Niranjan Deshpande: ಎರಡೂ ಕೈ ಇಲ್ಲದ ವ್ಯಕ್ತಿಯನ್ನು ಮದುಯಾಗಿದ್ಯಾಕೆ ನಿರಂಜನ್ ದೇಶಪಾಂಡೆ ಅಕ್ಕ? ಸತ್ಯ ಬಯಲಿಗೆ
ಸ್ಯಾಂಡಲ್‌ವುಡ್ ನಟ(Sandalwood Actor), ನಿರೂಪಕ(Anchor) ನಿರಂಜನ್ ದೇಶಪಾಂಡೆ ಎಲ್ಲರಿಗೂ ಗೊತ್ತು ಅವರು ಬಿಗ್ ಬಾಸ್(Bigg Boss) ಒಂದು ಸೀಸನ್ ನಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಅವರ ಅಕ್ಕನ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿರುವುದಿಲ್ಲ.ನಿರಂಜನೆ ದೇಶಪಾಂಡೆ ಅವರ ಮುದ್ದಿನ ಅಕ್ಕ ನಳಿನಿ ದೇಶಪಾಂಡೆ(Nalini Deshpande), ಅವರಿಗೆ ಈಗಾಗಲೇ ಮದುವೆಯಾಗಿದೆ ಆದರೆ ಅವರ ಗಂಡನಿಗೆ ಎರಡು ಕೈಗಳು ಕೂಡಾ ಇಲ್ಲ.ಹೌದು ಈ ಕುರಿತಂತೆ ಬಿಗ್ ಬಾಸ್ ಮಿನಿ ಸೀಸನ್ನಲ್ಲಿ ನಿರಂಜನ್ ಹೇಳಿಕೊಂಡಿದ್ರು.
ನಮಗೆ ಅಪ್ಪ ಇಲ್ಲ. ಅಮ್ಮ ಕೆಲಸಕ್ಕೆ ಹೋಗ್ತಾ ಇದ್ರು.. ನಾನು ಅಕ್ಕ ನಮ್ಮ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ನಾನು ನನ್ನ ಅಕ್ಕನ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆ. ಆದರೆ ಅಕ್ಕ ತನ್ನ ಹಳೆಯ ಪ್ರೀತಿಯಿಂದ ನೊಂದ ವಿಚಾರಕ್ಕೋ ಏನೋ ಮದುವೆ ಆಗಲು ಒಪ್ಪಲಿಲ್ಲ. ಹಾಗಾಗಿ ನನಗೆ ಆಕೆಯ ಮದುವೆ ಚಿಂತೆ ಯಾವಾಗಲೂ ಕಾಡುತ್ತಲೇ ಇತ್ತು.ನನ್ನ ಅಕ್ಕ ಸಂಗೀತ ಟೀಚರ್, ತುಂಬ ಜನರಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಳು. ನನಗಿಂತ ಜಾಸ್ತಿ ಆಕೆ ಜೀವನದ ಬಗ್ಗೆ ಕಂಡಿದ್ದಾಳೆ. ಎಂದಿದ್ದಾರೆ.
ಅಷ್ಟಕ್ಕೂ ನಳಿನಿ ದೇಶಪಂಡೆ ಮದುವೆಯಾಗಿರುವ ವ್ಯಕ್ತಿಯ ಹೆಸರು ಜಯಂತ್ ಎಂದು, ಇವರು ರಾಷ್ಟ್ರಮಟ್ಟದ ಈಜುಗಾರ ಎರಡು ಕೈ ಇಲ್ಲದಿದ್ದರು ಧೃತಿಗೆಡದೆ, ಸಾಧನೆ ಮಾಡಿದ್ದಾರೆ.ಒಮ್ಮೆ ವಿನಾಯಕ್ ಜೋಶಿ ಅವರ ವೆಬ್ ಸೀರಿಸ್ (Web Series)ಕಾರ್ಯಕ್ರಮವೊಂದಕ್ಕೆ ನಳಿನಾ ಹೋಗಿದ್ದರು. ಆಗ ಅವಳಿಗೆ ರಾಷ್ಟ್ರಮಟ್ಟದ ಈಜುಗಾರ ಜಯಂತ್ ಪರಿಚಯವಾಗಿದೆ, ಅವರನ್ನು ನೋಡಿ ನಳಿನಿಯವರು ಸ್ಫೂರ್ತಿ ಪಡೆದಿದ್ದಾರೆ. ಜಯಂತ್ಗೆ ಎರಡು ಕೈ ಇಲ್ಲ, ಹೊಟ್ಟೆ ಅರ್ಧ ಕಟ್ ಆಗಿದೆ, ಆದರು ಅವರನ್ನು ಮದುವೆಯಾಗ್ತೀನಿ ಅಂತ ನಳಿನಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ.
ಮೊದಲು ನಿರಂಜನ್ ಈ ಮದುವೆಯ ಬಗ್ಗೆ ಅಮುನಾವಾಗಿ ಮಾತನಾಡಿನಂದ್ರೆ ಅನಕಂಪಕ್ಕಾಗಿ ಮದುವೆಯಾಗುತ್ತಿದ್ದಾರೆ ಎಂದುಕೊಂಡಿದ್ದರಂತೆ ಆದರೆ ನಂತರ ಇಬ್ಬರ ಪ್ರೀತಿ ಕಂಡು ಅವರು ಮದುವೆಗೆ ಒಪ್ಪಿದ್ರಂತೆ.ತುಂಬ ಜನರು ಕಮ್ಮಿಗೆ ಸಿಗ್ತು ಅಂತ ಮದುವೆ ಮಾಡಿಬಿಟ್ಯಾ?ಅಂತೆಲ್ಲ ಹೇಳಿದ್ದಾರೆ ಆದರೆ ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳೋದಿಲ್ಲ. ಅಂತವರನ್ನು ಕಸ ಅಂತ ಅಂದುಕೊಂಡು, ಪಕ್ಕಕ್ಕೆ ಸರಿಸಿ ಮುಂದೆ ಹೋಗುತ್ತಿರಬೇಕು.. ಇವತ್ತು ನನ್ನ ಅಕ್ಕ ತುಂಬ ಚೆನ್ನಾಗಿ ಗಂಡನ ಜೊತೆ ಬದುಕುತ್ತಿದ್ದಾಳೆ ಎಂದಿದ್ದಾರೆ.