Director R. Chandru: ತಡವಾಗಿ ಅಪ್ಪು ನುಡಿದಿದ್ದ ದೊಡ್ಡ ಭವಿಷ್ಯದ ಬಗ್ಗೆ ಹೇಳಿದ ಕಬ್ಜ ನಿರ್ದೇಶಕ ಚಂದ್ರು
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರವರ (Puneeth Rajkumar) ಹುಟ್ಟುಹಬ್ಬದ ದಿನವೇ ಕಬ್ಜ (Kabza) ಸಿನಿಮಾ ರಿಲೀಸ್ ಆಗಿದೆ. ಹಾಗಾಗಿ ಅಪ್ಪು(Appu) ಕೂಡ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಅನುಮಾನ ಅಭಿಮಾನಿಗಳನ್ನು (Fans) ಕಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ (Social Media) ಈ ಬಗ್ಗೆ ಚರ್ಚೆ ಕೂಡ ನಡೆಯುತ್ತಿತ್ತು. ಚಿತ್ರದ ಟ್ರೈಲರ್‌ನಲ್ಲಿರುವ ಒಂದು ಫ್ರೇಮ್ ಕಟ್ ಮಾಡಿ ಅದರಲ್ಲಿ ಮುಖ ಮುಚ್ಚಿಕೊಂಡು ಗನ್ ಹಿಡಿದಿರೋದು ಅಪ್ಪು ಎಂದು ಕೆಲವರು ಹೇಳುತ್ತಿದ್ದರು.
ಇನ್ನು ಸೋಶಿಯಲ್ ಮೀಡಿಯಾದಲ್ಲಿ(Social Media) ಈ ಫೋಟೊ ಸಖತ್ ವೈರಲ್ ಆಗಿತ್ತು ಎನ್ನಬಹುದು. ಆದರೆ ಸಿನಿಮಾದಲ್ಲಿ ಅಪ್ಪು ಅಭಿನಯಿಸಿಲ್ಲ. ಆದರೆ ಸಿನಿಮಾ (Movie) ಪ್ರಾರಂಭದಲ್ಲಿ ಒಂದು ನಿಮಿಷಗಳಕಾಲ ಅಪ್ಪುಗೆ Tribute ನೀಡಲಾಗಿದೆ. ಇನ್ನು ಈ ಕುರಿತು ಚಿತ್ರದ ನಿರ್ದೇಶಕ ಆರ್ ಚಂದ್ರು (R Chandru) ಮಾತನಾಡಿದ್ದು ಅಪ್ಪು ನುಡಿದಿದ್ದ ಭವಿಷ್ಯ ಬಗ್ಗೆ ಕೂಡ ಮೀಡಿಯಾಗಳ ಮುಂದೆ ಹೇಳಿಕೊಂಡಿದ್ದಾರೆ.
ಅಪ್ಪು ಸರ್ ಈಗ ದೇವ್ರು ಆಗಿದ್ದಾರೆ ಎಂದು ಮಾತು ಆರಂಭಿಸಿದ ಆರ್ ಚಂದ್ರು ನಮ್ಮ ಸಿನಿಮಾ ಶೂಟಿಂಗ್ ನಡೆಯುವಾಗ ಅವರು ಸೆಟ್ ಗೆ ಬರುತ್ತಿದ್ದರು. ಏನ್ ಚಂದ್ರು ಹಾಲಿವುಡ್(Hollywood) ಸಿನಿಮಾ ಮಾಡ್ತಿದ್ಯ? ಅನ್ನುತ್ತಿದ್ರು. ಜನ ಈಗ ಹೇಳುತ್ತಿದ್ದಾರೆ ಆದರೆ ಅಪ್ಪು ಆವಾಗ್ಲೆ ಹೇಳಿದ್ದರು ಎಂದು ಚಂದ್ರು ಪರಮಾತ್ಮ ನುಡಿದಿದ್ದ ಭವಿಷ್ಯವನ್ನ ನೆನಪಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್ ಗೆ ಬಂದು ಮಾನಿಟರ್ ಪಕ್ಕ ಕುಳಿತು ಶಾಟ್ಸ್ ನೋಡುತ್ತಿದ್ದರು.
ಅವರ ಬ್ಲೆಸಿಂಗ್ಸ್ ನಮ್ಮ ಚಿತ್ರಕ್ಕಿದೆ. ನಮ್ಮ ಪೋಸ್ಟರ್ ನೋಡಿ.. ಚಂದ್ರು ಸಿನಿಮಾ ಪ್ರಮೋಷನ್ ಗೆ ನಾನು ಇರ್ತಿನಿ.. ಸಖತ್ ಖರ್ಚು ಮಾಡ್ತಿದ್ಯ.. ಉಷಾರು.. ಎನ್ನುತ್ತಿದ್ದರು. ಚಿತ್ರ ಸೂಪರ್ ಹಿಟ್ ಆಗುತ್ತೆ ಎಂದು ಕೂಡ ಭವಿಷ್ಯ ನುಡಿದಿದ್ದರು. ಅಂತಹ ದೇವ್ರಿಗೆ ನಾನು Tribute ಮಾಡಿದ್ದೀನಿ ಹಾಗೂ ಅವರಿಂದಲೇ ಸಿನಿಮಾ ಶುರು ಆಗುತ್ತೆ. ಅವರಿಗೊಂದು ಸಿನಿಮಾ ಮಾಡಬೇಕಿತ್ತು ಆದರೆ ದೇವ್ರು ಅವಕಾಶ ಕೊಡಲಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ಇನ್ನು ಕಬ್ಜ ಸಿನಿಮಾ ಸೆಕೆಂಡ್ ಶೋಗೆ ರೆಸ್ಪಾನ್ಸ್ ಅದ್ಭುತವಾಗಿ ಸಿಗುತ್ತಿದೆ ಎಂದು ನಿರ್ದೇಶಕ ಆರ್ ಚಂದ್ರು ಹೇಳಿದ್ದಾರೆ. ಹೌದು ಮಾಸ್ ಕ್ಲಾಸ್ ಸೇರಿದಂತೆ ಫ್ಯಾಮಿಲಿ ಆಡಿಯನ್ಸ್ ಕೂಡ ಈ ಸಿನಿಮಾ ನೋಡೋಕೆ ಬರುತ್ತಿದ್ದು ಹೀಗಾಗಿ ವಿತರಕರಿಂದ ಮಾಹಿತಿಯನ್ನ ಮಾರ್ಚ್ 18 ನಿಮ್ಮ ಮುಂದೆ ಕಲೆಕ್ಷನ್ ರಿಪೋರ್ಟ್ ಇಡುತ್ತೇವೆ ಎನ್ನುತ್ತಾರೆ ಚಂದ್ರು.ಇನ್ನು ಬಾಕ್ಸಾಫೀಸ್ ಕಲೆಕ್ಷನ್ ನಾವೇ ಅಧಿಕೃತವಾಗಿ ಬಿಡುಗಡೆ ಮಾಡುತ್ತೇವೆ.
ಇವತ್ತು ಕಂಡೆ ಶೋ ಎಲ್ಲಾ ಕಡೆ ಫುಲ್ ಆಗಿದ್ದು ನರ್ತಕಿ ಫುಲ್ ಆಗಿದೆ. ನರ್ತಕಿ ಐದೂ ಶೋ ಫುಲ್ ಆಗಿದೆ. ನನಗೆ 10 ಗಂಟೆ ಶೋ ಅನ್ನೋದೇ ಮಿರಾಕಲ್. ಟಗರು ನೋಡಿದ್ದೆ. ಈಗ ನಮ್ಮ ಸಿನಿಮಾನೂ ಊರ್ವಶಿಯಲ್ಲಿ ಐದು ಶೋ ಫುಲ್ ಆಗಿದೆ. ಏನೇ ಹೇಳಿದ್ರೂ ಅಧಿಕೃತವಾಗಿ ಹೇಳುತ್ತೇನೆ. ವಿತರಕರಿಂದ ಮಾಹಿತಿ ತೆಗೆದುಕೊಂಡು ನಿಮ್ಮ ಮುಂದೆ ಇಟ್ಬಿಟ್ಟು ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಸರಿಯಾಗಿ ಕೊಡುತ್ತೇನೆ ಎಂದು ನಿರ್ದೇಶಕ ಆರ್ ಚಂದ್ರು ರವರು ಹೇಳಿದ್ದಾರೆ.