Naga Chaitanya: ಡೈವೋರ್ಸ್ ಆದ ಮೂರೆ ವರ್ಷಕ್ಕೆ ಸಮಂತಾ ಪತಿ ನಾಗಚೈತನ್ಯ ಮಾಡಿರುವ ಕೆಲಸ ವೈರಲ್
ಟಾಲಿವುಡ್(Tollywood) ಸ್ಟಾರ್ ಜೋಡಿಗಾಳಾಗಿದ್ದ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ದೂರವಾಗಿ 3 ವರ್ಷಗಳೇ ಕಳೆದಿದೆ. ಈ ನಡುವೆ ಇಬ್ಬರು ಕೂಡಾ ತಮ್ಮ ಸಿನೆಮಾ ಜೀವನದಲ್ಲಿ ಬ್ಯೂಸಿ ಆಗಿದ್ದಾರೆ. ಈಗ ಸಮಂತಾರಿಂದ ದೂರಾಗಿ 3 ವರ್ಷದ ಬಳಿಕ ನಟ ನಾಗಚೈತನ್ಯ ಹೊಸ ಮನೆ ಖರೀದಿಸಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ.
ಹೌದು. ನಾಗಚೈತನ್ಯ ಅವರು ಹೈದರಾಬಾದ್(Hyderbadh) ಜುಬಿಲಿ ಹಿಲ್ಸ್ ನಲ್ಲಿ ಲಕ್ಷುರಿ ಮನೆ ಖರೀದಿಸಿದ್ದಾರೆ. ಸದ್ಯ ಈ ಮನೆಯನ್ನು ನವೀಕರಿಸಲಾಗುತ್ತಿದೆ. ಮನೆ ಕಾರ್ಯ ಪೂರ್ಣಗೊಂಡ ನಂತರ ನಾಗಚೈತನ್ಯ ಅವರು ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.
ಸಮಂತಾಯಿಂದ(Samantha) ದೂರಾದ ಬಳಿಕ ನಟ ನಾಗ ಚೈತನ್ಯ ತಂದೆ ನಾಗಾರ್ಜುನ ಮನೆಯಲ್ಲಿ ವಾಸವಿದ್ದರು, ಆದರೆ ಈಗ ಹೊಸ ಮನೆ ಖರೀಸಿದ್ದಾರೆ. ನಾಗ ಚೈತನ್ಯ ಸಮಂತಾರನ್ನು ವಿವಾಹವಾದ ಬಳಿಕ ಹೈದರಾಬಾದ್ ನ ಪ್ರತಿಷ್ಠಿತ ಏರಿಯಾ ಜುಬಿಲಿ ಹಿಲ್ಸ್(Jubili Heels) ನಲ್ಲಿ ವಾಸಿಸುತ್ತಿದ್ದರು.ವಯಕ್ತಿಕ ಮನಸ್ಥಾಪಗಳಿಂದ 2020ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರಾಗಿದ್ದರು. ಆಗ ನಾಗಚೈತನ್ಯ ಆ ಮನೆಯಿಂದ ಹೊರಬಂದಿದ್ರು ಆದ್ರೆ ಸಮಂತಾ ಅದೇ ಮನೆಯಲ್ಲಿ ವಾಸವಿದ್ರು.
ಮನೆಯಿಂದ ಹೊರಬಂದ ಬಳಿಕ ನಾಗ ಚೈತನ್ಯ ಅವರ ತಂದೆ ಜೊತೆ ಇದ್ದರು ಎನ್ನಲಾಗಿದೆ. ಇದೀಗ ಅವರು ತಮ್ಮ ಕನಸಿನ ಮನೆ ಖರೀದಿಸಿದ್ದಾರೆ.ಇಬ್ಬರೂ ಬೇರೆ ಬೇರೆ ಆದ ಬಳಿಕ ಆ ಮನೆಯಲ್ಲಿ ಸಮಂತಾ ಕೆಲ ಕಾಲ ವಾಸವಿದ್ದರು. ಬಳಿಕ ಆ ಮನೆಯನ್ನು ಮಾರಾಟ ಮಾಡಿ ಸಮಂತಾ ಬೇರೆ ಮನೆಗೆ ಶಿಫ್ಟ್ ಆಗಿದ್ದರು.ನಾಗ ಚೈತನ್ಯ ಸದ್ಯ ಕಸ್ಟಡಿ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. .
ಕಸ್ಟಡಿ(Custody) ಸಿನಿಮಾದ ಫಸ್ಟ್ ಲುಕ್ ವೈರಲ್(Viral) ಆಗಿದ್ದು ನಾಗ್ ಪೊಲೀಸ್ ಆಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.ಸಮಂತಾ ಕೂಡಾ ಸಾಲು ಸಾಲು ಸಿನೆಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಶಾಕುಂತಲ ಚಿತ್ರದ ಚಿತ್ರೀಕರಣ ಮುಗಿಯುವ ಹಂತದಲ್ಲಿದ್ದು ಸದ್ಯದಲ್ಲಿಯೇ ಸೆಟೇರಲಿದೆ.