Kabzaa Movie: ಕಬ್ಜ ಚಿತ್ರದಲ್ಲಿ ಕಾಣಿಸಿಕೊಂಡ ಈ ಅವಳಿ ಮಕ್ಕಳು ನಿಜಕ್ಕೂ ಯಾರು ಗೊತ್ತಾ?

Advertisement
ಕನ್ನಡದ ಕಬ್ಜ (Kabza) ಚಿತ್ರದಲ್ಲಿ ಎರಡು ಪುಟಾಣಿ ಮಕ್ಕಳು ಅವಳಿ ಮಕ್ಕಳ (Twins) ನಟನೆ ಸಿಮಿಮಾದ ಪ್ರಮುಖ ಆಕರ್ಷಣೆಯಾಗಿದ್ದು ಅಮ್ಮನ ಕೈಯಿಡಿದು ನಡೆದು ಕಾರಲ್ಲಿ (Var) ಕೂರುವುದು ಅಜ್ಜನನ್ನು ಕಂಡು ಹೆದರುವುದು ಅಮ್ಮನ ಮಡಿಲಲ್ಲಿ ಮಲಗಿ ನಗುವುದು ಅಮ್ಮನಿಂದ ದೂರಾದಾಗ ಅಳುವುದು ಹೀಗೆ ಈ ಮುದ್ದು ಮಕ್ಕಳ ನಟನೆ ಎಂಥವರನ್ನೂ ಕೂಡ ಮೂಖವಿಸ್ಮಿತರನ್ನಾಗಿಸುತ್ತದೆ.
ಇನ್ನು ಈ ಮುದ್ದಾದ ಅವಳಿ ಮಕ್ಕಳು ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿರುವ (Gandhi Circle Chitradurga) ಶ್ರೀ ರಾಮ ಮೆಡಿಕಲ್ ಎಂಪೋರಿಯಂ ನ ಮಾಲೀಕರಾದ ಮಂಜುನಾಥ (Manjunath) ಅವರ ಮೊಮ್ಮಕ್ಕಳಾಗಿದ್ದು ಈ ಕುರಿತು ಮುದ್ದು ಅವಳಿ ಮಕ್ಕಳ ತಂದೆ ವೈಶಾಖ್ (Vyshak) ರವರುಮಕ್ಕಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
ನನ್ನ ಇಬ್ಬರು ಮಕ್ಕಳಿಗೆ ಈಗ ನಾಲ್ಕು ವರುಷವಾಗಿದ್ದು ಅವರ ಹೆಸರು ಅಗಸ್ತ್ಯ ಮತ್ತು ಅಚಿಂತ್ಯ. ಇನ್ನು ನನ್ನ ಪತ್ನಿ ಪ್ರೀತಿಗೆ ಮಕ್ಕಳನ್ನು ಕಲಾವಿದರನ್ನಾಗಿ ಮಾಡುವ ಆಸೆಯಾಗಿದ್ದು ಆಕೆ ಕೂಡ ಉತ್ತಮ ಡ್ಯಾನ್ಸರ್. ಅವರಿಗೆ ಕಲೆಯಲ್ಲಿ ಬಹಳ ಆಸಕ್ತಿಯಿದ್ದು ಹೀಗಾಗಿ ಮಕ್ಕಳಿಗೆ ನನ್ನ ಮಡದಿಯೇ ಮೊದಲ ಗುರು ಎಂದಿದ್ದಾರೆ ಅವಳಿ ಮಕ್ಕಳ ತಂದೆ ವೈಶಾಕ್.
ಇನ್ನು ಆರಂಭದಲ್ಲಿ ಕಬ್ಜ ಚಿತ್ರದಲ್ಲಿ ಪುಟಾಣಿ ಮಕ್ಕಳು ಬೇಕಾಗಿದ್ದಾರೆ ಎಂದು ಸಿನಿಮಾ ತಂಡ ಪ್ರಕಟಣೆ ನೋಡಿ ತಂದೆ ವೈಶಾಕ್ ಕರೆ ಮಾಡಿದರಂತೆ. ನಂತರ ಚಿತ್ರತಂಡ ಒಮ್ಮೆ ಬೆಂಗಳೂರಿಗೆ ಕರೆದಿದ್ದು ಹೋಗಿ ಆಡಿಷನ್ ಕೊಟ್ಟಿದ್ದಾರೆ. ಮಕ್ಕಳಿಗೆ ಒಂದು ಡೈಲಾಗ್ ಕೊಟ್ಟಿದ್ದು ಈ ವೇಳೆ ನಿರರ್ಗಳವಾಗಿ ಹೇಳಿದಾಗ ಸೆಲೆಕ್ಟ್ ಆಗಿದ್ದಾರೆ. ಇನ್ನು ಶೂಟಿಂಗ್ ಸೆಟ್ ಗೆ ಕರೆದುಕೊಂಡು ಹೋದಾಗಲೂ ಫುಲ್ ಆಕ್ಟೀವ್ ಆಗಿದ್ದು ಎಲ್ಲರ ಜೊತೆಗೂ ಮಾತನಾಡುತ್ತಾ ಇದ್ದರು ಆರಂಭದಲ್ಲಿ ರಿಟೇಕ್ ತೆಗೆದುಕೊಂಡರ.
ಆದ್ರೆ ಆಮೇಲೆ ಒಂದೇ ಟೇಕ್ ನಲ್ಲಿ ಶಾಟ್ ಮುಗಿಸಿ ಎಲ್ಲರಿಂದ ಶಹಬ್ಬಾಶ್ ಎನಿಸಿಕೊಂಡಿದ್ದಾರೆ. ಮಕ್ಕಳಿಗೆ ಕಲೆಯಲ್ಲಿ ಭವಿಷ್ಯವಿದೆ ಎಂದು ಎಲ್ಲರೂ ಹರಸಿದ್ದಾರೆ ಎಂದು ಮಕ್ಕಳ ತಂದೆ ಮತ್ತು ತಾಯಿ ಬಹಳ ಹೆಮ್ಮೆಯಿಂದ ಸಂಭ್ರಮವನ್ನ ಹಂಚಿಕೊಂಡರು. ಮಾತು ಮುಂದುವರಿಸಿದ ಅವರು ಚಿತ್ರದಲ್ಲಿ ನಮ್ಮ ಮಕ್ಕಳ ಅಭಿನಯ ನೋಡಿ ನಮ್ಮ ಕುಟುಂಬದ ಸದಸ್ಯರು ಸ್ನೇಹಿತರು ಸೇರಿದಂತೆ ನಮ್ಮ ಅಂಗಡಿಯ ಗ್ರಾಹಕರುಗಳು ಕೂಡ ಕರೆ ಮಾಡಿ ಮಕ್ಕಳಿಬ್ಬರೂ ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಅವರಿಗೆ ಅಷ್ಟು ಚೆನ್ನಾಗಿ ಅಭಿನಯಿಸಲು ಹೇಗೆ ಸಾಧ್ಯವಾಯಿತು? ಎಂದು ಆಶ್ಚರ್ಯಕರವಾಗಿ ಮಾತನಾಡುತ್ತಾರೆ. ಇನ್ನೂ ಕೆಲವರು ಕರೆ ಮಾಡಿ ನಮ್ಮೂರಿನ ಮಕ್ಕಳು ನಮ್ಮ ಮನೆಯ ಮಕ್ಕಳು ಪಾನ್ ಇಂಡಿಯಾ (Pan India) ಸಿನಿಮಾದಲ್ಲಿ ನಟಿಸಿರುವುದೇ ನಮ್ಮ ಸೌಭಾಗ್ಯ ಎಂದು ಸಂತಸವನ್ನು ಹಂಚಿಕೊಳ್ಳುತ್ತಾರೆ. ಹೀಗೆ ಇವರೆಲ್ಲರ ಮಾತುಗಳಿಂದ ನಮಗೆ ಬಹಳ ಸಂತಸವಾಗಿದ್ದು ಹೆಮ್ಮೆಯನಿಸುತ್ತಿದೆ ಎಂದು ವೈಶಾಖ್ ಮಾತು ಮುಗಿಸಿದ್ದಾರೆ.