Karnataka Times
Trending Stories, Viral News, Gossips & Everything in Kannada

Vishnuvardhan: ಅಂದು ಹುಚ್ಚ ಸಿನೆಮಾ ನೋಡಿದ ವಿಷ್ಣು ದಾದ ಸುದೀಪ್ ನ ಮನೆಗೆ ಕರೆಸಿ ಮಾಡಿದ್ದೆ ಬೇರೆ!

ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ರವರು ಅಗಿನ್ನು ಕೂಡ ಕನ್ನಡ ಚಿತ್ರರಂಗಕ್ಕೆ (Kannada Film Industry) ಕಾಲಿಟ್ಟಿದ್ದ ಸಂದರ್ಭವದು. ಸಾಲು ಸಾಲು ಸೋಲು ಕಂಡಿದ್ದ ಸಮಯದಲ್ಲಿ ಕಿಚ್ಚನ ಹುಚ್ಚ ಸಿನಿಮಾ(Huchcha Film) ತೆರೆಕಂಡಿತ್ತು. ಇನ್ನು ಈ ಸಮಯದಲ್ಲಿ ಅವರು ತಮ್ಮ ನೆಚ್ಚಿನ ನಟರಾದ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರಿಗೆ (Vishnuvardhan) ಹುಚ್ಚ ಸಿನಿಮಾವನ್ನು ತೋರಿಸಲೇಬೇಕು ಎಂದು ಹಠಕ್ಕೆ ಬಿದ್ದು ವಿಷ್ಣುವರ್ಧನ್ ರವರಿಗೆ ಸಿನಿಮಾ ತೋರಿಸಿದ್ದರು.

ಹೌದು ಸಿನಿಮಾ ನೋಡಿದ ಬಳಿಕ ವಿಷ್ಣುವರ್ಧನ್ ರವರು ಸಾಕಷ್ಟು ಸಮಯಗಳ ಕಾಲ ಒಬ್ಬರೇ ನಿಂತುಕೊಂಡಿದ್ದರಂತೆ. ಇನ್ನು ಚಿತ್ರದ ಕುರಿತಂತೆ ಯಾವ ಮಾತನ್ನು ಸಹ ಆಡಿರಲಿಲ್ಲ. ಆ ಸಮಯದಲ್ಲಿ ಕಿಚ್ಚ(Kiccha) ಸುದೀಪ್ ರವರಿಗೆ ನಿಜಕ್ಕೂ ಮನಸ್ಸಿನಲ್ಲಿ ತಳಮಳ ಆಗುತ್ತಿತ್ತು. ಹೌದು ಏನು ಮಾಡಬೇಕು ಎಂಬುದು ಕೂಡ ತೋಚಿರಲಿಲ್ಲ. ಆಗ ವಿಷ್ಣು ದಾದ(Vishnu dada) ಅವರು ಹೇಳಿದಂತಹ ಮಾತುಗಳು ನಿಜಕ್ಕೂ ಆಶ್ಚರ್ಯ ಚಕಿತರನ್ನಾಗಿಸುವಂತೆ ಮಾಡಿತ್ತು ಎನ್ನಬಹುದು.

Join WhatsApp
Google News
Join Telegram
Join Instagram

ಹೌದು ಹುಚ್ಚ ಸಿನಿಮಾ ನೋಡಿದ ಬಳಿಕ ಕಿಚ್ಚನಿಗೆ ವಿಷ್ಣುದಾದ ಎಲ್ಲಿದ್ರಿ ಸುದೀಪ್(Sudeep) ಇಷ್ಟು ವರುಷ ನಿಜಕ್ಕೂ ಅದ್ಬುತ ಸಿನಿಮಾ ಮಾಡಿದ್ದೀರಾ. ನಿಮ್ಮ ನಟನೆ ತುಂಬಾನೇ ಚೆನ್ನಾಗಿದ್ದು ನಿಮ್ಮನ್ನು ಕನ್ನಡ ಚಿತ್ರರಂಗ ಒಳ್ಳೆಯ ರೀತಿಯಲ್ಲಿ ಸ್ವಾಗತ ಮಾಡುತ್ತದೆ. ಸಿಗುವಂತಹ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ ಎಂಬುದಾಗಿ ವಿಷ್ಣುವರ್ಧನ್ ರವರು ಕಿಚ್ಚನ ಬೆನ್ನು ತಟ್ಟಿ ಹೊಗಳಿದ್ದರಂತೆ. ಇನ್ನು ನಟ ಕಿಚ್ಚ ಸುದೀಪ್ ರವರು ತಮ್ಮ ನೆಚ್ಚಿನ ನಟನಿಂದ ಸಿಕ್ಕಂತಹ ಈ ಅದ್ಬುತ ಹೊಗಳಿಕೆ ಮಾತುಗಳನ್ನು ಕೇಳಿ ಒಂದು ಸಂತೋಷದಿಂದ ಬಹಳ ಭಾವುಕರಾದರು. ಇಂದಿಗೂ ಕೂಡ ತಮ್ಮ ಸಿನಿಮಾರಂಗದ ಅಘೋಷಿತ ಗುರುವನ್ನಾಗಿ ಕಿಚ್ಚ ಸುದೀಪ್ ರವರು ವಿಷ್ಣುವರ್ಧನ್ ಅವರನ್ನು ಸ್ವೀಕರಿಸಿದ್ದಾರೆ ಎನ್ನುವುದು ಎಲ್ಲರಿಗೂ ಕೂಡ ತಿಳಿದಿರುವಂತಹ ವಿಚಾರವಾಗಿದೆ.

ಇನ್ನು ಸುದೀಪ್ ಮೊದಲು ನಾಯಕನಟನಾಗಿ ನಟಿಸಿದ ಸಿನಿಮಾ ಸ್ಪರ್ಷ (Sparsha). ಆ ಸಿನಿಮಾ ಅವರಿಗೆ ಗುರುತು ತಂದುಕೊಟ್ಟಿತಾದರೂ ಅದೇ ಸಮಯದಲ್ಲಿ ನಡೆದ ರಾಜ್‌ಕುಮಾರ್ (Rajkumar) ಅಪಹರಣದಿಂದಾಗಿ ಸಿನಿಮಾ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಳ್ಳಲಿಲ್ಲ. ಇನ್ನು ಸ್ಪರ್ಷ ಸಿನಿಮಾ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬಂದಿದ್ದವು. ಹೌದು ಸುದೀಪ್ ನಟನೆ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಆದರೇನು ಮಾಡುವುದು ಸಿನಿಮಾ ಓಡಲಿಲ್ಲ. ಅದಕ್ಕೆ ದುರಾದೃಷ್ಟವೊಂದೇ ಕಾರಣವಾಗಿತ್ತು.

ಇನ್ನು ಇಂಥಹಾ ಸಮಯದಲ್ಲಿ ಸುದೀಪ್‌ಗೆ ಮಾಸ್ ಹೀರೋ ಲುಕ್ ಜೊತೆಗೆ ಸುದೀಪ್ ಎಲ್ಲ ರೀತಿಯ ಪಾತ್ರಗಳನ್ನೂ ಕೂಡ ನಿರ್ವಹಿಸಬಲ್ಲ ನಟ ಎಂದು ಚಿತ್ರರಂಗಕ್ಕೆ ತೋರಿಸಿಕೊಟ್ಟ ಸಿನಿಮಾ ಹುಚ್ಚ. ಆ ಸಿನಿಮಾದ ಕ್ರೇಜ್ ಈಗಲೂ ಚಾಲ್ತಿಯಲ್ಲಿದೆ. ಆ ಸಿನಿಮಾದ ಮೂಲಕವೇ ಸುದೀಪ್ ಹೆಸರಿನ ಮುಂದೆ ಕಿಚ್ಚ ಉಪನಾಮ ಸೇರಿಕೊಂಡಿದ್ದು. ಇನ್ನು ಸುದೀಪ್ ಸಿನಿಮಾ ಜೀವನವನ್ನೇ ಬದಲಾಯಿಸಿದ ಹುಚ್ಚ ಸಿನಿಮಾದ ನಾಯಕನ ಪಾತ್ರಕ್ಕೆ ಸುದೀಪ್ ಮೊದಲ ಆಯ್ಕೆ ಆಗಿರಲಿಲ್ಲವೆಂದರೆ ನೀವು ನಂಬಲೇಬೇಕು.

Leave A Reply

Your email address will not be published.