Ashwini PuneethRajkumar: ಬೆಳಿಗ್ಗೆ 5 ಗಂಟೆಗೆ ಎದ್ದು ಅಪ್ಪುವನ್ನು ಮೀರಿಸುವ ಕೆಲಸ ಮಾಡಿದ ಅಶ್ವಿನಿ.
ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಫಿಟ್ನೆಸ್ (Fitness) ಎಂದರೆ ಮೊದಲು ನೆನಪಿಗೆ ಬರುವುದು ನಮ್ಮ ಕನ್ನಡ ಚಿತ್ರರಂಗದ (KFI) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar). ಹೌದು ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ರೂ ಕೂಡ ವರ್ಕೌಟ್ (Workout) ಮಿಸ್ ಮಾಡುತ್ತಿರಲಿಲ್ಲ. ಹೌದು ಫಿಟ್ನೆಸ್ ಕಾಪಾಡಿಕೊಳ್ಳಲು ಅವರು ಮಿಸ್ ಮಾಡದೆ ಪ್ರತಿದಿನ ಕೂಡ ಜಿಮ್ಗೆ (Gym) ಹೋಗುತ್ತಿದ್ದರು.
ಹೌದು ಎಷ್ಟೋ ಬಾರಿ ಅವರ ವರ್ಕೌಟ್ ವಿಡೀಯೊಗಳು (Videos) ಕೂಡ ಬಾರಿ ವೈರಲ್ ಆಗಿ ಅಭಿಮಾನಿಗಳು ಫೀಧ ಆಗಿರುವುದು ಗೊತ್ತೆ ಇದೆ.
ಸದ್ಯ ಅದೇ ರೀತಿ ಇತ್ತಿಚೇಗಷ್ಟೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಸಹ ಫಿಟ್ನೆಸ್ ಗೆ ಪ್ರಾಮುಖ್ಯತೆ ಕೊಟ್ಟು ವರ್ಕೌಟ್ ಮಾಡಿರೋ ವಿಡೀಯೊ ಒಂದು ಬಾರಿ ಸದ್ದು ಮಾಡಿತ್ತು.
ಹೌದು ಎಷ್ಟೋ ಫ್ಯಾನ್ಸ್ ಆ ಸಮಯದಲ್ಲಿ ಅಪ್ಪುವನ್ನು ಕಂಡಾಂತಾಗುವುದೆಂದು ಎಂದಿದ್ದರು. ಇನ್ನು ಫಿಟ್ನೆಸ್ ಮುಖ್ಯ ಎಂದು ಸಾರುವ ನಿಟ್ಟಿನಲ್ಲಿ ನಗರದಲ್ಲಿ ಪವರ್ ರನ್ (Power Run) ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೌದು ಉತ್ತಮ ಆರೋಗ್ಯಕ್ಕಾಗಿ ಫಿಟ್ನೆಸ್ ಮುಖ್ಯವಾಗಿದ್ದು ಪವರ್ ರನ್ ನಲ್ಲಿ ನೂರಾರು ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ವಿಶೇಷ ಅಂದೇ ಅಪ್ಪು ರವರಂತೆಯೇ ಬೆಳಿಗ್ಗೆ ೫ ಗಂಟೆಗೆ ಎಂಟ್ರಿ ಕೊಟ್ಟು ಎಲ್ಲರ ಹೃದಯ ಗೆದ್ದಿದ್ದಾರೆ. ಹೌದು ಅಶ್ವಿನಿಯವರು ಕಾರ್ಯಕ್ರಮಕ್ಕೆ ಆಗಮಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಇನ್ನು ಅಶ್ವಿನಿ ಚಿಕ್ಕಮಗಳೂರಿನವರಾಗಿದ್ದು ಪುನೀತ್ ರಾಜ್‌ಕುಮಾರ್ ಅವರ ಸಿಂಪ್ಲಿಸಿಟಿ ಗುಣಕ್ಕೆ ಅಶ್ವಿನಿ ಕ್ಲೀನ್ ಬೋಲ್ಡ್ ಆಗಿದ್ದರಂತೆ. ಹೌದು ಪುನೀತ್ ಅವರ ಸರಳತೆ ಮತ್ತು ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವ ನೋಡಿ ಅವರನ್ನು ಇಷ್ಟ ಪಟ್ಟಿದ್ದಾಗಿ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದರು. ಇನ್ನು ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ದಂಪತಿಗೆ ದ್ರಿತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ದ್ರಿತಿ ನ್ಯೂರ್ಯಾಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಕಿರಿಯ ಪುತ್ರಿ ವಂದಿತಾ ಬೆಂಗಳೂರಿನಲ್ಲೇ ಓದುತ್ತಿದ್ದಾರೆ. ಪುನೀತ್ ಅಗಲಿದ ಬಳಿಕ ಮನೆ ಹಾಗೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ನಿಭಾಯಿಸುತ್ತಿದ್ದಾರೆ.