Karnataka Times
Trending Stories, Viral News, Gossips & Everything in Kannada

Divya Shridhar: ಲವ್ ಜಿಹಾದ್ ಸುಳಿಯಲ್ಲಿ ಸಿಲುಕಿದ್ದ ನಟಿ ದಿವ್ಯ ಶ್ರೀಧರ್ ಗೆ ಮತ್ತೊಂದು ಆಘಾತ

Advertisement

ಲವ್ ಜಿಹಾದ್ ಈ ಪ್ರಕರಣಕ್ಕೆ ಹಲವಾರು ವ್ಯಕ್ತಿಗಳು ಈಗಾಗಲೇ ಬಲಿಪಶುಗಳಾಗಿದ್ದಾರೆ. ಇತ್ತೀಚೆಗೆ ನಡೆದ ದೆಹಲಿಯ ಪ್ರಕರಣವಂತೂ ಇಡೀ ದೇಶವನ್ನೆ ನಿಬ್ಬೆರಗಾಗುವಂತೆ ಮಾಡಿತ್ತು ಅದೇ ರೀತಿ ಈ ಲವ್ ಜಿಹಾದ್ (Love jihad) ಪ್ರಕರಣ ಇಂದು ದೇಶವ್ಯಾಪಿ ಸುದ್ದಿ ಮಾಡಿದ್ದು ಯಾರನ್ನು ಬಿಟ್ಟಿಲ್ಲ ಎನ್ನಬಹುದು.

ಕಿರುತೆರೆ ನಟಿಗೆ ಕಿರುಕುಳ

ಇಂದು ಲವ್ ಜಿಹಾದ್ ಗೆ ಸೆಲೆಬ್ರಿಟಿಗಳು ಸಹ ಪಡುವ ಸ್ಥಿತಿ ಎದುರಾಗಿದೆ. ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ನಟಿ ದಿವ್ಯಾ ಶ್ರೀಧರ್‌ (Divya sridhar) ‌‌ ನಿಮಗೆ ನೆನಪಿರಬಹುದು. ಸ್ಟಾರ್ ಸುವರ್ಣ ವಾಹಿನಿಯ ಆಕಾಶ ದೀಪ (Akasha deepa) ‌ ಧಾರವಾಹಿಯಲ್ಲಿ ಇವರು ನಾಯಕಿ ಅಂದರೆ ದೀಪನ ಪಾತ್ರ ನಿರ್ವಹಿಸಿದ್ದರು. ಅವರಿಗೆ ಒಳ್ಳೆ ಫೇಮ್ ಕೂಡ ಇದೇ ಧಾರವಾಹಿ ಇಂದ ಸಿಕ್ಕಿತ್ತು ಆದರೆ ಈಕೆ ಮದುವೆ ವಿಚಾರದಲ್ಲಿ ಎಡವಿದ್ದು ಇಂದು ಸಂಕಷ್ಟ ಪಡುವ ಸ್ಥಿತಿಗೆ ಬಂದು ತಲುಪಿದ್ದಾಳೆ.

ಇವರು ಕನ್ನಡ ಮಾತ್ರವಲ್ಲದೇ ತಮಿಳಿನಲ್ಲೂ ಸಹ ಫೇಮಸ್ ನಟಿಯಾಗಿದ್ದಾರೆ. ಅದೇ ರೀತಿ ತಮಿಳಿನ ಧಾರವಾಹಿಯಲ್ಲಿ ನಟಿಸುವ ಸಂದರ್ಭ ಅವರಿಗೆ ಆರ್ನವ್ ಉರ್ಫ್ ಅಮ್ಜದ್​ಖಾನ್‌ ಅವರು ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಐದು ವರ್ಷಗಳ ಕಾಲ ಜೊತೆಗಿದ್ದು, ಪ್ರೇಮಿಸಿ ಮದುವೆಯಾಗಿದ್ದ ನಟಿ ಈಗ ಇಕ್ಕಟ್ಟಿನ ಪರಿಸ್ಥಿಗೆ ಸಿಲುಕಿದ್ದಾರೆ.

ವೀಡಿಯೋ ಮಾಡಿ ಸಂಕಷ್ಟ ತೋಡಿಕೊಂಡ ನಟಿ

ಇತ್ತೀಚೆಗಷ್ಟೇ ದಿವ್ಯಾ (Divya) ಅವರು ತಮ್ಮ ಜೀವನದಲ್ಲಿ ಪಟ್ಟ ಕಷ್ಟವನ್ನು ಹೇಳಿದ್ದಾರೆ.‌ ತಾನು ಮದುವೆಯಾದ ಯುವಕ ತನ್ನ ಹೆಸರನ್ನು ಸುಳ್ಳು ಹೇಳಿ ಯಾಮಾರಿಸಿದ್ದಾನೆ. ಆರ್ನವ್ ಉರ್ಫ್ ಅಮ್ಜದ್​ಖಾನ್‌ (Arnav urf amzadh khan) ಅವನ ಮೂಲ ಹೆಸರು ಅವನು ನನ್ನನ್ನು ಮದುವೆಯಾಗಿದ್ದಾನೆ ಆದರೆ ಈ ವಿಚಾರ ಮಾತ್ರ ಯಾರಿಗೂ ಹೇಳಬಾರದೆಂಬ ಕಂಡಿಷನ್ ಹಾಕಿದ್ದಾನೆ. ಅವನು ನಂಗೆ ಸಾಕಷ್ಟು ತೊಂದರೆ ಕೊಟ್ಟಿದ್ದು ಯಾರಿಗೂ ಈ ವಿಚಾರ ಹೇಳದಂತೆ ಬೆದರಿಕೆ ಸಹ ಹಾಕಿದ್ದಾರೆ.

ಕೋವಿಡ್(Covid) ಅವಧಿಯಲ್ಲಿ ಅವರ ಬಳಿ ಹಣ ಇಲ್ಲದಾಗ ನಾನು ನೆರವಾದೆ ಅವರ ಮನೆಕಟ್ಟಲು ಸಹ ನನ್ನಬಳಿ ಹಣ ಪಡೆದಿದ್ದಾರೆ ನನಗೆ ಪ್ರತಿ ದಿನ ಹಿಂಸೆಯಾಗಿದೆ ಎಂದು ವೀಡಿಯೋ(Video) ಮಾಡಿ ನಟಿ ಕಣ್ಣೀರಿಟ್ಟಿದ್ದಾರೆ. ನಾನು ಈಗ ತುಂಬು ಗರ್ಭಿಣಿ ಇದ್ದ ಹಣವೆಲ್ಲ ಗಂಡನಿಗೆ ನೀಡಿದ್ದೇನೆ ನನಗೆ ತುಂಬಾ ಹಣಕಾಸಿನ ಸಹಾಯದ ಅಗತ್ಯ ಇದೆ. ಡೆಲಿವರಿಗೆ 15 ದಿನ ಬಾಕಿ ಇದೆ ಅಷ್ಟೇ ಹಾಗಿದ್ದರೂ ಎಲ್ಲದನ್ನೂ ನಾನೆ ನಿಭಾಯಿಸಬೇಕು. ಈಗಲೂ ನಾನು ಕೆಲಸಕ್ಕೆ ಹೋಗ್ತೇನೆ ನಂಗಾಗಿ ಧಾರವಾಹಿ ತಂಡದವರು ತಮ್ಮ ಸ್ಕ್ರಿಪ್ಟನ್ನೆ ಬದಲಾಯಿಸಿದ್ದಾರೆ. ಅವನು ಮಾಡಿದ ತಪ್ಪಿಗೆ ನೀನ್ಯಾಕೆ ಶಿಕ್ಷೆ ಅನುಭವಿಸುವೆ ಈ ಮಗು ಬೇಡ ಎಂದು ತುಂಬಾ ಜನ ಹೇಳಿದ್ದಾರೆ ಆದರೆ ಮಗು ಏನು ತಪ್ಪು ಮಾಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಇವರ ಪತಿ ಕೂಡ ಧಾರವಾಹಿ ನಟನಾಗಿದ್ದು ಅತೀ ಕಡಿಮೆ ಅವಧಿಯಲ್ಲಿ ಫೇಮಸ್ ಆದ ಸ್ಟಾರ್ ನಟ ಎನ್ನಬಹುದು. ಇವರು ಕಿರುತೆರೆಯ ಶಕ್ತಿ ಧಾರವಾಹಿಯಲ್ಲಿ ನಟಿಸಿ ಬಳಿಕ ಅಲ್ಲಿ ದಿವ್ಯಾ ಅವರ ಪರಿಚಯವಾಗಿದ್ದು ಪ್ರೀತಿಸಿದ ಬಳಿಕ ಮತಾಂತರಕ್ಕೆ ಸತತವಾಗಿ ಅವರಲ್ಲಿ ಕೇಳಿ ಕೊಂಡಿದ್ದಾರೆ. ಬಳಿಕ ದಿವ್ಯಾ ಅವರು ಸಹ ಮತಾಂತರವಾಗಿದ್ದಾರೆ. ಆದರೆ ಈತನ ನಡವಳಿಕೆ ಸರಿ ಇಲ್ಲ ಎಂಬ ಕೆಲವು ಗಾಸಿಪ್ ಸಹ ಹರಿದಾಡುತ್ತಿವೆ. ಆತನಿಗೆ ಮದುವೆಯಾದರೂ ಅದನ್ನು ಬೇರೆ ಅವರ ಜೊತೆ ಮುಚ್ಚಿಟ್ಟು ಅಕ್ರಮ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.

ಆದರೆ ಇನ್ನು ಕೆಲವು ಮೂಲ ಆತನ ವೃತ್ತಿ ಬದುಕಿನಲ್ಲಿ ಅವಕಾಶ ಸಿಗದಿದ್ದರೆ ಎಂಬ ಭಯಕ್ಕೆ ಈ ರೀತಿಯಾಗಿ ಮದುವೆಯಾದ ವಿಚಾರ ಮುಚ್ಚಿಟ್ಟಿದ್ದಾನೆ ಎನ್ನಲಾಗಿದೆ. ಅದೇನೆ ಇದ್ದರೂ ಬಾಳಿ ಬದುಕಿ ಹಸನಾದ ಜೀವನ ಕಟ್ಟುಕೊಳ್ಳಬೇಕಾದ ಇವರು ಈಗ ಕಷ್ಟಕೂಪಕ್ಕೆ ಬಿದ್ದಂತಾಗಿದೆ. ಇಂತ‌ತಹ ಲವ್ ಜಿಹಾದ್ ಬಗ್ಗೆ ಅರಿತವರು ಇನ್ನೆಂದಿಗೂ ಈ ತಪ್ಪು ಮಾಡುವ ಮನಸ್ಸು ಮಾಡದಿದ್ದರೆ ಅಷ್ಟೇ ಸಾಕೆನ್ನಬಹುದು. ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.