Puneeth Rajkumar Ashwini: ಅಪ್ಪು ಹಾಗೂ ಅಶ್ವಿನಿ ಗೃಹಪ್ರವೇಶದಲ್ಲಿದ್ದ ಕ್ಯೂಟ್ ವಿಡಿಯೋ ವೈರಲ್
ಪವರ್ ಸ್ಟಾರ್(Power Star), ಕರ್ನಾಟಕ ರತ್ನ ಪುನೀತ್ ರಾಜಕುಮಾರ್ (Puneeth Rajkumar) ನಮ್ಮನ್ನು ಅಗಲಿ ಈಗಾಗಲೇ ಒಂದು ವರ್ಷ ಕಳೆದಿದೆ. ಆದರು ಅವರ ನೆನಪು ಮಾತ್ರ ಅಮರ. ಮಾರ್ಚ್ 17 ರಂದು ಅಪ್ಪು ಜನ್ಮದಿನವನ್ನು ಅವರ ಅಭಿಮಾನಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಹಲವಾರು ಅಭಿಮಾನಿಗಳು ಅಪ್ಪುವನ್ನು ದೇವರೆಂದೆ ಪೂಜಿಸುತ್ತಿದ್ದಾರೆ.
ಇಂತಹ ಸಂಧರ್ಭದಲ್ಲಿ ಅಭಿಮಾನಿಗಳು ಪುನೀತ್ ಅಭಿನಯದ ಸಿನೆಮಾಗಳನ್ನು ನೋಡಿ ಅವರನ್ನು ಕಣ್ತುಂಬಿಕೊಳುತ್ತಾರೆ. ಅಂದಹದರಲ್ಲಿ ಅಪ್ಪು ದಿನದ ಸಂಭ್ರಮದಂತೆ ಅಪ್ಪು ಹಾಗೂ ಅಶ್ವಿನಿಯವರು ಒಟ್ಟಾಗಿ ಪೂಜೆಯಲ್ಲಿ ಪಾಲ್ಗೊಳುವ ವಿಡಿಯೋ ವೈರಲ್ ಆಗಿದೆ.ಈ ವಿಡಿಯೋ ನೋಡಿದ ಅಪ್ಪು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಮದುವೆಯಾ ಹೊಸ ದಿನಗಳಲ್ಲಿ , ಅಪ್ಪು ಹಾಗೂ ಅಶ್ವಿನಿಅವರು ಗೃಹ ಪ್ರವೇಶದ ಸಂಧರ್ಭದಲ್ಲಿ ಒಟ್ಟಾಗಿ ಕಾಣಿಕೊಂಡಿದ್ದಾರೆ.ಅಪ್ಪು ಸಾಂಪ್ರಾದಾಯಿಕವಾಘಿ ರೇಷ್ಮೆ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರೆ. ಅಶ್ವಿನಿ ಅತ್ತಿಗೆ ಚೆಂದದ ಸೀರೆ ಉಟ್ಟು ಮಿಂಚಿದ್ದಾರೆ.ಈ ಇಬ್ಬರು ಜೋಡಿಯ ಮುದ್ದಾದ ವಿಡಿಯೋ (Video)ಇಲ್ಲಿದೆ ನೋಡಿ