಗರ ಪಟ್ಟಿರುವುದಾಗಿ ಶ್ರೀನಿಧಿ ಹೇಳಿದ್ದಾರೆಂದು ಉಮರ್ ಸಂಧು ಅವರು ತಮ್ಮ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರ ವೈರಲ್ ಆಗುತ್ತಿದ್ದಂತೆ ನಟಿ ಶ್ರೀನಿಧಿ ವಿರುದ್ಧ ಯಶ್ ಅಭಿಮಾನಿಗಳು ಹೋರಾಟ ಮಾಡುತ್ತಿದ್ದು ಈ ಬಗ್ಗೆ ಶ್ರೀನಿಧಿ ಅವರು ಸ್ಪಷ್ಟಣೆ ನೀಡಿದ್ದಾರೆ.
ಏನಂದ್ರು Srinidhi Shetty:
ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದ ಸುದ್ದಿ ದೊಡ್ಡ ಸುಳ್ಳದು. ಈ ಸುದ್ದಿಯನ್ನು ಕೆಲವರು ಪಾಪ್ಯೂಲರ್ ಆಗಲು ಮಾಡುತ್ತಿದ್ದ ಚೀಪ್ ಗಿಮಿಕ್. ನಂಗೆ ಯಶ್ ಸರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ದೊಡ್ಡ ಅದೃಷ್ಟ ಇದ್ದಂತೆ. ಅವರೊಂದಿಗೆ ಇರಲು ಸದಾ ನಾನು ಖುಷಿ ಪಡುತ್ತೇನೆ. ಅವರು ಜಂಟಲ್ ಮ್ಯಾನ್ ನನ್ನ ಸ್ಫೂರ್ತಿಯೇ ಅವರು ನಾನು ಅವರ ದೊಡ್ಡ ಅಭಿಮಾನಿ ಎಂದು ನಟಿ ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.
🌸🙏🏻🤗@TheNameIsYash ⭐️ pic.twitter.com/iAo6xCJjU1
— Srinidhi Shetty (@SrinidhiShetty7) March 16, 2023