ಈ ಕೈ ಐದುಕೋಟಿ ಕನ್ನಡಿಗರ ಆಸ್ತಿ ಎಂದಾಗ ಈ ಡೈಲಾಗ್ ಎಲ್ಲೊ ಕೇಳಿದ್ದ ನೆನಪಾಗುತ್ತೆ ಅದು ಮತ್ಯಾರು ಅಲ್ಲ ನಮ್ಮೆಲ್ಲರ ನೆಚ್ಚಿನ ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರು ಅಭಿನಯಿಸಿದ್ದ ಸಿನೆಮಾ ಅವರಿಗೆ ಈಗಲೂ ಸ್ಥಾನಮಾನವನ್ನು ಕಲ್ಪಿಸುತ್ತದೆ. ಅದೇ ರೀತಿ ಒಂದು ಸಿನೆಮಾದಲ್ಲಿ ಸುದೀಪ್ (Sudeep) ಅವರು ವಿಷ್ಣುವರ್ಧನ್ ನಟಿಸಬೇಕಿದ್ದ ಈ ಸಿನೆಮಾ ನಟಿಸಲು ಒಪ್ಫದೆ ರಿಜೆಕ್ಟ್ ಮಾಡಿ ಆ ಸಿನೆಮಾದ ಇನ್ನೊಂದು ಭಾಗ ಸೂಪರ್ ಹಿಟ್ ಆಗಿದೆ ಎಂಬ ಮಾತು ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ , ಆ ಸಿನೆಮಾ ಯಾವುದು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ.
ಬಹುಪಾತ್ರದಾರಿ ವಿಷ್ಣುದಾದ:
ವಿಷ್ಣುವರ್ಧನ್ ( Vishnuvardhan) ಅವರು ಮೊದಲಿಂದಲೂ ಫೇಮಸ್ ಆಗೋದು ಅವರ ವಿಚಿತ್ರ ಕಾಂಬಿನೇಶನ್ ನ ನಟನೆಯಿಂದ, ಯಜಮಾನ (Yajamana) ನೋಡಿದ ಬಳಿಕ ಮನೆಯೆಂದರೆ ಹೀಗಿರಬೇಕು, ಅಣ್ಣ ತಮ್ಮಂದಿರು ಜೊತೆಯಾಗಿರಬೇಕು ಅನ್ನೊ ಪರಿಕಲ್ಪನೆ ಬೆಳೆಯುತ್ತದೆ. ಇದೇ ರೀತಿ ಇನ್ನೊಂದು ಸಿನೆಮಾ ಎಂದರೆ ತ್ರಿಪಾತ್ರದಲ್ಲಿ ನಟಿಸಿದ್ದ ಸಿಂಹಾದ್ರಿಯ ಸಿಂಹ. ಇದರಲ್ಲಿ ಗಟ್ಟಿ ನ್ಯಾಯ ತೀರ್ಪು ಹೇಳೊ ನಾಯಕನು ಅವರೇ ಅದೇ ರೀತಿ ನಾಯಕಿಗೆ ಮಲೆನಾಡ ಅಡಿಕೆ ತಿನ್ನಿಸುವ ಪೊರನು ಅವರೆ.
ಅಬ್ಬ ಅದೊಂದು ಸಿನೆಮಾ ಮಾತ್ರ ಇವರ ಸಿನಿ ಜರ್ನಿಯನ್ನೆ ಬದಲಿಸಿತು. ಅದೇ ರೀತಿ ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದ ಸೂರ್ಯವಂಶ ಹಾಗೂ ಸಿಂಹಾದ್ರಿಯ ಸಿಂಹ ಈ ಎರಡು ಸಿನೆಮಾ ಸೂಪರ್ ಹಿಟ್ ಆಗಿತ್ತು. ಆದರೆ ಈಗ ಬಂದ ವಿಚಾರ ಎಂದರೆ ಅದು ಸಿಂಹಾದ್ರಿಯ ಸಿಂಹ ಭಾಗ 2.
ಪಾರ್ಟ್ 2:
ಸಿಂಹಾದ್ರಿಯ ಸಿಂಹ ಭಾಗ 2 (Simhadriya simha part 2) ನಟಿಸಲು ವಿಷ್ಣುವರ್ಧನ್ ಅವರು ಬದುಕಿದ್ದಾಗಲೇ ಪ್ರಯತ್ನಿಸಲಾಯಿತು. ಈ ಮೂಲಕ ಆ ಪ್ರಯತ್ನ ಈಡೇರುವ ಮೊದಲೇ ವಿಷ್ಣುವರ್ಧನ್ ಇಹಲೋಕ ತ್ಯಜಿಸಿದರು. ಈ ಮೂಲಕ ನಂತರದ ತಲೆಮಾರಿಗೆ ಈ ಸಿನೆಮಾ ಒಪ್ಪಿಸಲು ಮುಂದಾಗಲಾಯ್ತು ಆಗ ನೆನಪಾಗಿದ್ದು ಕಿಚ್ಚ ಸುದೀಪ್ ಅವರು. ಹೀಗೆ ಕತೆ ಸಿದ್ಧ ಮಾಡಿ ಅದನ್ನು ಎಸ್ ನಾರಾಯಣ್ ಅವರು ಕಿಚ್ಚ ಸುದೀಪ್ ಅವರಿಗೆ ತಿಳಿಸಿದ್ದು ಇನ್ನೆನೂ ಶೂಟಿಂಗ್ ಆರಂಭಿಸಬೇಕು ಅನ್ನೊ ಹೊತ್ತಿಗೆ ಎಲ್ಲ ತಲೆಕೆಳಗಾಯಿತು.
ನಿರ್ಮಾಪಕರಾದ ವಿಜಯ್ ಕುಮಾರ್ ನಿಧನವಾದ ಬಳಿಕ ಈ ಸಿನೆಮಾ ವಿಚಾರ ಕಂಪ್ಲೀಟ್ ಬದಿಗೆ ಹೋಯಿತು ಈ ಮೂಲಕ ಸಿನೆಮಾ ಸೆಟ್ ಏರಿದರೆ ಒಳ್ಳೆದಿತ್ತು ಎಂಬ ಕೆಲವರ ಅಭಿಪ್ರಾಯದಿಂದ ಮುಂದಿನ ದಿನದಲ್ಲಿ ಈ ಸಿನೆಮಾ ಬರುವ ಸಾಧ್ಯತೆ ಕೂಡ ಇದೆ ಅಂತೆ. ನೀವು ಕಿಚ್ಚ ಸುದೀಪ್ ಅಭಿಮಾನಿಯಾಗಿದ್ದರೆ ಅವರು ವಿಷ್ಣು ವರ್ಧನ್ ಜೊತೆ ಯಾವ ಸಿನೆಮಾದಲ್ಲಿ ನಟಿಸಿದ್ದರೆ ನೋಡಲು ಖುಷಿಯಾಗುತ್ತಿತ್ತೆಂದು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.