Kabzaa Movie: ಕಬ್ಜ ಸಿನಿಮಾ ಆಸ್ಕರ್ ಆವಾರ್ಡ್ ಪಡೆಯಲಿದ್ಯಾ ಕೇಳಿದ್ದಕ್ಕೆ ಉಪೇಂದ್ರ ಉತ್ತರ ಹೀಗಿತ್ತು.
ಉಪೇಂದ್ರ (Upendra) ನಟನೆಯ ಕಬ್ಜ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ, ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಕನ್ನಡದ ಕಬ್ಜ ಹೇಗಿದೆ ಎಂದು ನೋಡಲು ಅಭಿಮಾನಿಗಳು ಮೋಸ್ಟ್ ಥ್ರಿಲ್ ಆಗಿದ್ದಾರೆ, ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಅಭಿಮಾನಿಗಳು ಕಬ್ಜ ನೋಡಿ ಸಂಭ್ರಮಿಸುತ್ತಿದ್ದಾರೆ.
1945 ರಿಂದ 1987 ರ ಕಾಲಘಟ್ಟದಲ್ಲಿ ನಡೆಯೋ ಕಥೆ , ಒಂದು ಕಡೆ ಸ್ವತಂತ್ರ ಪೂರ್ವ ಮತ್ತೊಂದು ಕಡೆ ಸ್ವತಂತ್ರದ ನಂತರ ಭಾರತ ಹೇಗಿತ್ತು ಅನ್ನುವುದು ಚಿತ್ರದಲ್ಲಿದೆ. ಉಪ್ಪಿ (Uppi) ಶಿವಣ್ಣ (Shivanna) ಹಾಗೂ ಕಿಚ್ಚ (Kiccha) ನಟನೆಯ ಕಬ್ಜ ಸಿನಿಮಾ ಕ್ರಿಯೇಟಿವ್ ಆಗೇ ಇದೆ, ಚಿತ್ರದಲ್ಲಿ ಮಾಸ್ ಮತ್ತು ಕ್ಲಾಸ್ ಟಚ್ ಇದೆ ಎನ್ನಬಹುದು. ಕಬ್ಜ ಸಿನಿಮಾದಲ್ಲಿ ಮೂವರ ರೋಲ್ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದೆ. ಈ ಚಿತ್ರ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ ಬಹುಭಾಷೆಗಳಲ್ಲಿ ಚಿತ್ರ ಇಂದು ತೆರೆ ಕಾಣುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ರಾರಾಜಿಸುವ ಕಾಟೌಟ್
ಸಿಲಿಕಾನ್ ಸಿಟಿಯ ಹಲವು ಚಿತ್ರಮಂದಿರಗಳಲ್ಲಿ ಶಿವಣ್ಣ, ಉಪೇಂದ್ರ, ಕಿಚ್ಚ ಸುದೀಪ್ ಅವರ ದೊಡ್ಡ ದೊಡ್ಡ ಕಟೌಟ್‌ಗಳು ತಲೆ ಎತ್ತಿನಿಂತಿವೆ. ಅದರ ಜೊತೆ ಪುನೀತ್ ಕಟೌಟ್ ಕೂಡ ಇದೆ, ರಸ್ತೆಯುದ್ದಕ್ಕೂ ಕಬ್ಜ ಚಿತ್ರದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಅಭಿಮಾನಿಗಳು ಟಿಕೆಟ್ ಹಿಡಿದು ಕಾಯ್ತಾ ಇದ್ದಾರೆ ಎನ್ನಬಹುದು.
ಕಬ್ಜಗೆ ಆಸ್ಕರ್ ಬರಲಿದೆಯಾ? ಉಪ್ಪಿ ಏನಂದ್ರು
ಕಬ್ಜ ಚಿತ್ರದ ಬಗ್ಗೆ ಸಂದರ್ಶನ ದಲ್ಲಿ ವ್ಯಕ್ತಿಯೊಬ್ಬರು ಕಬ್ಜ ಎಲ್ಲೆಡೆ ಭಾರಿ ಹವಾ ಗಿಟ್ಟಿಸಿಕೊಂಡಿದೆ. ನಿಮ್ಮ ನಿರೀಕ್ಷೆ ಹೇಗೆ? ಆಸ್ಕರ್ ಆವಾರ್ಡ್ ಬರಬಹುದಾ, ತ್ರಿಬಲ್ ಆರ್(RRR) ಈಗಾಗಲೇ ಪ್ರಶಸ್ತಿಗಳ ಸುರಿಮಳೆ ಕಂಡಿದೆ.ಕನ್ನಡದಲ್ಲಿ ಕಬ್ಜ ಮೈಲಿಗಲ್ಲು ಸೃಷ್ಟಿಸಬಹುದಾ ಕೇಳಿದ್ದಕ್ಕೆ ಉಪೇಂದ್ರ ಅವರು ಯಾವತ್ತು ನಿರೀಕ್ಷೆ ಇರಬಾರು ಒಪ್ಪಿಕೊಳ್ಳುವ ಗುಣ ನಮ್ಮಲಿರಬೇಕು. ಜನ ಈ ಸಿನಿಮಾವನ್ನು ಮೆಚ್ಚಿದಾರೆ ಸಾಕು, ಅವರ ಚಪ್ಪಾಳೆ, ವಿಸಿಲ್ ನಮಗಷ್ಟೆ ಸಾಕು ಎಂದಿದ್ದಾರೆ
ದಿನ ಕಳೆದಂತೆ ಒಂದೊಂದೇ ಅಪ್‌ಡೇಟ್(Update) ಮೂಲಕ ಕಬ್ಜ ಭಾರಿ ಹವಾ ಕ್ರಿಯೇಟ್ ಮಾಡಿತ್ತು. ಈ ನಿಟ್ಟಿನಲ್ಲಿ ಪ್ಯಾನ್ ಇಂಡಿಯಾ(Pan India) ಲೆವೆಲ್‌ನಲ್ಲಿ ಸದ್ದು ಮಾಡೋದದ್ದು ಪಕ್ಕಾ ,ಉಪೇಂದ್ರ ಜೊತೆಗೆ ಶಿವಣ್ಣ, ಸುದೀಪ್ ಹೆಸರು ಯಾವಾಗ ಕೇಳಿಬಂತೋ, ಆಗ ಫ್ಯಾನ್ಸ್ ಥ್ರಿಲ್ ಆದರು. ಇವರ ಜೊತೆಗೆ ಇನ್ನೂ ಅನೇಕ ಕಲಾವಿದರು ಇದ್ದಾರೆ, ಬಹುಭಾಷಾ ನಟಿ ಶ್ರೀಯಾ ಶರಣ್ ಅವರು ಕೂಡ ಇದ್ದಾರೆ. ಕಿಚ್ಚ ಸುದೀಪ್(Sudeep) ಹಾಗೂ ಶಿವಣ್ಣ 10ರಿಂದ 15 ನಿಮಿಷ ಬಂದು ಹೋಗುತ್ತಾರೆ. ಕೆಜಿಎಫ್ನಂತಹ ಸಿನಿಮಾ ಲೆವೆಲ್ಗೆ ಈ ಸಿನಿಮಾ ಇಲ್ಲ. ಈ ಸಿನಿಮಾ ಕೆಜಿಎಫ್ ವೈಬ್ಸ್ ಕೊಡುತ್ತದೆ ಎಂದು ಟ್ವಿಟರ್ ರಿವ್ಯೂ ಬಂದಿದೆ.