Dhruva Sarja: ಹಬ್ಬದ ದಿನವೇ ಗಂಡು ಮಗುವಿಗೆ ತಂದೆಯಾದ ಧ್ರುವ ಸರ್ಜಾ! ಇಡಲಿರುವ ಹೆಸರೇನು ಗೊತ್ತಾ?
ಸ್ಯಾಂಡಲ್ ವುಡ್ ನ ಮಾಸ್ ಹೀರೋ ದ್ರುವಾ ಸರ್ಜಾ (Dhruva Sarja) ಅವರು ಮಾಡಿದ್ದು ಬೆರಳೆಣಿಕೆಯ ಸಿನೆಮಾ ಆದರೂ ಮಾಡಿದ್ದ ಎಲ್ಲ ಸಿನೆಮಾ ಕೂಡ ಸುಪ್ರಸಿದ್ಧವಾಗಿದ್ದೇ ಆಗಿದೆ. ಈ ಮೂಲಕ ತಮ್ಮದೇ ಆದ ಫ್ಯಾನ್ ಬಳಗವನ್ನು ಕೂಡ ಇವರು ಹೊಂದಿದ್ದಾರೆ. ಕಳೆದ ಕೆಲ ವರ್ಷದಿಂದ ಇವರ ಕುಟುಂಬಕ್ಕೆ ಅಣ್ಣ ಚಿರಂಜೀವಿ ಸರ್ಜಾ (Chiranjeevi Sarja) ಅವರ ಅಕಾಲಿಕ ಮರಣ ಬಹಳ ಆಘಾತ ನೀಡಿದ್ದು ಇದೀಗ ನಿಧಾನವಾಗಿ ಆ ನೋವಿನಿಂದ ಹೊರಬರುವ ಪ್ರಯತ್ನದಲ್ಲಿ ದ್ರುವ ಸರ್ಜಾ ಅವರ ಕುಟುಂಬ ಇದೆ.
ದ್ರುವ ಸರ್ಜಾ ಅವರಿಗೆ ಮೊದಲಿಂದಲೂ ಅಣ್ಣನೆಂದರೆ ಅಚ್ಚುಮೆಚ್ಚು. ಅತೀ ಚಿಕ್ಕ ವಯಸ್ಸಿಗೆ ಚಿರು ಅಗಲಿಕೆ ಆದದ್ದು ಎಲ್ಲರಿಗೂ ದೊಡ್ಡ ಆಘಾತ ವಾಗಿತ್ತು ಬಳಿಕ ದ್ರುವಾ ಅತ್ತಿಗೆ ಮೇಘನಾ ಅವರಿಗೆ ಗಂಡು ಮಗ ಜನಿಸಿದ್ದು ಅಣ್ಣನೇ ಮರಳಿ ಬಂದ ಎಂದು ಖುಷಿಯಲ್ಲಿ ಆತನ ಕುಟುಂಬ ಆ ಮಗುವಿನ ಆರೈಕೆಯಲ್ಲಿ ಈಗಲೂ ಇದೆ. ರಾಯನ್ ಸರ್ಜಾ (Rayan Sarja) ಬಳಿಕ ಮೇಘನಾ (Meghana) ಕುಟುಂಬಕ್ಕೂ ಒಂದು ಬಲಸಿಕ್ಕಂತಾಗಿದ್ದು ಇದೀಗ ಮತ್ತೆ ಪುಟ್ಟ ಮಗುವಿನ ಆಗಮನ ಆಗಿದ್ದು ಚಿರಂಜೀವಿ ಸರ್ಜಾ ಕುಟುಂಬಕ್ಕೆ ಬಂಪರ್ ಸುದ್ದಿ ಬಂದಂತಾಗಿದೆ.
ನಟ ದ್ರುವಾ ಸರ್ಜಾ (Dhruva Sarja) ಅವರು ಎರಡನೇ ಮಗುವಿಗೆ ತಂದೆಯಾಗುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಅನೇಕ ಪೋಸ್ಟ್ ಹಾಗೂ ವೀಡಿಯೋ (Video and Post) ಹಾಕಿದ್ದು ನಮಗೆಲ್ಲ ತಿಳಿದೆ ಇದೆ. ದ್ರುವಾ ಅವರ ಪತ್ನಿ ಪ್ರೇರಣಾ ಅವರು ಸೆಪ್ಟೆಂಬರ್ 18 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ಈ ಮೂಲಕ ಗೌರಿ ಗಣೇಶ ಹಬ್ಬದಂದೆ ಪುಟ್ಟ ಗಣಪನ ಆಗಮನ ಅವರ ಕುಟುಂಬಕ್ಕೆ ಸಂತಸ ತಂದಿದೆ.
ಹೇಗಿದ್ದಾರೆ ಪ್ರೇರಣಾ?
ಪತ್ನಿ ಪ್ರೇರಣಾ (Prerana) ಅವರು ಬಸವನ ಗುಡಿ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ. ಮೊದಲ ಮಗು ಹೆಣ್ಣು ಈಗ ಗಂಡು ಆರತಿಗೊಂದಿ ಕೀರ್ತಿಗೊಂದು ಎಂಬ ಸಂಭ್ರಮದಲ್ಲಿ ಪ್ರೇರಣಾ ಮತ್ತು ದ್ರುವಾ ಸರ್ಜಾ ಅವರ ಕುಟುಂಬ ಇದೆ. ಹಬ್ಬದ ದಿಬದಂದೆ ಜನಿಸಿದ್ದ ಕಾರಣ ಕುಟುಂಬದ ಹಬ್ಬದ ಖುಷಿ ಈ ಮೂಲಕ ಇಮ್ಮಡಿಯಾಗಿದೆ.
ಚಿರು ಹೆಸರು ಇಡುವ ಸಾಧ್ಯತೆ:
ದ್ರುವಾ ಸರ್ಜಾ (Dhruva Sarja) ಅವರು ತಮ್ಮ ಮಗನಿಗೆ ಚಿರಂಜೀವಿ ಸರ್ಜಾ (Chiranjeevi Sarja) ಅವರ ಹೆಸರು ಇಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಚಿರು ಸಮಾಧಿ ಇರುವ ಜಾಗದ ಹತ್ತಿರವೇ ಪ್ರೇರಣಾ ಸೀಮಂತ ಕಾರ್ಯ ಮಾಡಿದ್ದ ಮತ್ತೆ ಅಣ್ಣನ ಆಗಮನ ಆಗಿದೆ ಎಂಬ ಖುಷಿಯಲ್ಲಿ ಅವರ ಕುಟುಂಬ ಇದೆ. ಈ ಮೂಲಕ ಚಿರು ಹೆಸರಿನ ಅರ್ಥ ಬರುವ ಹೆಸರು ಅಥವಾ ಚೌತಿಯಲ್ಲಿ ಜನಿಸಿದ್ದ ಕಾರಣ ಗಣೇಶನ ವಿಶೇಷ ಗುಣದ ಹೆಸರು ಇಲ್ಲವೇ ಮಾಡರ್ನ್ ಹೆಸರು ಇಡುವ ಸಾಧ್ಯತೆ ಇದೆ ಎನ್ನಬಹುದು.