Actress Yamuna: ಜೀವನದಲ್ಲಿ ನಡೆದ ಖಾಸಗಿ ವಿಚಾರದ ಬಗ್ಗೆ ನೇರವಾಗಿ ಮಾತಾಡಿದ ನಟಿ ಯಮುನಾ
ನಮ್ಮ ಕನ್ನಡ ಚಿತ್ರರಂಗ ಸೇರಿದಂತೆ (KFI) ತೆಲುಗು (Telugu) ತಮಿಳು (Tamil) ಮತ್ತು ಮಲಯಾಳಂ (Malyalam) ಭಾಷೆಯಲ್ಲಿ ಅಭಿನಯಿಸಿರುವ ನಟಿ ಯಮುನಾ (Yamuna) ರವರು 12 ವರ್ಷಗಳ ಹಿಂದೆ ದೊಡ್ಡ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ತಮಗೆ ತಿಳಿದಿರಬಹುದು. ಹೌದು ಬೆಂಗಳೂರಿನ (Banglore) ಐಷಾರಾಮಿ ಹೋಟೆಲ್‌ನಲ್ಲಿ (Hotel) ನಾಲ್ಕು ಮಹಡಿಗಳನ್ನು ಬಾಡಿಗೆ ಪಡೆದುಕೊಂಡು ಬೇರೆ ರೀತಿತ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪದ ಕೆಳದೆ ಪೊಲೀಸರು(Police) ರೇಡ್ ಮಾಡಿ ನಟಿ ಯಮುನಾರವರನ್ನು ವಶಕ್ಕೆ ಪಡೆದಿದ್ದರು.
ಸದ್ಯ ಈ ಘಟನೆಯಲ್ಲಿ ನಾನು ನಿರಪರಾಧಿ ಎಂದು ಸಾಬೀತು ಮಾಡಿದ್ದರೂ ಕೂಡ ಜನರು ಪದೆ ಪದೇ ಸಾಮಾಜಿಕ ಜಾಲತಾಣದಲ್ಲಿ (Social Media) ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ತಪ್ಪು ಎಂದು ಹೇಳಿಕೊಂಡಿದ್ದಾರೆ.
ನಾನು ಎಷ್ಟೇ ಮೋಟಿವೇಟ್(Motivate) ಆಗಿದ್ದರೂ ಸೋಷಿಯಲ್ ಮೀಡಿಯಾದಿಂದ(Social Media) ಏನೋ ಒಂದು ವಿಧವಾದ ನೋವು ಅನುಭವಿಸುತ್ತಿದ್ದೇನೆ. ನನಗೆ ಎದುರಾಗಿದ್ದ ಸಮಸ್ಯೆಯಿಂದ ಹೊರ ಬಂದಿದ್ದೇನೆ. ಒಂದು ಇಂಟರ್‌ವ್ಯೂನಲ್ಲಿ ಇದರ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇನೆ. ಕೋರ್ಟ್ ಕೂಡಾ ಈ ಪ್ರಕರಣದಲ್ಲಿ ನನ್ನದು ತಪ್ಪಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ. ನಾನು ಗೆದ್ದಿದ್ದೇನೆ. ಎಲ್ಲವೂ ಮುಗಿದಿದೆ. ಆದರೆ ಸೋಷಿಯಲ್ ಮೀಡಿಯಾವನ್ನು ಮಾತ್ರ ನಾನು ಕಂಟ್ರೋಲ್(Control) ಮಾಡಲಾಗುತ್ತಿಲ್ಲ. ನಾನಾ ರೀತಿಯಲ್ಲಿ ನನ್ನ ಫೋಟೋ ಹಾಕಿ ತಮಗೆ ಬೇಕಾದ ರೀತಿ ಬರೆಯುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಬಹಳ ಬೇಸರವಾಗುತ್ತಿದೆ. ನಾನು ಕೂಡಾ ಮನುಷ್ಯಳಲ್ಲವೇ ?
ಬಹುಶ: ನಾನು ಅಗಲಿದ ನಂತರ ಸಹ ನೀವು ನನ್ನ ಬಗ್ಗೆ ಇಲ್ಲದ್ದನ್ನು ಬರೆದು ದುಡ್ಡು ಸಂಪಾದನೆ ಮಾಡುತ್ತೀರಿ. ನನ್ನ ಕುಟುಂಬಕ್ಕೆ ಮತ್ತು ನನ್ನನ್ನು ಹತ್ತಿರದಿಂದ ಬಲ್ಲ ಅಭಿಮಾನಿಗಳಿಗೆ ನಾನು ಏನೆಂದು ಗೊತ್ತು. ಹೌದು ಆದರೆ ನನ್ನ ಬಗ್ಗೆ ತಿಳಿಯದವರು ಇದನ್ನೇ ನಿಜ ಎಂದುಕೊಳ್ಳುತ್ತಾರೆ. ದಯವಿಟ್ಟು ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲಾ ನಿಜ ಅಲ್ಲ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ನಟಿ ಯುಮುನಾ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ವಿಡಿಯೋವನ್ನು (Video) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದಾರೆ. ಯಮುನಾ ವಿಡಿಯೋ ನೋಡಿ ಜನರು ಆಕೆಗೆ ಧೈರ್ಯ ತುಂಬಿದ್ದು ಯಾರು ಏನು ಹೇಳಿದರೂ ಕೂಡ ನೀವು ಏನೆಂದು ನಮಗೆಲ್ಲಾ ಗೊತ್ತು. ಬೇಕಂತಲೇ ಹೀಗೆಲ್ಲಾ ಮಾಡುತ್ತಿರುವವರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.