ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರದ ಬಳಿಕ ಆರ್ ಆರ್ ಆರ್ (RRR) ಚಿತ್ರದ ನಾಟು ನಾಟು ಹಾಡು ಆಸ್ಕರ್ (Oscar) ಪ್ರಶಸ್ತಿ ಬಾಚಿಕೊಂಡಿದೆ. ಹೌದು ರಾಜಮೌಳಿ (Rajamouli) ಚಿತ್ರಕ್ಕೆ ಮತ್ತೊಂದು ಕಿರೀಟ ಲಭಿಸಿದೆ. RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ ಎನ್ನಬಹುದಾಗಿದ್ದು ಈ ಸಿನಿಮಾದ ನಾಟು ನಾಟು ಸಾಂಗ್ ಆಸ್ಕರ್ 2023ರ 95ನೇ ಸಾಲಿನ ಅಕಾಡೆಮಿ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ (Best original Song) ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಎಂ.ಎಂ. ಕೀರವಾಣಿ (MM keeravani) ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ನಾಟು ನಾಟು ಹಾಡು ವಿಶ್ವಮಟ್ಟದಲ್ಲಿ (World) ಸೌಂಡ್ ಮಾಡಿದೆ.
ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿದೆ. ಸದ್ಯ ಇದೀಗ ವಿಶ್ವವೇ ನಾಟು ನಾಟು ಎನ್ನುತ್ತಿದ್ದು ಈ ಮಕ್ಕಳು ಕೂಡ ಕುಣಿಯುತ್ತಿದ್ದಾರೆ. ಈ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋವೊಂದು ವೈರಲ್ ಆಗುತ್ತಿದ್ದು ರಾಧಿಕಾ ಪಂಡಿತ್ (Radhika Pandith) ಸಹೋರನ ಮಗ ನಾಟು ನಾಟು ಎಂದು ಕುಣಿದು ಕುಪ್ಪಳಿಸಿದ್ದಾನೆ.
ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಅದೆಷ್ಟೋ ಮಂದಿಗೆ ರಾಧಿಕಾ ಪಂಡಿತ್ ಅವರಿಗೆ ತಮ್ಮ ಇರುವ ವಿಚಾರ ತಿಳಿದಿರಲಿಲ್ಲ. ರಾಧಿಕಾ ಪಂಡಿತ್ ರವರ ತಮ್ಮನ ಹೆಸರು ಗೌರಂಗ್ ಪಂಡಿತ್ ಎಂಬುದಾಗಿದ್ದು ಅವರ ಪತ್ನಿಯ ಹೆಸರು ಸಹನ. ಇಬ್ಬರೂ ಕೂಡ ವಿದೇಶದಲ್ಲಿ ನೆಲೆಸಿದ್ದು ಉದ್ಯಮವನ್ನು ಮಾಡುತ್ತಿದ್ದಾರೆ.
ಹೌದು ಇದು ರಾಧಿಕಾ ಪಂಡಿತ್ ಹಾಗೂ ಯಶ್ ರವರು ವಿದೇಶ ಪ್ರಯಾಣ ನಡೆಸಿದ್ದಾಗ ತಮ್ಮ ತಮ್ಮನನ್ನು ಭೇಟಿ ಮಾಡಿದ್ದು ಈ ಅದ್ಭುತ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಇನ್ನು ಗೌರಂಗ್ ಪಂಡಿತ್ ರವರಿಗೂ ಕೂಡ ರಾಧಿಕಾ ಕಂಡರೆ ಬಹಳ ಅಚ್ಚುಮೆಚ್ಚು. ಇನ್ನು ಭಾರತಕ್ಕೆ ಬಂದ ಕೂಡಲೇ ರಾಧಿಕಾ ಪಂಡಿತ್ ರವರ ಮನೆಗೆ ಭೇಟಿ ನೀಡುವ ಗೌರಂಗ್,ತನ್ನ ಪ್ರೀತಿಯ ಸಹೋದರಿ ಹಾಗೂ ಭಾವನ ಜೊತೆ ಸಮಯವನ್ನು ಕಳೆದೆ ಹಿಂತಿರುಗುತ್ತಾರೆ.
ಇನ್ನು ಗೌರಂಗ್ ಹಾಗೂ ಸಹನಾ ದಂಪತಿಗಳಿಗೆ ರಿಯಾ ಎಂಬಂತಹ ಮುದ್ದಾದ ಮಗಳಿದ್ದು ಒರ್ವ ಮಗನಿದ್ದಾನೆ. ಇಬ್ಬರ ಹೆಸರಿನಲ್ಲಾಗಲೇ ಇನ್ ಸ್ಟಾಗ್ರಾಂ(Instagram) ಖಾತೆಯನ್ನು ಕೂಡ ತೆರೆದಿದ್ದಾರೆ. ಇನ್ನು ರಾಧಿಕಾ ಪಂಡಿತ್ ಹಾಗೂ ಯಶ್ ರವರಿಗೆ ಐರಾ ಬೇಬಿ ಜನಿಸಿದಾಗ ರಿಯಾ ಜೊತೆ ಅದ್ಭುತವಾದ ಫೋಟೋ ಶೂಟ್ ಗಳನ್ನು ಕೂಡ ಮಾಡಿಸಿದ್ದರು.ಇನ್ನೂ ರಿಯಾ(Riya) ಜನಿಸಿದಾಗಲೂ ಕೂಡ ಯಶ್ ಹಾಗೂ ರಾಧಿಕಾ ಪಂಡಿತ್ ರವರು ವಿದೇಶಕ್ಕೆ ಪ್ರಯಾಣ ನಡೆಸಿ ಮಗು ಹಾಗೂ ತಾಯಿಯ ಆರೋಗ್ಯವನ್ನು ವಿಚಾರಿಸಿಕೊಂಡು ಬಂದಿದ್ದರು. ಅಲ್ಲದೆ ಐರಾ ಅವರ ಒಂದು ವರುಷದ ಹುಟ್ಟುಹಬ್ಬಕ್ಕೂ ಸಹ ವಿದೇಶದಿಂದ ಗೌರಂಗ್ ದಂಪತಿಗಳು ಭಾರತಕ್ಕೆ ಬಂದಿದ್ದರು.