ರಶ್ಮಿ ಗೌತಮ್ (Rashmi Gautam) ಒಡಿಸ್ಸಾದವರಾದರೂ, ತೆಲುಗು ಟಿವಿಯಲ್ಲಿ ಜನಪ್ರೀಯ ಶೋ ನೀಡುತ್ತಿದ್ದವರು, ಹಲವು ಟಿವಿ ಶೋಗಳ ನಿರೂಪಣೆ ಮಾಡುತ್ತಿರುವ ರಶ್ಮಿ, ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಸುದ್ದಿಯಲ್ಲಿರುತ್ತಾರೆ, ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಈ ನಟಿ ಸಖತ್ ಬೋಲ್ಡ್ ಆಗೇ ಪೋಟೋ ಆಪ್ ಲೋಡ್ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಸದ್ದು:
ಇತ್ತೀಚೆಗೆ ಇವರ ಕೆಲವೊಂದು ವಿಚಾರಗಳು ಸದ್ದು ಮಾಡುತ್ತಲೇ ಇದ್ದಾರೆ, ಮದುವೆ ಆಗಿದೆ, ಡಿವೊರ್ಸ್ ಆಗಿದೆ ಈ ವಿಚಾರಗಳು ಭಾರೀ ಸದ್ದು ಮಾಡುತ್ತವೆ, ಇತ್ತೀಚೆಗೆ ಡೈರಿ ಪ್ರಾಡಕ್ಟ್ಸ್ ಗಳ ಬಗ್ಗೆ ಮಾಡಿರುವ ಟ್ವೀಟ್ ಒಂದು ಭಾರೀ ವೈರಲ್ ಆಗಿದೆ. ರಶ್ಮಿ ಅವರು ತಾವು ಮಿಲ್ಕ್ ಪ್ರಾಡಕ್ಟ್ಸ್ ಗಳನ್ನು ಪ್ರೊಮೋಟ್ ಮಾಡಿ ನಿಲ್ಲಿಸಿರುವುದಾಗಿ ಹೇಳಿದ್ದಾರೆ.
ಐಸ್ ಕ್ರೀಮ್ ಪಾರ್ಲರ್ ಲಾಂಚ್ ಬಗ್ಗೆ ನೆಟ್ಟಿಗರ ಕಾಮೆಂಟ್:
2019ರಲ್ಲಿ ರಶ್ಮಿ ಅವರು ಲಾಂಚ್ ಮಾಡಿದ್ದ ಐಸ್ ಕ್ರೀಮ್ ಪಾರ್ಲರ್ ನ ಸ್ಕ್ರೀನ್ ಶಾಟ್ ಶೇರ್ ಮಾಡಿ, ಸೆಲೆಬ್ರಿಟಿಗಳು ಹಣಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಈಗ ಉತ್ತರ ನೀಡಿದ್ದಾರೆ, ಹೌದು, ನಾನು ಈ ಹಿಂದೆ ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಕೆಲವು ವರ್ಷಗಳಿಂದ ನಾನು ಹಾಲು ಕುಡಿಯುವುದನ್ನು ನಿಲ್ಲಿಸಿದ್ದೇನೆ. ಹಾಲು ಕುಡಿಯುವುದು ನನ್ನ ಚರ್ಮದ ಮೇಲೆ ಅನಾರೋಗ್ಯಕರ ಪರಿಣಾಮ ಬೀರುತ್ತದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ ಎಂದಿದ್ದಾರೆ
ಪ್ರಚಾರ ಪಡಿಸುವುದನ್ನು ನಿಲ್ಲಿಸಿದೆ:
ಹಾಲಿನ ಡೈರಿ ಇಂಡಸ್ಟ್ರಿಗಳಲ್ಲಿ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಪ್ರಕ್ರಿಯೆಯ ಬಗ್ಗೆ ತಿಳಿದ ನಂತರ, ಅವುಗಳನ್ನು ಪ್ರಚಾರ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಎಂದು ರಶ್ಮಿ ಅವರು ಟ್ವೀಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮದುವೆ ವಿಚಾರ ವೈರಲ್:
ರಶ್ಮಿ, ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಸಕ್ರಿಯರಾಗಿತ್ತಾರೆ, ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಈ ನಟಿ ಸದಾ ಸುದ್ದಿಯಲ್ಲಿರುತ್ತಾರೆ, ರಶ್ಮಿ ಸುಧೀರ್ ಈಗಾಗಲೇ ಮದುವೆಯಾಗಿದ್ದಾರೆ ಅಂತ ಸುದ್ದಿಯಾಗಿತ್ತು, ಇನ್ನೂ ಕೆಲವರು ರಶ್ಮಿ ಗುಟ್ಟಾಗಿ ಮದುವೆಯಾಗುವುದಿರಲಿ.. ಗುಟ್ಟಾಗಿಯೇ ಡಿವೋರ್ಸ್ ಕೂಡ ಪಡೆದಿದ್ದಾರೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ