ಸ್ಯಾಂಡಲ್ ವುಡ್ ನ ಕ್ಯೂಟೆಸ್ಟ್ ಕಪಲ್ ಎಂದಾಗ ನೆನಪಾಗೋದು ಸಿಂಹ ಪ್ರಿಯ (Simha Priya) ಜೋಡಿ. ಈ ಸಿಂಹ ಪ್ರಿಯ ಜೋಡಿ ಯಾವಾಗಿನಿಂದಲೂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು ಅದೇ ರೀತಿ ಜನವರಿ 26 ಕ್ಕೆ ವಸಿಷ್ಠ ಸಿಂಹ (Vasishta Simha) ಅವರ ಜೊತೆ ಮದುವೆಯಾದ ಇವರು ಸ್ಯಾಂಡಲ್ ವುಡ್ ನಲ್ಲಿ ದಿ ಬೆಸ್ಟ್ ಪೇರ್ ಎಂಬ ಬಿರುದಿನೊಂದಿಗೆ ನಾಮಾಂಕಿತರಾಗಿದ್ದಾರೆ. ಅದೇ ರೀತಿ ಈ ಪೇರ್ ಈಗ ಖಷಿ ಸುದ್ದಿ ನೀಡುತ್ತಿದ್ದಾರೆಂದು ಎಲ್ಲಡೆ ಸುದ್ದಿ ಹಬ್ಬಿದೆ.
ಕುತೂಹಲಕಾರಿ ಹೆಚ್ಚಿಸಿದ್ದ ಪೋಸ್ಟ್:
ನಟಿ ಹರಿಪ್ರಿಯಾ (Actress Haripriya) ಅವರು ಇತ್ತೀಚೆಗೆ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದು ಈ ಮೂಲಕ ತಮ್ಮ ಖುಷಿಯ ವಿಚಾರವನ್ನು ಅಭಿಮಾನಿಗಳ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಒಂದು ಹ್ಯಾಪಿ ನ್ಯೂಸ್ ಇದೆ. ನೀವೆಲ್ಲರೂ ಏನೆಂದು ತಿಳಿಯುವ ಕುತೂಹಲದಿಂದ ಈಗ ಇದ್ದಿರಬಹುದು. ಅದನ್ನು ನಾನಾಗೇ ಘೋಷಿಸುವ ಮೊದಲು ನೀವು ಒಂದು ಗೆಸ್ ಮಾಡಿ ಎಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಜನರು ಹಾಗೂ ಅವರ ಅಭಿಮಾನಿಗಳು ಸಿಂಹಪ್ರಿಯ ಬಾಳಲ್ಲಿ ಮುದ್ದು ಕಂದಮ್ಮ ಬರುತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಮತ್ತು ನೀವು ತಾಯಿ ಯಾಗ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಹರಿಪ್ರಿಯಾ ಅವರು ಮದುವೆಯಾದ ಖುಷಿಯನ್ನು ಪೋಸ್ಟ್ ಹಾಕಿದ್ದು ಸಹ ಸಾಕಷ್ಟು ಲೈಕ್ಸ್ ಪಡೆದಿತ್ತು. ಆದರೆ ಸದ್ಯ ಹಾಕಿದ್ದ ಪೋಸ್ಟ್ ಸತ್ಯ ಅಸತ್ಯತೆ ಬಗ್ಗೆ ಎಲ್ಲಿಯೂ ಮಾತಾಡಿಲ್ಲ ಎನ್ನಬಹುದು.
ಒಟ್ಟಾರೆಯಾಗಿ ಹರಿಪ್ರಿಯ (Haripriya) ಈಗ ಹಂಚಿಕೊಂಡ ಸಿಹಿಸುದ್ದಿ ಎಂಬ ಸಂಗತಿಯೂ ಅವರ ಮುಂದಿನ ಸಿನೆಮಾ ಬಗ್ಗೆ ಇದ್ದ ಮಾಹಿತಿ ಇರಬೇಕು ಅಥವಾ ಹೊಸ ಸಿನೆಮಾ ಆಫರ್ ಹರಿಪ್ರಿಯಾ ಅವರಿಗೆ ಬಂದಿರಬೇಕು ಎಂಬ ಅಭಿಪ್ರಾಯ ಸಹ ಹಬ್ಬುತ್ತಿದೆ ಎನ್ನಬಹುದು. ಏನೇ ಆಗಲಿ ಸಿಂಹ ಪ್ರಿಯ ಬದುಕಲ್ಲಿ ಬೇಗ ಹೊಸ ಚಿಗುರು ಮೂಡಲೆಂದು ಅಭಿಮಾನಿಗಳು ಹಾರೈಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಕಮೆಂಟ್ ಮಾಡಿ ತಿಳಿಸಿ.