Karnataka Times
Trending Stories, Viral News, Gossips & Everything in Kannada

Amrutha Iyengar: ಇಂಡಸ್ಟ್ರಿಯಲ್ಲಿ ಆ ನಟಿಯ ರೀತಿ ಬೆಳೆಯಬೇಕು ಎಂದ ಅಮೃತಾ ಅಯ್ಯಂಗರ್.

Advertisement

ರಮ್ಯಾ ಇಸ್ ಮೈ ಎವರಿತಿಂಗ್ (Ramya Is My Everything) ಎಂದು ಮಾತು ಆರಂಭಿಸಿದ ಸ್ಯಾಂಡಲ್ ವುಡ್ ನ (Sandalwood) ಯುವ ನಟಿ ಅಮೃತಾ ಅಯ್ಯಂಗಾರ್ (Amrutha Iynger) ರವರು ರಮ್ಯಾ ರವರು ನನಗೆ ಪರಿಚಯವಾಗಿದ್ದು ಫ್ರೆಂಡ್ ಮೂಲಕ. ಅದಾಗಲೇ ನಾನ್ಯಾರು ಎಂದು ಅವರಿಗೆ ಗೊತ್ತಿತ್ತು. ಇನ್ಸ್ಟಾಗ್ರಾಮ್ (Instagram) ನಲ್ಲಿ ಫಾಲೋ ಮಾಡುವುದಕ್ಕೆ ಶುರು ಮಾಡಿದರು.

ನನಗೆ ಇನ್ನು ಕೂಡ ಅದು ಫ್ಯಾನ್ ಮೂಮೆಂಟ್. ನೀವು ತುಂಬಾ ಇನ್ಸ್ ಪೈರ್ (Inspire) ಮಾಡ್ತಿರ.. ನಿಮ್ಮಿಂದ ಎಷ್ಟೋಂದು ವಿಷಯ ಕಲಿತೆ ಎಂದು ಅವರನ್ನ ಭೇಟಿ (Meet) ಆದಾಗ ಹೇಳುತ್ತಿದ್ದೆ ಎಂದು ರಮ್ಯಾ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ ಅಮೃತಾ. ಅಲ್ಲದೇ ಇಂಡಸ್ಟ್ರಿಗೆ ಬಂದಾಗ ಹೆಸರು ಮಾಡುದ್ರೆ ರಮ್ಯಾ ಅವರ ತರ ಹೆಸರು ಮಾಡಬೇಕು ಎಂದು ಕೊಂಡೆ ಬಂದೆ ಎಂದಿರುವ ಅಮೃತಾ ರಮ್ಯಾ ರವರು ಈಗಲೂ ಕೂಡ ನಟಿಸುತ್ತಾರೆ ಅಂದರೆ ಸೋಶಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ಫೋಸ್ಟ್(Post) ಬರುತ್ತದೆ. ಈ ರೀತಿ ಅಭಿಮಾನಿಗಳು ಕಾಯೋದು ಇದೆಯಲ್ಲ ಅದು ಎಲ್ಲಾ ಹೀರೋಯಿನ್ ಗಳಿಗೂ ಆ ಪವರ್ ಬರುವುದಿಲ್ಲ.. ನನಗೂ ಕೂಡ ಅವರ ರೀತಿ ಹೆಸರು ಮಾಡಬೇಕು ಎಂಬ ಆಸೆ ಇದೆ ಎಂದಿದ್ದಾರೆ ಅಮೃತಾ ಅಯ್ಯಂಗಾರ್.

ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿರುವ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ(Divya Spandana) ರವರು ಕಳೆದ ವರುಷ ವಿದೇಶಿ ಪ್ರವಾಸ ಮಾಡಿದ್ದರು.. ರಮ್ಯಾ ಅವರಿಗೆ ಪ್ರವಾಸ ಎಂದರೆ ತುಂಬ ಅಚ್ಚುಮೆಚ್ಚಾಗಿದ್ದು ಹಾಗಾಗಿ ನಟಿ ಅಮೃತಾ ಅಯ್ಯಂಗಾರ್ ಜೊತೆ ಲಂಡನ್‌ ಗೆ(London) ಹೋಗಿದ್ದರು.ನಾಲ್ಕು ದಿನಗಳ ಕಾಲ ರಮ್ಯಾ ಹಾಗೂ ಅಮೃತಾ ಲಂಡನ್‌ನಲ್ಲಿ ಸಮಯ ಕಳೆದಿದ್ದು ಹೊಸ ಹೊಸ ರೀತಿಯ ಆಹಾರಗಳನ್ನು ಸೇವಿಸುತ್ತ ಅಲ್ಲಿನ ಕ್ಷಣಗಳನ್ನು ಎಂಜಾಯ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಲಂಡನ್‌ನ ಪ್ರಮುಖ ಸ್ಥಳಗಳ ಫೋಟೋಗಳನ್ನು ಅಪ್‌ಲೋಡ್(Upload) ಮಾಡಿದ್ದ ಅಮೃತಾ ಅಯ್ಯಂಗಾರ್ ಅಭಿಮಾನಿಗಳಿಗೆ ಸಂತಸ ನೀಡಿದ್ದರು.

ಇನ್ನು ರಮ್ಯಾ ಕೆಲವು ಸಮಯಗಳ ಕಾಲ ಚಿತ್ರರಂಗವನ್ನು ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಆದರೆ ಇದೀಗ ಡಾಲಿ ಧನಂಜಯ್ (Dhananjay) ಅಭಿನಯದ ಉತ್ತರಖಂಡ ಚಿತ್ರದ ಮೂಲಕ ನಟಿ ರಮ್ಯಾ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಮೃತ ಅಯ್ಯಂಗಾರ್ ಲವ್ ಮೊಕ್ಟ್ರೇಲ್(Love Moctail) ಚಿತ್ರದ ಮೂಲಕ ಕನ್ನಡಿಗ ಮನ ಗೆದ್ದಿದ್ದರು. ನಂತರ ಡಾಲಿ ಧನಂಜಯ ಅಭಿನಯದ ಬಡವ ರಾಸ್ಕಲ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಅಮೃತ ಅಯ್ಯಂಗಾರ್ ಇದೀಗ ಹೊಯ್ಸಳ ಎಂಬ ಹೊಸ ಚಿತ್ರದಲ್ಲಿ ಬ್ಯೂಸಿ ಆಗಿದ್ದಾರೆ.

ಇತ್ತೀಚೆಗಷ್ಟೇ ಅವರ ಅಭಿನಯದ ಫ್ಯಾಮಿಲಿ ಪ್ಯಾಕ್ ಹಾಗೂ ವಿಂಡೋಸೀಟ್​ ಸಿನಿಮಾ ಬಿಡುಗಡೆಯಾಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.ಇದುವರೆಗೂ ವಿಭಿನ್ನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಟಿ ನಾನು ಸಿನಿಮಾ ಆಯ್ಕೆ ಮಾಡುವಾಗ ಬಹಳ ಯೋಚನೆ ಮಾಡುತ್ತೇನೆ. ಕಥೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ನಂತರ ನಿರ್ಧರಿಸುತ್ತೇನೆ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಸದ್ಯ ಡಾಲಿ ಜೊತೆ ಮೂರನೇ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದು ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಗುಸು ಗುಸು ಕೂಡ ಕೇಳಿ ಬರುತ್ತಿದೆ.

Leave A Reply

Your email address will not be published.