Karnataka Times
Trending Stories, Viral News, Gossips & Everything in Kannada

Shriya Saran: ಕಬ್ಜ ಚಿತ್ರಕ್ಕೆ ತೆಲುಗು ನಟಿ ಶ್ರೀಯಾ ಸಾರನ್ ಪಡೆದ ಸಂಭಾವನೆ ವೈರಲ್

ಕಬ್ಜ (Kabza) ಚಿತ್ರದ ನಾಯಕಿ ಶ್ರೀಯಾ ಶರಣ್ (Shreya Sharan) ಅವರು ಮಧುಮತಿ (Madhumati) ಹೆಸರಿನ ಪಾತ್ರ ಮಾಡಿದ್ದು ಈ ಚಿತ್ರ ಕನ್ನಡ ಸೇರಿ ಐದು ಭಾಷೆಗಳಲ್ಲಿ (5 languages) ತೆರೆಗೆ ಬಂದಿದೆ. ಉಪೇಂದ್ರ (Upendra) ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಬ್ಜ ಚಿತ್ರ ಬರೋಬ್ಬರಿ 100 ರಿಂದ 120 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಈ ಸಿನಿಮಾದಲ್ಲಿ ಉಪ್ಪಿ ಕಿಚ್ಚ (Kiccha Sudeep) ಹಾಗೂ ಶಿವಣ್ಣ(Shivarajkumar) ಜೊತೆ ತೆರೆ ಮೇಲೆ ಕಾಣಿದಿಕೊಂಡಿರುವ ಶ್ರೀಯಾ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಈ ಹಿಂದೆ RRR ನಲ್ಲಿ ಶ್ರಿಯಾ ಪಾತ್ರವು ಕೇವಲ 2 ರಿಂದ 4 ನಿಮಿಷಗಳಿದ್ದು ಸಣ್ಣ ಪಾತ್ರದಿಂದ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು.ಚಿಕ್ಕ ಪಾತ್ರಕ್ಕೆ ಸೌತ್ ನಟಿ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಇದೀಗ ಕಬ್ಜ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಬ್ಜ 3 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

Join WhatsApp
Google News
Join Telegram
Join Instagram

ಇನ್ನು ನಟಿ ಶ್ರೀಯಾ ಶರಣ್​ಗೆ ಈಗ 40 ವರ್ಷ ವಯಸ್ಸಾಗಿದ್ದು ಈ ವಯಸ್ಸಿನಲ್ಲಿ ಅವರು ಯುವ ನಟಿಯರನ್ನೂ ಕೂಡ ನಾಚಿಸುವಂತಿದ್ದಾರೆ. ಅವರು ಜನಿಸಿದ್ದು ಉತ್ತರ ಪ್ರದೇಶದ (Uttar Pradesh) ಹರಿದ್ವಾರದಲ್ಲಿ (Haridhwara) . 2001ರಲ್ಲಿ ತೆರೆಗೆ ಬಂದ ತೆಲುಗಿನ ಇಷ್ಟಂ (Istam) ಅವರ ಮೊದಲ ಸಿನಿಮಾ. ತದನಂತರ ಅವರು ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡರು. ನಂತರ ಶ್ರೀಯಾಗೆ ಹಿಂದಿ ತಮಿಳು (Hindi & Tamil) ಸಿನಿಮಾಗಳಿಂದಲೂ ಆಫರ್​ಗಳು ಬರೋಕೆ ಆರಂಭ ಆದವು.

ಶ್ರೀಯಾ ಹೆಚ್ಚು ಕಾಣಿಸಿಕೊಂಡಿದ್ದು ಟಾಲಿವುಡ್​ನಲ್ಲಿ. ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ನಟನೆಯ ಅರಸು(Arasu) ಸಿನಿಮಾದಲ್ಲಿ ಶ್ರೀಯಾ ಅವರು ಅತಿಥಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾ. ನಂತರ ಒಂದು ಕನ್ನಡ ಸಿನಿಮಾದಲ್ಲಿ ಅವರು ನಟಿಸಿದ್ದರು. ಕಬ್ಜ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

ಇನ್ನು ಶ್ರೀಯಾ ರವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ವಿಚಾರಗಳನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಶ್ರೀಯಾ ಅವರು ರಷ್ಯಾ (Russia)ಮೂಲದ ಆ್ಯಂಡ್ರೇ ಕೊಸ್ಚೆವ್ ರವರ ಜತೆಗೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಇದನ್ನು ಅವರು ಅಲ್ಲಗಳೆದಿದ್ದರು.2018ರಲ್ಲಿ ಇಬ್ಬರೂ ಮದುವೆ ಆಗಿದ್ದು ಶ್ರೀಯಾ ಶರಣ್​ಗೆ 2021ರ ಜನವರಿ 10ರಂದು ಹೆಣ್ಣು ಮಗು ಜನಿಸಿತ್ತು.

ಅದೇ ವರುಷ ಅಕ್ಟೋಬರ್ 12ರಂದು ಈ ವಿಚಾರವನ್ನು ಶ್ರೀಯಾ ರಿವೀಲ್ ಮಾಡಿದ್ದರು.ಕೆಜಿಎಫ್​ (KGF) ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಿಂದ ನಟಿ ಶ್ರೀನಿಧಿ ಶೆಟ್ಟಿ ಖ್ಯಾತಿ ಹೆಚ್ಚಿದೆ. ಕಬ್ಜ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದ್ದು ಈ ಸಿನಿಮಾದಿಂದ ಶ್ರೀಯಾ ಖ್ಯಾತಿ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

Leave A Reply

Your email address will not be published.