Kabzaa Movie: ಕಬ್ಜ ಚಿತ್ರದ 2 ನಿಮಿಷದ ಅಭಿನಯಕ್ಕೆ ಶಿವಣ್ಣ ಪಡೆದ ಸಂಭಾವನೆ ಇಲ್ಲಿದೆ
ಭಾರತ ಚಿತ್ರರಂಗದ ರಿಯಲ್ ಸ್ಟಾರ್ (Real Star) ಉಪೇಂದ್ರ (Upendra) ಅಭಿನಯದ ಕಬ್ಜ (Kabza) ಸಿನಿಮಾದಲ್ಲಿ ಕಿಚ್ಚ ಸುದೀಪ್ (Kiccha Sudeep) ಹಾಗೂ ಶಿವರಾಜ್ ಕುಮಾರ್ (Shivarajkumar) ಅವರು ಕೂಡ ನಟಿಸಿದ್ದಾರೆ. ಇನ್ನು ಕಬ್ಜ ಚಿತ್ರದಲ್ಲಿ ನಟಿಸಲು ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ಬಾರಿ ಸಂಭಾವನೆ ಪಡೆದಿದ್ದಾರೆ. ಅದರಲ್ಲೂ ಶಿವಣ್ಣನ ಸಂಭಾವನೆ ಎಲ್ಲರಿಗೂ ಆಶ್ಚರ್ಯ ಎನಿಸಿದೆ.
ಹೌದು ಕಬ್ಜ ಚಿತ್ರದಲ್ಲಿ (Movie) ಅಭಿನಯಿಸಲು ಶಿವಣ್ಣ ಒಂದುವೆರೆಯಿಂದ ಎರಡು ಕೋಟಿ ಹಣ ಪಡೆದಿದ್ದಾರೆ ಎನ್ನಲಾಗ್ತಿದೆ. ನಿಜಕ್ಕೂ ಇದು ದೊಡ್ಡ ಸಂಭಾವನೆಯೇ ಸರಿ. ಹೌದು ಮೊದಲೆಲ್ಲಾ ಕನ್ನಡ ಹೀರೋಗಳು (Kannada Hero) ಒಂದು ಸಿನಿಮಾಗೆ 2 ರಿಂದ 3 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಇದೀಗ ನಿಮಿಷಗಳ ಲೆಕ್ಕದಲ್ಲಿ ಅಭಿನಯಿಸಲು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.ಇನ್ನು ನಟ ಕಿಚ್ಚ ಸುದೀಪ್ (Kiccha Sudeep)ಅವರು ಎರಡರಿಂದ ಮೂರು ಕೋಟಿ ಹಣ ಪಡೆದಿದ್ದಾರೆ.
ಇನ್ನು ಕಬ್ಜ ಅನ್ನುವುದೇ ಒಂದು ಆಳ್ವಿಕೆಯ ಸಂಕೇತವಾಗಿದೆ. ಹೌದು ಹಾಗಿರೋವಾಗ ಇಲ್ಲಿ ಎಲ್ಲವನ್ನೂ ಕಳೆದುಕೊಂಡ ರಾಜಮನತದ ಕಥೆ ನಿಮಗೆ ಅಂದಿನ ಅವರ ಸ್ಥಿತಿಗತಿಯನ್ನ ಹೇಳುತ್ತದೆ. ರಾಜರಾಗಿದ್ದರೂ ಕೂಡ ಅಧಿಕಾರವೇ ಇಲ್ಲದ ಸ್ಥಿತಿಯ ಚಿತ್ರಣ ದೊರೆಯುತ್ತದೆ. ಆದರೆ ಆ ಒಬ್ಬ ರಾಜಮನೆತನದ ರಾಜನ ತಂತ್ರ ಹಾಗೂ ಕುತಂತ್ರಕ್ಕೆ ಇಡೀ ಕಬ್ಜ ಕಥೆ ಸೃಷ್ಟಿ ಆಗುತ್ತದೆ.
ಎಲ್ಲವೂ ಕೂಡ ಇಲ್ಲಿ ಆ ರಾಜನಿಂದಲೇ ಅನ್ನೋದು ತಿಳಿಯುತ್ತಿದೆ. ಆದರೆ ಉಪ್ಪಿ ಇಲ್ಲಿ ಏನು ಅನ್ನೋದು ಕೂಡ ವಿಶೇಷ ಅಲ್ವೇ? ಇನ್ನು ಉಪೇಂದ್ರ ಈ ಸಿನಿಮಾದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು ಮುಂದೇ ಡಾನ್ ಆಗೋದೇ ಕಥೆ. ಭೂಗತ ಲೋಕವನ್ನ ಆಳೋ ದೊರೆ ಆಗೋದು ಇಡೀ ಸಿನಿಮಾ. ಆದರೆ ಉಪ್ಪಿ ಇಲ್ಲಿ ರಾಜನಲ್ಲ. ರಾಜಮನೆತನದ ಹುಡುಗಿಯನ್ನ ವಿವಾಹವಾಗಿ ರಾಜನಂತೆ ಮೆರೆಯೊದೆ ಕಥೆ.
ಇನ್ಜು ಕಬ್ಜ ಸಿನಿಮಾದಲ್ಲಿ ಉಪೇಂದ್ರ ರವರು ಡಾನ್ ಆಗಿದ್ದರೇ ಸುದೀಪ್ ಈ ಡಾನ್ ಕಥೆ ಹೇಳೋ ಒಬ್ಬ ನಿರೂಪಕ. ಗನ್ ಹಿಡಿದು ಉಪ್ಪಿ ಮುಂದೆ ನಿಲ್ಲುವ ಒಬ್ಬ ಪೊಲೀಸ್ ಆಫೀಸರ್ ಸಹ ಹೌದು. ಎರಡೂ ಆಗಿರೋ ಸುದೀಪ್ ರವರು ರೌಡಿಗಳ ನಿದ್ದೆಗೆಡಿಸೋ ಖಡಕ್ ಪೊಲೀಸ್ ಕೂಡ ಆಗಿದ್ದಾರೆ. ಆದರೆ ಸಿನಿಮಾ ನೋಡ್ತಾ ನೋಡ್ತಾ ಹೋದಂತೆ ಶಿವಣ್ಣನ ಪಾತ್ರದ ಸುಳಿವೇ ನಿಮಗೆ ಸಿಗೋದಿಲ್ಲ. ಕಟ್ಟ ಕಡೆಯ ದೃಶ್ಯ ಮುಗಿಯುವ ಸಮಯ ಬಂದರೂ ಶಿವಣ್ಣ ಇಲ್ಲಿ ಕಾಣೋದೇ ಇಲ್ಲ.
ಆದರೆ ಕಡೆಯ ಕ್ಷಣದಲ್ಲಿ ಶಿವಣ್ಣ ದೊಡ್ಡ ಸೈನ್ಯದೊಂದಿಗೆ ಇಲ್ಲಿಗೆ ಬರ್ತಾರೆ. ಬಂದು ಏನ್ ಹೇಳ್ತಾರೆ ಗೊತ್ತೇ? ಸಿನಿಮಾ ನೋಡಬೇಕು.ಹೌದು ಕಬ್ಜ-2 ಸಿನಿಮಾ ಬರೋದು ಪಕ್ಕಾನೇ. ಈ ಒಂದು ಹಿಂಟ್ ಅನ್ನು ಕಡೆ ಕ್ಷಣದಲ್ಲಿ ಸ್ವತಃ ಶಿವಣ್ಣ ಕೊಡುತ್ತಾರೆ. ಅದುವೇ ಇಲ್ಲಿ ಕುತೂಹಲ ಮೂಡಿಸುತ್ತದೆ. ಕಬ್ಜ ಭಾಗ ಎರಡು ಹೇಗಿರುತ್ತದೆ ಅನ್ನುವುದೆ ಈಗ ಹುಟ್ಟಿರೋ ಮತ್ತೊಂದು ಕುತೂಹಲ..