ಅಗ್ನಿ ಸಾಕ್ಷಿ ಸನ್ನಿಧಿ ಎಂದಾಗ ಮುದ್ದು ಮುಖದ ಚೆಲುವೆ ನಟಿ ವೈಷ್ಣವಿ ಗೌಡ. (Vaishnavi gowda) ಅವರು ನೆನಪಾಗುತ್ತಾರೆ. ಅದೇ ರೀತಿ ವೈಷ್ಣವಿ ಗೌಡ ಅವರಿಗೆ ಬಹುತೇಕ ಫ್ಯಾನ್ಸ್ ಫಾಲೋವರ್ಸ್ (Fan Followers) ತುಂಬಾ ಇದ್ದಾರೆ. ಹಾಗೇಯೇ ವೈಷ್ಣವಿ ಅವರು ಬಹುಮುಖ ಪ್ರತಿಭೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಂತೂ ಮದುವೆ ನಿಶ್ಚಿತಾರ್ಥದ ವಿಚಾರವಾಗಿ ಸಾಕಷ್ಟು ಗಾಸಿಪ್ ಆದ ಇವರು ಯೂಟ್ಯೂಬ್ ಚಾನೆಲ್ (You tube Channel) ಮೂಲಕ ಹಲವಾರು ಮನೋರಂಜನೆಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.
ಬಹುಮುಖ ಪ್ರತಿಭೆ:
ವೈಷ್ಣವಿ ಗೌಡ ಅವರು ಡ್ಯಾನ್ಸಿಂಗ್ ನಲ್ಲಿ (Dancing )ಟಾಪ್ ಲೆವೆಲ್ನಲ್ಲಿದ್ದಾರೆ. ಅದೇ ರೀತಿ ದೇವಿ (Devi) ಧಾರವಾಹಿ ಮೂಲಕ ಜನಮಾನ್ಯತೆ ಪಡೆದ ಇವರು ಪುನರ್ ವಿವಾಹ ಹಾಗೂ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅದೇ ರೀತಿ ಈ ಧಾರವಾಹಿ ಬಳಿಕ ಒಂದೆರೆಡು ರಿಯಾಲಿಟಿ ಶೋ ನಲ್ಲೂ ಫೇಮಸ್ ಆದರು. ಬಳಿಕ ಲಕ್ಷಣ ಧಾರವಾಹಿಯಲ್ಲಿ ಸಣ್ಣ ರೋಲ್ ಮಾಡಿ ಅತಿಥಿ ಪಾತ್ರ ನಿಭಾಯಿಸಿದ್ದರು ತದ ನಂತರ ಸ್ವಪ್ನಕೃಷ್ಣ ನಿರ್ದೇಶನದ ಸೀತಾರಾಮ (Sitharama) ಧಾರಾವಾಹಿಯಲ್ಲಿ ಸದ್ಯ ನಟಿಸುತ್ತಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು ಅದರ ಮೂಲಕ ಜನರನ್ನು ಅಂದರೆ ಅವರ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಟ್ರೆಂಡ್ ಆದ ಪೋಸ್ಟ್:
ವೈಷ್ಣವಿ ಅವರು ಆಗಾಗ ಟಿಕ್ ಟಾಕ್ (Tik Tok) ಮಾಡಿ ಫೇಮಸ್ ಆಗಿದ್ದು ಇತ್ತೀಚೆಗಷ್ಟೆ ತಮ್ಮ ತಾಯಿಯ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ವೈಷ್ಣವಿ ಅವರ ತಾಯಿ ಭಾನು (Bhanu Ravikumar) ಅವರು ಕೋಟ್ ಧರಿಸಿ ಕೋರ್ಟ್ ಹೋಗಲು ಸಿದ್ಧರಾದವರಂತೆ ಕಂಡಿದ್ದಾರೆ. ಅದರಲ್ಲಿ ನಮ್ಮ ಮನೆಯಲ್ಲಿ ವಕೀಲೆ ಇದ್ದಾರೆ. ವಯಸ್ಸು ಅನ್ನೋದು ನಂಬರ್ ಅಷ್ಟೇ ಅಂತ ನನಗೆ ನೀವು ಹೇಳುತ್ತಿದ್ದೀರಿ. ಈಗ ನೀವು ಮಾಡಿದ ಸಾಧನೆ ಕಂಡು ನಂಗೆ ಹೆಮ್ಮೆ ಆಗುತ್ತಿದೆ. ನಿಮ್ಮ ವ್ಯಕ್ತಿತ್ವ ನಮಗೆಲ್ಲ ಸ್ಫೂರ್ತಿ ಇದ್ದಂತೆ ಎಂದು ವೈಷ್ಣವಿ ಗೌಡ ಬರೆದುಕೊಂಡಿದ್ದಾರೆ. ಈ ಮೂಲಕ ಅವರ ಅಭಿಮಾನಿಗಳು ಸೂಪರ್ , ಅಭಿನಂದನೆ ಮೇಡಂ ಎಂದೆಲ್ಲ ಕಮೆಂಟ್ ಮಾಡಿದ್ದಾರೆ