Anchor Anushree: ಕಬ್ಜ ಪ್ರೀ ರಿಲೀಸ್ ಇವೆಂಟ್ ಗೆ ಅನುಶ್ರೀ ಪಡೆದ ಸಂಭಾವನೆ ಕೊನೆಗೂ ಹೊರಕ್ಕೆ
ಬೆಂಕಿಪಟ್ಣ (Benki Pattana) ಹಾಗೂ ಉಪ್ಪು ಹುಳಿ ಖಾರ (Uppu Huli Kaara) ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಅನುಶ್ರೀ (Anushree) ಒಬ್ಬ ಮೌಲ್ಯಾಧಾರಿತ ಅಭಿನೇತ್ರಿಯಾಗುವ ಆಶಯ ಕೂಡ ಹೊಂದಿದ್ದಾರೆ. ಸದ್ಯ ಕನ್ನಡ ಕಿರುತೆರೆಯ (Kannada Television) ನಂಬರ್ 1 ನಿರೂಪಕಿ (Anchor) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದುಜೀವನದಲ್ಲಿ ಎದುರಾದ ಅದೆಷ್ಟೋ ಕಷ್ಟಗಳನ್ನು ಏಕಾಂಗಿಯಾಗಿ ಎದುರಿಸುತ್ತಾ ಈ ಹಂತಕ್ಕೆ ಬೆಳೆದಿರುವುದು ನಿಜಕ್ಕೂ ಇತರರಿಗೆ ಮಾದರಿಯೇ ಸರಿ. ಇನ್ನು ಅನುಶ್ರೀ ಯವರು ಯೂಟ್ಯೂಬ್ ನಲ್ಲಿ (YouTube) ಚಾನಲ್ ಕೂಡ ಹೊಂದಿದ್ದು ಸೆಲೆಬ್ರಿಟಿ ಟಾಕ್ ಶೋ (Celebrity Talk Show) ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿಯೂ ಸೆನ್ಸೇಷನ್ ಮೂಡಿಸುತ್ತಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಸದಾ ಸಕ್ರಿಯರಾಗಿರುವ ಅನುಶ್ರೀ ವಿಶೇಷ ಡ್ಯಾನ್ಸ್ ವಿಡಿಯೋಗಳನ್ನು ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತುರುತ್ತಾರೆ. ಇನ್ನು ಅನುಶ್ರೀ ಅವರೇ ಹೇಳುವ ಹಾಗೆ ಅನುಶ್ರೀ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.
ಇನ್ನು ಸಿನಿಮಾ ಈವೆಂಟ್ ಗಳಲ್ಲೂ ಕೂಡ ಕಾಣಿಸಿಕೊಳ್ಳುವ ಅನುಶ್ರೀ ಎಲ್ಲರನ್ನ ಮೋಡಿ ಮಾಡುತ್ತಾರೆ. ಸದ್ಯ ಇದೀಗ ಉಪೇಂದ್ರ (Upendra) ಸುದೀಪ್(Sudeep) ಶಿವರಾಜ್‌ಕುಮಾರ್ (shivrajkumar) ನಟನೆಯ ಕಬ್ಜ (Kabza) ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆದಿದ್ದು ಈ ಕಾರ್ಯಕ್ರಮಕ್ಕೆ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ? ಶಾಕ್ ಆಗುತ್ತೀರ.
ಹೌದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಬ್ಜ ಸಿನಿಮಾದ ಕಲರ್‌ಫುಲ್ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಸಿನಿಮಾದ ನಾಯಕ ನಟ ರಾದ ಉಪೇಂದ್ರ ಸುದೀಪ್ ನಾಯಕಿ ಶ್ರೇಯಾ ಶರಣ್ ತಾನ್ಯಾ ಹೋಪ್ ಸುನೀಲ್ ಪುರಾಣಿಕ್‌ನೀನಾಸಂ ಅಶ್ವಥ್ ನಿರ್ಮಾಪಕ ಮತ್ತು ನಿರ್ದೇಶಕ ಆರ್. ಚಂದ್ರು ಸೇರಿದಂತೆ ಕಬ್ಜ ಸಿನಿಮಾದ ಬಹುತೇಕ ಕಲಾವಿದರು ತಂತ್ರಜ್ಞರು ಹಾಜರಿದ್ದರು. ಇನ್ನು ಕಾರ್ಯಕ್ರಮವನ್ನು ಅನುಶ್ರೀ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದು ಅಷ್ಟೇ ದುಬಾರಿ ಸಂಭಾವನೆ ಪಡೆದುಕೊಂಡಿದ್ದಾರೆ. ಹೌದು ಅನುಶ್ರೀ ಯವರು ಈ ಈವೆಂಟ್ ನ ನಿರೂಪಣೆಗಾಗಿ ಬರೋಬ್ಬರಿ ಒಂದು ಲಕ್ಷದ ಇಪ್ಪತ್ತು ಸಾವಿರ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.