Kabzaa Movie: ಕಬ್ಜ ಕೆಜಿಎಫ್ ತರ ಇದೆ ಎಂದವರಿಗೆ ಮುಖ ಮುಚ್ಚಿಕೊಳ್ಳುವ ಉತ್ತರ ಕೊಟ್ಟ ಉಪೇಂದ್ರ
ಭಾರತ ಚಿತ್ರರಂಗದ (Indian Filim Industry) ರಿಯಲ್ ಸ್ಟಾರ್ ಉಪೇಂದ್ರ (Upendra) ರವರು ಸದ್ಯ ಕಬ್ಜ (Kabzaa) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಹಳಾನೇ ಬ್ಯುಸಿಯಾಗಿದ್ದಾರೆ ಎನ್ನಬಹುದು. ಇನ್ನು ಬಹಳ ಡಿಫರೆಂಟ್ ಗೆಟಪ್ ಹಾಗೂ ಸಿನಿಮಾ (Movie)ಮೂಲಕ ತೆರೆಯ ಮೇಲೆ ಅಬ್ಬರಿಸಲು ನಮ್ಮ ಉಪ್ಪಿ ರೆಡಿಯಾಗಿದ್ದಾರೆ. ಸದ್ಯ ಈ ನಡುವೆ ಕೆಜಿಎಫ್ (KGF) ಚಿತ್ರವನ್ನ ಕಬ್ಜ (Kabza) ಚಿತ್ರಕ್ಕೆ ಹೋಲಿಸಿ ಮಾತನಾಡುವವರಿಗೆ ಉಪ್ಪಿ ಪ್ರತಿಕ್ರಿಯಿಸಿದ್ದಾರೆ. ಮಾ.17ರ ಶುಕ್ರವಾರದಂದು ಕಬ್ಜ ಚಿತ್ರ ಬಹುಭಾಷೆಗಳಲ್ಲಿ ಅಬ್ಬರಿಸಲು ರೆಡಿಯಾಗಿದ್ದು ಸಿನಿಮಾ ಭರ್ಜರಿ ಪ್ರಚಾರ ಸಹ ನಡೆದಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ (Mumbai) ಬೀಡು ಬಿಟ್ಟಿದ್ದ ಕಬ್ಜ ಟೀಂ(Kabza Team) ಇದೀಗ ಚಿತ್ರದ ಬಗ್ಗೆ ಹರಡಿದ್ದ ವದಂತಿಗಳಿಗೆ ಉಪೇಂದ್ರ ಉತ್ತರಿಸಿದ್ದಾರೆ.
ಹೌದು ಟೀಸರ್ ಟ್ರೈಲರ್ ನೋಡಿದ ಬಹುತೇಕರು ಕೆಜಿಎಫ್ʼ (KGF) ಚಿತ್ರಕ್ಕೆ ಹೋಲಿಸಿ ಮಾತನಾಡಿದ್ದರು. ಇದೀಗ ನಟ ಉಪ್ಪಿ ಈ ಬಗ್ಗೆ ಮಾತನಾಡಿದ್ದು ಕೆಜಿಎಫ್ ಸಿನಿಮಾದೊಂದಿಗೆ ಕಬ್ಜ ಸಿನಿಮಾವನ್ನು ಹೋಲಿಸಬೇಡಿ. ಹೌದು ಎರಡೂ ಬೇರೆ-ಬೇರೆ ರೀತಿಯ ಸಿನಿಮಾಗಳಾಗಿದ್ದು ಟೀಸರ್ ನೋಡಿದ ಹಲವರು ಕೆಜಿಎಫ್ ಸಿನಿಮಾದಂತಿದೆ ಎಂದಿದ್ದರು ಆದರೆ ಟ್ರೈಲರ್ (Trailer) ನೋಡಿದ ನಂತರ ಗೊತ್ತಾಗಿದೆ ಅದೇ ಬೇರೆ ಕತೆ ಇದೇ ಬೇರೆ ಕತೆ ಎಂಬುದು. ಹೌದು ಸಿನಿಮಾದ ಲುಕ್ ಫೀಲ್ ಒಂದೇ ಥರ ಇದೆಯಾದರೂ ಎರಡೂ ಸಂಪೂರ್ಣ ಬೇರೆಯದ್ದೇ ಕತೆಗಳು ಎಂದಿದ್ದಾರೆ.
ಇನ್ನು ಸಿನಿಮಾದ ಟೀಸರ್(Teaser) ಬಿಡುಗಡೆ ಆದಾಗಲಂತೂ ಕೆಜಿಎಫ್ ಕತೆಯನ್ನೇ ಕಬ್ಜ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಚರ್ಚೆಯಾಗಿತ್ತು ಆಗ ಮಾತನಾಡಿದ್ದ ಉಪೇಂದ್ರ ರವರು ಕೆಜಿಎಫ್ ಥರ ಸಿನಿಮಾ ಮಾಡಿ ಅಂತಾರೆ ಕೆಜಿಎಫ್ ಥರ ಮಾಡಿದರೆ ಕೆಜಿಎಫ್ ಥರಹ ಮಾಡಿದ್ದೀರಿ ಅಂತಾರೆ. ಏನು ಮಾಡಿದರೂ ಕೆಲವರು ಟೀಕೆ ಮಾಡ್ತಾರೆ ಎಂದು ತಮಾಷೆ ಮಾಡಿದ್ದರು. ಇದೀಗ ಮಾತನಾಡಿರುವ ಉಪ್ಪಿ ಜನ ಹೇಳ್ತಿದ್ರು ತಾಕತ್ ಇದ್ರೆ ಕೆಜಿಎಪ್ ತರ ಒಂದ್ ಸಿನಿಮಾ ಮಾಡಿ ತೋರ್ಸಿ ಅಂತಾ.
ಈಗ ಚಂದ್ರು ಹೇಳ್ತಾರೆ ನೋಡಿ ಮಾಡಿ ತೋರಿಸಿದ್ದೀನಿ ಅಂತಾ ಎಂದು ನಗುತ್ತಾ ಮಾತನಾಡಿದ ಉಪ್ಪಿ ಹಾಗಲ್ಲ ಕೆಜಿಎಫ್ ನ ಇನ್ನೊಂದ್ ಸಿನಿಮಾ ಮಾಡೋಕೆ ಆಗಲ್ಲ. ಕೆಜಿಎಫ್ ಗೆ ಅದರದ್ದೇ ಆದಂತಹ ವಾಲ್ಯೂ ಇದೆ. ಒಂದು ಇನ್ಸ್ಪಿರೇಷನ್ ನಲ್ಲಿ(Inspiration) ಮಾಡೋದು ತಪ್ಪಲ್ಲ. ಅವಾಗ್ಲೆ ತಾನೇ ಟ್ರೆಂಡ್ ಸೆಟ್ಟರ್ ಹುಟ್ಕೊಳ್ಳೊದು. ಆ ರೀತಿಯಾ ಮೂವಿ ಕೆಜಿಎಫ್. ಇದು ಕೆಜಿಎಫ್ ಅಲ್ಲ ಬೇರೆ ಕಥೆ ಇದೆ ಅನ್ನೋದು ಟ್ರೈಲರ್ ನೋಡಿದ ಮೇಲೆ ಎಲ್ಲರಿಗೂ ಗೊತ್ತಾಗಿದೆ ಎಂದಿದ್ದಾರೆ ಉಪ್ಪಿ.
ಇನ್ನು ಚಿತ್ರದಲ್ಲಿ ಬ್ರಿಟೀಷ್ ಕಾಲದ ಕತೆ ಸ್ವಾತಂತ್ರ‍್ಯ ಹೋರಾಟ ನಂತರದ ಕತೆ ಇರುವ ಸುಳಿವನ್ನು ಟ್ರೈಲರ್ ನೀಡಿದ್ದು ದೇಶ ಪ್ರೇಮ ವ್ಯವಸ್ಥೆಯ ವಿರುದ್ಧ ಹೋರಾಟ ಪಾತಕ ಲೋಕ ತಾಯಿ ಸೆಂಟಿಮೆಂಟ್ ಬ್ರದರ್ ಸೆಂಟಿಮೆಂಟ್ ಎಲ್ಲವನ್ನೂ ಕೂಡ ಕಬ್ಜನಲ್ಲಿ ಆರ್. ಚಂದ್ರು ಟಚ್ ಮಾಡಿದ್ದಾರೆಂಬುದು ಟ್ರೈಲರ್‌ನಿಂದ ತಿಳಿದು ಬರುತ್ತಿದೆ. ಇನ್ನು ಟ್ರೈಲರ್‌ನಲ್ಲಿ ಕುತೂಹಲ ಹುಟ್ಟಿಸಿರುವ ಸಂಗತಿಯೆಂದರೆ ಉಪೇಂದ್ರ ರವರು ಪೊಲೀಸ್ ಧಿರಿಸಿನಲ್ಲಿ ಕಾಣಿಸಿಕೊಂಡಿರುವುದು. ಹೌದು ಕಬ್ಜ ಸಿನಿಮಾದ ಪೋಸ್ಟರ್ ಟೀಸರ್‌ಗಳಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು ಈ ಚಿತ್ರದಲ್ಲಿ ಸುದೀಪ್ (Sudeep) ಮತ್ತು ಶಿವಣ್ಣ (Shivarajkumar) ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಎಲ್ಲದಕ್ಕೂ ಅಪ್ಪು (Appu) ಹುಟ್ಟುಹಬ್ಬದ (Birthday) ದಿನ ಮಾರ್ಚ್ 17ಕ್ಕೆ ಉತ್ತರ ಸಿಗಲಿದೆ.