Anchor Anushree: ಹೆಣ್ಣುಮಕ್ಕಳಿಗೆ ದರ್ಶನ್ ಕೊಡುವ ಗೌರವದ ಬಗ್ಗೆ ಸತ್ಯ ಹೊರಹಾಕಿದ ಅನುಶ್ರೀ…

Advertisement
ಯಾವುದೇ ಸ್ಟೇಜ್ ಶೋ (Stage Show) ಆಗಿರಬಹುದು ಸಿನಿಮಾ ಕಾರ್ಯಕ್ರಮಗಳೇ ಆಗಿರಬಹುದು ಅಥವಾ ಸಂದರ್ಶನಗಳೇ (Interview) ಆಗಿರಬಹುದು ಎಲ್ಲೇ ಇದ್ದರೂ ಕೂಡ ಅವರು ಮನಸಲ್ಲಿ ಏನಿದೆ ಅದನ್ನ ಎಲ್ಲರಿಗೂ ಕೂಡ ಇಷ್ಟ ಆಗುವ ಹಾಗೆ ಮಾತನಾಡುತ್ತಾರೆ ಮತ್ತು ಎಲ್ಲರ ಜೊತೆ ಬೆರೆಯುತ್ತಾರೆ..ಹೀಗೆ ಅಂದಿದ್ದು ಕನ್ನಡದ (Kannada) ಬಹುಬೇಡಿಕೆಯ ಹಾಗೂ ಜನಪ್ರಿಯ ನಿರೂಪಕಿ (Anchor) ಅನುಶ್ರೀ (Anushree) ಅವರು. ಅಷ್ಟಕ್ಕೂ ಅನುಶ್ರೀ ಮಾತನಾಡುತ್ತಿರುವುದು ಯಾರ ಬಗ್ಗೆ ಗೊತ್ತಾ? ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ (Box Office Sulthan) ಡಿ ಬಾಸ್ ದರ್ಶನ್ (Darshan) ರವರ ಬಗ್ಗೆ.
ಇನ್ನು ಮಾತು ಮುಂದುವರಿಸಿದ ಅನುಶ್ರೀ ಮೊನ್ನೆ ತಾನೇ ಸರ್ (Darshan) ಒಂದು ಕಾರ್ಯಕ್ರಮ ನನಗೆ ಸಿಕ್ಕಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋದಾಗ ದರ್ಶನ್ ಸರ್ ಅಲ್ಲಿಂದ ತೆರಳುತ್ತಿದ್ದರು. ಅಲ್ಲಿ ನಾನು ಅವರಿಗೆ ಸಿಕ್ಕಿದೆ. ಎಷ್ಟು ಪ್ರೀತಿ ಅಭಿಮಾನದಿಂದ ಸರ್ ಮಾತನಾಡಿಸದರು ಎಂದರೆ ಬಹಳ ಖುಷಿ ಆಯ್ತು. ಇನ್ನೊಂದು ವಿಚಾರ ಏನೆಂದರೆ ದರ್ಶನ್ ಸರ್ ಗೆ ಯಾವುದೆ ಮಹಿಳೆ ಸಿಕ್ಕರೂ ಅವರು ಮೊದಲು ಮಾತನಾಡಿಸುವುದು ಹೇಗಿದ್ಯಮ್ಮ ಅಂತ? ಚೆನ್ನಾಗಿದ್ಯಮ್ಮ ಅಂತ.. ಇದು ಡಿ ಬಾಸ್ ಹೆಣ್ಣಿಗೆ ನೀಡುವ ಗೌರವ ಎಂದರೆ ಅನುಶ್ರಿ. ಸದ್ಯ ಅನುಶ್ರೀ ಮಾತು ಕೇಳಿ ಖುಷಿಯಾಗಿದ್ದಾರೆ ಡಿ ಬಾಸ್ ಫ್ಯಾನ್ಸ್..
ಇನ್ನು ಯುಗಾದಿ ಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಹಬ್ಬದ ಸಂಭ್ರಮದಲ್ಲಿ ಸಿನಿರಸಿಕರಿಗೆ ವಿವಿಧ ಚಿತ್ರತಂಡಗಳಿಂದ ಸ್ಪೆಷಲ್ ಗಿಫ್ಟ್‌ಗಳು ಕಾಯ್ತಿದೆ. ಕಾಟೇರ (Katera) ಚಿತ್ರತಂಡ ನಾಯಕಿಯ ದರ್ಶನ ಮಾಡಿಸುವುದಾಗಿ ಘೋಷಿಸಿದ್ದು ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಾಧನಾ ರಾಮ್ (Radhana Ran) ನಟಿಸುತ್ತಿದ್ದಾರೆ. ತರುಣ್ ಸುಧೀರ್ (Tarun Sudheer) ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ.
ಇನ್ನು ವರಲಕ್ಷ್ಮಿ ಹಬ್ಬದ ಸಂಭ್ರದದಲ್ಲಿ ಕಾಟೇರ ಸಿನಿಮಾ ಸೆಟ್ಟೇರಿದ್ದು D56 ಹೆಸರಿನಲ್ಲಿ ಶುರುವಾಗಿದ್ದ ಸಿನಿಮಾಗೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಟೇರ ಎನ್ನುವ ಜಬರ್ದಸ್ತ್ ಟೈಟಲ್ ಫಿಕ್ಸ್ ಮಾಡಲಾಗಿತ್ತು. ಸದ್ಯ ಈಗಾಗಲೇ ರಾಕ್‌ಲೈನ್ ಸ್ಟುಡಿಯೋ ಹೈದರಾಬಾದ್ ಹಾಗೂ ಕನಕಪುರದಲ್ಲಿ ಚಿತ್ರದ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು ಶೀಘ್ರದಲ್ಲೇ ಹೊಸ ಶೆಡ್ಯೂಲ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇನ್ನು ಇದೆಲ್ಲರ ನಡುವೆ ಚಿತ್ರದಲ್ಲಿ ನಾಯಕಿಯ ಲುಕ್ ರಿವೀಲ್ ಮಾಡುವುದಾಗಿ ನಿರ್ದೇಶಕ ತರುಣ್ ಸುಧೀರ್ ಘೋಷಿಸಿದ್ದು ಯುಗಾದಿ ಹಬ್ಬಕ್ಕೆ ಕಾಟೇರ ನ ನಾಯಕಿ ಅವತಾರ ಅನಾವರಣವಾಗಲಿದೆ.