Ashwini PuneethRajkumar: ಅಶ್ವಿನಿ ಪುನೀತ್ ರಾಜ್ ಕುಮಾರ್ ಬಳಿ ವಿಶೇಷ ಬೇಡಿಕೆ ಮುಂದಿಟ್ಟ ಅಭಿಮಾನಿ
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Punith Rajkumar) ಅವರಿಗೆ ಅಭಿಮಾನಿಗಳು ಮೊದಲಿಂದಲೂ ಹೆಚ್ಚೆಂದೆ ಹೇಳಬಹುದು ಅದೇ ರೀತಿ ಇಂತಹ ಅಭಿಮಾನಿಗಳು ಅವರ ಹುಟ್ಟುಹಬ್ಬದ ದಿನದಂದು ಸಾರ್ಥಕ ಮೆರೆಯುವ ಕೆಲಸವನ್ನು ಆಗಾಗ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಅಭಿಮಾನಿ ಕುಟುಂಬವು ಪುನೀತ್ ಅವರ ಜನ್ಮದಿನದಂದೇ ಅವರ ಮನೆ ಮುಂದೆ ಬಂದು ಅವರ ಪತ್ನಿ ಅಶ್ವಿನಿ ಪುನೀತ್ (Puneeth rajkumar) ಅವರಲ್ಲಿ ವಿಶೇಷ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ.
ಪುನೀತ್ ಅವರ ಜನ್ಮದಿನ ಎಂದು ಗೊತ್ತಾಗುತ್ತಲೆ ಅಪಾರ ಸಂಖ್ಯೆ ಅಭಿಮಾನಿಗಳು ಅಶ್ವಿನಿ ಪುನೀತ್ ಅವರ ಮನೆ ಮುಂದೆ ಜಮಾಯಿಸಿದ್ದಾರೆ. ಈ ಮೂಲಕ ನೆರೆದ ಸಾವಿರಾರು ಮಗಳ ಪೈಕಿ ಓರ್ವರು ಮಾತ್ರ ಹೆಚ್ಚು ಆಸಕ್ತಿದಾಯಕವಾಗಿ ಕಾಣಿಸಿದರು. ಈ ಮೂಲಕ ಎಳೆ ಮಗುವನ್ನು ಎತ್ತಿಕೊಂಡ ತಾಯಿ ಅಶ್ವಿನಿ ಮೇಡಂ ಬರಲು ಕಾಯುತ್ತಿದ್ದಾರೆ. ಈ ಮೂಲಕ ಆ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಏನು ಆ ಬೇಡಿಕೆ?
ಮಗುವನ್ನು ಹೊತ್ತ ತಾಯಿಯು ನಾನು ಅಶ್ವಿನಿ (Ashwini) ಮೇಡಂ ಅವರನ್ನು ನೋಡಬೇಕು ನನ್ನ ಪಾಪುವಿಗೆ ಅವರು ನಾಮಕರಣ ಮಾಡಬೇಕು. ಅಪ್ಪು ಎಂದೆ ನನ್ನ ಮಗನಿಗೆ ಹೆಸರು ಇಡುತ್ತೇನೆ ಇಂದು ಅಪ್ಪು ಸರ್ ಜನ್ಮದಿನ ನನ್ನ ಪಾಪುವಿಗೆ 19ವರ್ಷ ಅಷ್ಟೇ ಹಾಗಾಗಿ ಇಂದೇ ಈ ಶುಭದಿನದಂದೇ ಮಗುವಿನ ನಾಮಕರಣ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದಿದ್ದಾರೆ. ಬಳಿಕ ಅಲ್ಲಿ ನೆರೆದಿದ್ದ ಅಪ್ಪು ಅಭಿಮಾನಿಗಳು ಈ ಮಗುವಿಗೂ ಅಪ್ಪು ಅಭಿಮಾನವಿದೆ. ವಿತ್ ಬ್ಲಡ್ ಪವರ್ ಸ್ಟಾರ್ ಫ್ಯಾನ್ಸ್ ನಾವು ರಾಜ್ ಕುಟುಂಬದ ವಿರುದ್ಧ ಯಾರು ಬರಬಾರದು ಬಂದರೆ ಸರಿ ಇರೊಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಅಪ್ಪು ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪು ನಮ್ಮೊಂದಿಗೆ ಜೀವಂತವಾಗಿದೆ. ಅದೇ ರೀತಿ ಅಪ್ಪು ಅವರ ಸ್ಮರಣಾರ್ಥ ರಕ್ತದಾನ , ಅನ್ನದಾನ, ವಿದ್ಯಾದಾನ ಇನ್ನು ಅನೇಕನ ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ನೀವು ಪುನೀತ್ ಅಭಿಮಾನಿಯಾಗಿದ್ದಲ್ಲಿ ಅವರ ಯಾವ ಸಿನೆಮಾ ನಿಮಗೆ ಇಷ್ಟ ಮತ್ತು ಯಾಕೆಂದು ಕಮೆಂಟ್ ಮಾಡಿ ತಿಳಿಸಿ.