Suchendra Prasad: ಹಣದ ವಿಚಾರವಾಗಿ ಪವಿತ್ರ ಲೋಕೇಶ್ ಇನ್ನೊಂದು ಮುಖ ತಿಳಿಸಿದ ಸುಚೇಂದ್ರ ಪ್ರಸಾದ್.

Advertisement
ನಟಿ ಪವಿತ್ರಾ ಲೋಕೇಶ್ (Pavithra lokesh) ಹಾಗೂ ನಟ ನರೇಶ್ (Naresh) ನಡುವಿನ ಸಂಬಂಧದ ಬಗ್ಗೆ ಈಗಲೂ ಚರ್ಚೆಗಳು ನಡೆಯುತ್ತಲೇ ಇದೆ ಎನ್ನಬಹುದು. ನರೇಶ್ ಹಾಗೂ ಪವಿತ್ರ ಲೋಕೇಶ್ ಅವರ ಮದುವೆಯ ಸುದ್ದಿಗಳು ದಿನದಿನಕ್ಕೆ ತಿರುವು ಪಡೆಯುತ್ತಲೇ ಇದೆ. ಇನ್ನು ಇತ್ತೀಚೆಗಷ್ಟೇ ನರೇಶ್ ಹಾಗೂ ಪವಿತ್ರ ಲೋಕೇಶ್ ದುಬೈ ನಲ್ಲಿ ಕಾಲಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಸುಚೇಂದ್ರ ಪ್ರಸಾದ್ ಆಡಿಯೋ ವೈರಲ್
ಕೆಲ ದಿನಗಳ ಹಿಂದೆ ಪವಿತ್ರಾ ಹಾಗೂ ನರೇಶ್ ಪತ್ನಿ ರಮ್ಯಾ (Ramya) ನಡುವೆ ಮಾತಿನ ಚಕಾ ಮಕಿ ನಡೆದಿತ್ತು, ಪವಿತ್ರಾ ಮತ್ತು ನರೇಶ್ ಲಿಪ್ ಕಿಸ್ ಮಾಡಿ ಸಾಕಷ್ಟು ಗೊಂದಲ ಮೂಡಿಸಿತ್ತು, ಇದೀಗ ಸುಚೇಂದ್ರ ಪ್ರಸಾದ್ ಅವರು ಅವರ ಬಗ್ಗೆ ಹೇಳಿರುವ ಮಾತುಗಳು ವೈರಲ್ ಆಗುತ್ತಿವೆ. ಕೆಲ ವರ್ಷಗಳಿಂದ ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರ ಲೋಕೇಶ್ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇತ್ತು, ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡುವುದಕ್ಕೆ ಸುಚೇಂದ್ರ ಪ್ರಸಾದ್ ಅವರ ಕೋಪವೇ ಕಾರಣ ಎನ್ನುವ ಮಾಹಿತಿ ಕೂಡ ಕೇಳಿ ಬಂದಿತ್ತು
ಸುಚೇಂದ್ರ ಪ್ರಸಾದ್ ಹೇಳಿದ್ದೇನು?
Advertisement
ಸುಚೇಂದ್ರ ಪ್ರಸಾದ್ (Suchendra prasadh) ಅವರು ಪವಿತ್ರಾ ಅವರ ಪತಿಯಾಗಿದ್ದು ಈ ಬಗ್ಗೆ ಪವಿತ್ರಾ ಮಾತ್ರ ನಂಗೂ ಅವರಿಗೂ ಈಗ ಯಾವುದೇ ಸಂಬಂಧ ಇಲ್ಲ ಅಂದಿದ್ದಾರೆ, ಪವಿತ್ರಾ ಲೋಕೇಶ್ ದುಡ್ಡಿಗಾಗಿ ಏನೆಲ್ಲ ಮಾಡುತ್ತಾಳೆ. ನರೇಶ ಹಿಂದೆ ಬಿದ್ದಿರುವ ಕಾರಣವೂ ಅದೆ.
ಆಕೆಗೆ ದುಡ್ಡಿನ ಆಸೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ, ಆಡಿಯೋ ಕೇಳಿದ ಅನೇಕರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ, ಆಕೆಗೆ ದುಡ್ಡಿನ ಮೇಲೆ ಪ್ರೀತಿ ಜಾಸ್ತಿ 1500 ಕೋಟಿ ದುಡ್ಡು ಹೊಡೆಯಲು ನರೇಶ್ ಜೊತೆ ಇದ್ದಾಳೆ ಅಂತ ಹೇಳಿದ್ದಾರೆ. ಪವಿತ್ರಾ ಲೋಕೇಶ್ ತಮ್ಮ ಸೌಂದರ್ಯದ ಮೇಕಪ್ ಗಾಗಿನ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ಸುಚೇಂದ್ರ ಪ್ರಸಾದ್ ರನ್ನು ಹೊಗಳಿದ್ದ ಆಡಿಯೋ ವೈರಲ್
ಐದು ವರ್ಷದ ಹಿಂದೆ ಸುಚೇಂದ್ರ ಪ್ರಸಾದ್ ಅವರನ್ನು ಪವಿತ್ರ ಲೋಕೇಶ್ ಅವರು ಧನತ್ಮಾಕ ರೀತಿಯಾದಂತಹ ಹೇಳಿಕೆಗಳನ್ನು ನೀಡಿದ್ದರು. ಸುಚೇಂದ್ರ ಪ್ರಸಾದ್ ಅವರಲ್ಲಿ ನಾನು ಯಾವುದೇ ತಪ್ಪು ಕೂಡ ಕಂಡಿಲ್ಲ. ನನಗೆ ಅವರು ತುಂಬಾ ಗೌರವ ನೀಡುತ್ತಾರೆ. ಅಷ್ಟರ ಮಟ್ಟಿಗೆ ಎಂದರೆ ನನ್ನನ್ನು ಅವರು ಕರೆಯುವುದೇ ಅತ್ಯಂತ ಗೌರವದಿಂದ ಎಂದಿದ್ದರು , ಇದೀಗ ಸುಚೇಂದ್ರ ಪ್ರಸಾದ್ ನೀಡಿರುವ ಹೇಳಿಕೆಗಳು ಭಾರೀ ವೈರಲ್ ಆಗುತ್ತೀವೆ
Advertisement