Karnataka Times
Trending Stories, Viral News, Gossips & Everything in Kannada

Srinagara Kitty: ಮುಲಾಜಿಲ್ಲದೆ ಕನ್ನಡ ಚಿತ್ರರಂಗದ ಕಹಿಸತ್ಯ ಬಿಚ್ಚಿಟ್ಟ ನಟ ಶ್ರೀನಗರ ಕಿಟ್ಟಿ

2017 ರಲ್ಲಿ ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದ ನಟ ಶ್ರೀನಗರ ಕಿಟ್ಟಿ (Srinagar Kitty) ಈ ವರುಷ ಗೌಳಿ (Gowli) ಎಂಬ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ಈ ಸಿನಿಮಾ (Movie) ದೊಡ್ಡ ನಿರೀಕ್ಷೆ ಹುಟ್ಟು ಹಾಕಿದ್ದರು ಕೂಡ ಕಿಟ್ಟಿಯವರಿಗೆ ಯಶಸ್ಸು (Success) ತಂದುಕೊಡಲಿಲ್ಲ. ಮತ್ತೊಮ್ಮೆ ಕಿಟ್ಟಿ ಸೋಲು ಅನುಭವಿಸಬೇಕಾಯಿತು.
ಇನ್ನು ಶ್ರೀನಗರ ಕಿಟ್ಟಿ ಅವರು ಒಂದು ರೀತಿ ಆರಕ್ಕೇರದ ಮೂರಕ್ಕಿಳಿಯದ ನಟ ಎಂದೇ ಹೇಳಬಹುದು. ಹೌದು ಯಾಕೆಂದರೆ ಇವರ ಒಂದು ಸಿನಿಮಾ (Movie) ಸೂಪರ್ ಹಿಟ್ (Super Hit) ಆಗುತ್ತದೆ ನಂತರ ಬರುವ ನಾಲ್ಕೈದು ಸಿನಿಮಾಗಳು ಜನರಿಗೆ ಸೌಂಡ್ (Sound) ಮಾಡುವುದೇ ಇಲ್ಲ. ಆದರೂ ಕೂಡ ಇವರು ಇಂಡಸ್ಟ್ರಿಯಲ್ಲಿ ಬಹಳ ಬ್ಯೂಸಿ (Busy) ಇರುತ್ತಾರೆ. ಇನ್ನು ಪ್ರತಿ ಬಾರಿ ಸಹ ಒಂದೇ ರೀತಿ ಪಾತ್ರ ಅಥವಾ ಒಂದೇ ರೀತಿ ಚಿತ್ರಗಳಲ್ಲಿ ಕಾಣಿಸಿಕೊಳ್ಳದೆ ಎಲ್ಲ ಶೇಡಲ್ಲಿಯೂ ಕೂಡ ಕಿಟ್ಟಿ ಕಾಣಿಸಿಕೊಂಡಿದ್ದಾರೆ.

ಇನ್ಮು ಕೆಲ ಚಿತ್ರಗಳನ್ನು ಅನುಭವ ಇಲ್ಲದೆ ನಿರ್ಮಾಣ ಮಾಡಿ ಕೈ ಕೂಡ ಸುಟ್ಟುಕೊಂಡಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಕೂಡ ಅವರ ಈ ಎರಡು ದಶಕದ ಸಿನಿ ಜರ್ನಿ ಬಗ್ಗೆ ಕೇಳಿದರೆ ನನಗೆ ತೃಪ್ತಿ ಇದೆ ಎಂದು ಸಂತಸದಿಂದ ಹೇಳುತ್ತಾರೆ.ಹೌದು ಸಾಕಷ್ಟು ಅನುಭವಗಳನ್ನು ಪಡೆದಿದ್ದೇನೆ ಸಾಕಷ್ಟು ಕಲಿತಿದ್ದೇನೆ ಇನ್ನು ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಹೇಳುವ ನಟ ಶ್ರೀನಗರ ಕಿಟ್ಟಿ ಇಷ್ಟು ವರ್ಷದಲ್ಲಿ ಗಳಿಸಿದೆ ಹಣದ ಲೆಕ್ಕ ಕೇಳಿದರೆ ಇನ್ನು ಎಷ್ಟೋ ಸಿನಿಮಾಗಳಿಂದ ಹಣವೇ ಬಂದಿಲ್ಲ ಯಾಕೆಂದರೆ ಅವರು ಕೂಡ ನನ್ನ ರೀತಿ ಸಂಕಷ್ಟಗಳ ಸಿಲುಕಿ ಹಾಕಿಕೊಂಡಿದ್ದಾರೆ. ಅವರು ನಿಷ್ಠೆಯಿಂದ ತಂದು ಕೊಟ್ಟರೆ ಖುಷಿಯಾಗಿ ತೆಗೆದುಕೊಳ್ಳುತ್ತೇನೆ ಇಲ್ಲದಿದ್ದರೆ ಅವರ ಕಾಲರ್ ಹಿಡಿದು ವಸೂಲಿ ಮಾಡುವ ತನ ನನ್ನದಲ್ಲ ಎಂದು ಹೇಳುತ್ತಾರೆ.

Join WhatsApp
Google News
Join Telegram
Join Instagram

ಇನ್ನು ಮುಂದಿನ ಸಿನಿಮಾಗಳ ಬಗ್ಗೆ ಕೇಳಿದರೆ ಈ ಕಾಲದಲ್ಲಿ ಯಾವ ರೀತಿ ಎನು ಟ್ರೆಂಡ್ (Trend) ಇದೆ ಆ ರೀತಿ ಸಿನಿಮಾ ಮಾಡಿದರೆ ಮಾತ್ರ ಅದು ವರ್ಕ್ ಆಗುತ್ತದೆ. ಹೌದು ಗಳಿಕೆ ವಿಚಾರದಿಂದ ಹಿಡಿದು ಪ್ರದರ್ಶನ ಜನರ ಇಂಟರೆಸ್ಟ್ ಎಲ್ಲ ವಿಷಯಗಳಲ್ಲೂ ಕೂಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಬದಲಾಗಿದೆ. ಈಗ ಒಂದು ಹಿಟ್ ಸಿನಿಮಾ ಕೊಡಬೇಕು ಎಂದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಕಥೆ ಇಂಪ್ಯಾಕ್ಟ್ ಹಾಗೂ ಹೀರೋ ಎಲ್ಲರೂ ಕೂಡ ಮುಖ್ಯ ಆಗುತ್ತಾರೆ. ಹೀಗೆ ಜನ ಏನು ಕೇಳುತ್ತಾರೋ ಅದನ್ನು ಕೊಟ್ಟಾಗ ಮಾತ್ರ ಅದು ವರ್ಕೌಟ್ ಆಗುತ್ತದೆ. ಹೌದು ಅದನ್ನು ಬಿಟ್ಟು ನಾವಿನ್ನು ಅದೇ ಹಳೇ ಕಾಲದ ರೀತಿ ಇದ್ದರೆ ಅದು ರೀಚ್ ಆಗುವುದೇ ಇಲ್ಲ ಎಂದಿರುವ ಕಿಟ್ಟಿ ಔಟ್ ಆಫ್ ದ ಬಾಕ್ಸ್ ಎಂದಿಗೂ ಔಟ್ ಆಫ್ ದ ಬಾಕ್ಸ್ ಆಗಿಯೇ ಉಳಿದುಕೊಳ್ಳುತ್ತದೆ ಎಂದಿದ್ದಾರೆ

Leave A Reply

Your email address will not be published.