Karnataka Times
Trending Stories, Viral News, Gossips & Everything in Kannada

R. Chandru: ಅಲ್ಲು ಅರ್ಜುನ್ ಜೊತೆ ಸಿನೆಮಾ ಮಾಡಲು ಹೋದಾಗ ಏನಾಯ್ತು ಎಂದ ಕಬ್ಜ ನಿರ್ದೇಶಕ ಚಂದ್ರು

Advertisement

ಸದ್ಯ ನಮ್ಮ ಸ್ಯಾಂಡಲ್ ವುಡ್ ನಲ್ಲಿ (Sandalwood) ಸಕ್ರಿಯರಾಗಿರುವ ಯಶಸ್ವಿ ನಿರ್ದೇಶಕರಲ್ಲಿ ಆರ್ ಚಂದ್ರು (R Chandru) ಕೂಡ ಒಬ್ಬರು. 2008ರಲ್ಲಿ ತೆರೆಕಂಡ ಅಜಯ್ ರಾವ್ (Ajay Rao) ನಟನೆಯ ತಾಜ್‌ಮಹಲ್ (Tajmahal) ಎಂಬ ಚಿತ್ರ ಮಾಡಿ ನಿರ್ದೇಶಕನಾಗಿ (Director) ತನ್ನ ಕೆಲಸವನ್ನು ಆರಂಭಿಸಿ ಚೊಚ್ಚಲ ಪ್ರಯತ್ನದಲ್ಲಿಯೇ ದೊಡ್ಡ ಯಶಸ್ಸು ಸಾಧಿಸಿದ ಚಂದ್ರು ತದನಂತರ ಚಾರ್‌ಮಿನಾರ್ (Charminar) ಮೈಲಾರಿ (Mylari) ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದರು. ಹೀಗೆ ಕಲರ್‌ಫುಲ್ ಕಮರ್ಷಿಯಲ್ ಸಿನಿಮಾ ಮಾಡಿದ್ದ ಆರ್ ಚಂದ್ರು ರವರು ಕೆಜಿಎಫ್ (KGF) ಸಿನಿಮಾ ವೀಕ್ಷಿಸಿ ತಾನೂ ಕೂಡ ಇಂತಹ ದೊಡ್ಡ ರಿಚ್ ಮೇಕಿಂಗ್ ಇರುವ ಸಿನಿಮಾವನ್ನು ನಿರ್ದೇಶಿಸಬೇಕು ಎಂಬ ಛಲದಿಂದ ಈಗ ರಿಯಲ್ ಸ್ಟಾರ್ ಉಪೇಂದ್ರಗೆ (Upendra) ಕಬ್ಜ (Kabzaa) ಎಂಬ ಚಿತ್ರವನ್ನು ನಿರ್ದೇಶಿಸಿ ಗೆದ್ದಿದ್ದಾರೆ.

ಸದ್ಯ ಚಿತ್ರರಂಗದ ದೊಡ್ಡ ನಟರನ್ನು ಒಂದೇ ಚಿತ್ರಕ್ಕೆ ಕರೆ ತಂದಿರುವ ಆರ್ ಚಂದ್ರು ರವರು ಕಬ್ಜ ಚಿತ್ರದ ಮೂಲಕ ಕೇವಲ ಎರಡೇ ದಿನದಲ್ಲಿ ನೂರು ಕೋಟಿ ಕ್ಲಬ್ ಸೇರುವಲ್ಲಿಯೂ ಕೂಡ ಯಶಸ್ವಿಯಾಗಿದ್ದಾರೆ. ಹೀಗೆ ಇಂಡಸ್ಟ್ರಿಯ ದೊಡ್ಡ ದೊಡ್ಡ ನಟರ ಕಾಲ್‌ಶೀಟ್ ಪಡೆದು ಸುಲಭವಾಗಿ ಸಿನಿಮಾ ಮಾಡುತ್ತಿರುವ ಆರ್ ಚಂದ್ರು ರವರುತಾವು ತೆಲುಗು ಚಿತ್ರರಂಗದ (Telugu Filim Industry) ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್‌ಗೆ (Allu Arjun)>ಸಿನಿಮಾ ಮಾಡಲೆಂದು ಮುಂದಾದಾಗ ತಮಗಾದ ಅವಮಾನವನ್ನು ಬಿಚ್ಚಿಟ್ಟಿದ್ದಾರೆ.

ಸದ್ಯ ಕಬ್ಜ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಚಂದ್ರು ರವರು ನನ್ನ ಚಿತ್ರವನ್ನು ಮೊದಲು ಓಟಿಟಿಯಿಂದ ಸ್ಯಾಟಲೈಟ್‌ವರೆಗೆ ಓಪನ್ ಆಗಿ ತೋರಿಸಿ ಇದು ಸರ್ ನನ್ನ ಸಿನಿಮಾ ಎಂದು ತೋರಿಸಿ ಹಾಕಿದ್ದ ಬಜೆಟ್ ಅನ್ನು ಅವತ್ತೇ ಸಂಪಾದಿಸಿದ್ದೆ. ಹೌದುನಇದು ಕನ್ನಡಿಗರು ಹಾಗೂ ಭಾರತದ ಜನ ನನಗೆ ಕೊಟ್ಟಿರುವ ಪ್ರತಿಫಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀನಿ ‌ಅಂದರೆ ಒಂದು ದೊಡ್ಡ ಪ್ರಯತ್ನ ಮಾಡುವಾಗ ನೂರಾರು ವಿ‍ಘ್ನ ಆಗುತ್ತೆ ಅಂತಾರೆ. ನಾನು ಹೊರಟು ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಎಂಬ ತೆಲುಗು ಚಿತ್ರ ಮಾಡಿದ್ದೆ. ನಾನು ಅಲ್ಲಿ ದೊಡ್ಡದಾಗಿ ಗೆದ್ದುಬಿಡಬೇಕು ಅಂತ ಅಲ್ಲಿಗೆ ಹೋದೆ, ನನಗೆ ಕೊಟ್ಟಿದ್ದೇ ಮೂರು ಕೋಟಿಯ ಸಣ್ಣ ಬಜೆಟ್. ಯಾಕೆ ಎಂದರೆ ನಾನು ಕನ್ನಡ ಡೈರೆಕ್ಟರ್ ಅಂತ ಎಂದು ಹೇಳಿಕೊಂಡರು.

ಸರ್ ನಾನು ಅಲ್ಲು ಅರ್ಜುನ್ ರವರಿಗೆ ಸಿನಿಮಾ ಮಾಡಬೇಕು ಸರ್ ಕಥೆ ಹೇಳ್ತಿನಿ ಸರ್ ಎಂದು ನಿರ್ಮಾಪಕರಿಗೆ ಹೇಳಿದಾಗ ಯಾರಮ್ಮ ಕನ್ನಡ ಡೈರೆಕ್ಟ್ರಾ ಬೇಡಮ್ಮ ಎಂದುಬಿಟ್ಟರು. ಅವತ್ತು ನಾನು ನಿರ್ಧರಿಸಿದೆ ಮೇಕಿಂಗ್ ಚೆನ್ನಾಗಿ ಮಾಡಬೇಕು ಎಂದು. ಕನ್ನಡ ಡೈರೆಕ್ಟರ್ ಅಂತ ಕಥೆ ಕೇಳೋಕೆ ಒಪ್ಪಲಿಲ್ಲ ತುಂಬಾ ನೋವಿತ್ತು ಸರ್. ಆ ನೋವನ್ನು ಹೋಗಲಾಡಿಸಿದ್ದು ನನ್ನದೇ ಕನ್ನಡ ಚಿತ್ರರಂಗದ ದೊಡ್ಡ ತಂಡ ಕೆಜಿಎಫ್ ಟೀಮ್. ಅದಕ್ಕೆ ನನಗೆ ಕೆಜಿಎಫ್ ಟೀಮ್ ಎಂದರೆ ಇಷ್ಟ ಅಂತಹ ಒಂದು ಮಾತನ್ನು ಹೋಗಲಾಡಿಸಿದ್ದು ಕೆಜಿಎಫ್ ಟೀಮ್ ಪ್ರಶಾಂತ್ ನೀಲ್ ಯಶ್ ಅವ್ರು ವಿಜಯ್ ಕಿರಗಂದೂರು ಅವ್ರು. ಕೆಲವರು ಯಾಕೆ ಅವರ ಹೆಸರನ್ನು ಪದೇ ಪದೇ ಹೇಳ್ತೀಯಾ ಅಂತಾರೆ. ಆದರೆ ಅವರು ಸಾಧನೆ ಮಾಡಿದ್ದಾರೆ, ಅದಕ್ಕೆ ನಾನು ಅವರನ್ನು ಹೊಗಳುತ್ತೇನೆ. ನಾನೂ ಆ ಥರದ ಒಂದು ಪ್ರಯತ್ನ ಮಾಡಬೇಕು ಎಂದು ಹೊರಟೆ. ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತದ್ದು ನನ್ನ ದೇವರಾದಂತಹ ಉಪ್ಪಿ ಸರ್. ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂದಾಗ ಮೂರು ವರ್ಷ ನನ್ನ ಬೆನ್ನೆಲುಬಾಗಿ ನಿಂತು ನನಗೆ ಡೇಟ್ ಕೊಟ್ಟರು ಎಂದು ಕಷ್ಟ ಬಂದಾಗ ಸಹಾಯಕ್ಕೆ ನಿಂತವರನ್ನು ನೆನೆದಿದ್ದಾರೆ ಆರ್ ಚಂದ್ರು.

Leave A Reply

Your email address will not be published.