Karnataka Times
Trending Stories, Viral News, Gossips & Everything in Kannada

Zwigato: ಕಪಿಲ್ ಶರ್ಮ ಅಭಿನಯದ ಜ್ವಿಗಾಟೋ ಚಿತ್ರ ಕೇವಲ ಮೂರು ದಿನಕ್ಕೆ ಗಳಿಸಿದ್ದೆಷ್ಟು ಗೊತ್ತಾ?

Advertisement

ಕಪಿಲ್ ಶರ್ಮಾ (Kapil Sharma) ಅವರ ಅಭಿನಯದ ಜ್ವಿಗಾಟೋ ಸಿನಿಮಾ, (Zwigato Movie) ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಕಮಾಯಿ ಮಾಡಿಲ್ಲ. ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಅವರ ನಟನೆ ಅದ್ಭುತವಾಗಿದ್ದರೂ, ಸಿನಿಮಾದ ನಿರ್ಮಾಣ ಜನರ ಗಮನ ಸೆಳೆಯುವಲ್ಲಿ ಸೋತಿದೆ. ವಾರಾಂತ್ಯದಲ್ಲಿಯೂ ಯಾವ ಜಾದುನೂ ಬಾಕ್ಸ್ ಆಫೀಸ್ ನಲ್ಲಿ ವರ್ಕ್ ಆಗಿಲ್ಲ.

Zwigato ಮೂರು ದಿನದ ಗಳಿಕೆ ಎಷ್ಟು:

ನಂದಿತಾ ದಾಸ್ ನಿರ್ದೇಶನ Zwigato Box Office ಕೊಳ್ಳೆ ಹೊಡೆಯುವಲ್ಲಿ ಸೋತಿದೆ. ರಿಲೀಸ್ ಆದ ದಿನದಿಂದ ಮೂರು ದಿನದವರೆಗೂ ಯಾವುದೇ ಹೆಚ್ಚಿನ ಕಮಾಯಿ ಮಾಡಿಲ್ಲ. ಮೊದಲನೇ ದಿನ ಈ ಸಿನಿಮಾ ಗಳಿಸಿದ್ದು ಕೇವಲ 75 ಲಕ್ಷ ರೂಪಾಯಿಗಳು ಮಾತ್ರ. ಮೊದಲ ದಿನ 43 ಲಕ್ಷ ಕಲೆಕ್ಷನ್ ಮಾಡಿತ್ತು. ಶನಿವಾರ 62 ಲಕ್ಷ ವ್ಯವಹಾರ ನಡೆಸಿದರೆ ಇಲ್ಲಿವರೆಗಿನ ಒಟ್ಟು ಗಳಿಕೆ 1.80 ಕೋಟಿ ರೂಪಾಯಿಗಳು.

Zwigato ಕಥೆಯ ಸಾರಾಂಶ:

ಜ್ವಿಗಾಟೋ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಒಂದು ಫ್ಯಾಕ್ಟರಿಯಲ್ಲಿ ಫುಡ್ ಡೆಲಿವರಿ ಮ್ಯಾನ್ ಆಗಿ ಬದುಕು ಕಟ್ಟಿಕೊಳ್ಳಲು ನಾಯಕ ಪ್ರಯತ್ನಿಸುವ ಪ್ರಯತ್ನದ ಸುತ್ತ ಹೆಣೆದ ಕಥೆ ಇದಾಗಿದೆ. ಮಾನಸ್ ಎನ್ನುವ ವ್ಯಕ್ತಿ ಆತನ ಪತ್ನಿ ಪ್ರತಿಮಾ ಇಬ್ಬರು ಮಕ್ಕಳು ಹಾಗೂ ಅಸ್ವಸ್ಥ ತಾಯಿ, ಈ ಐದು ಜನರ ಕುಟುಂಬಕ್ಕೆ ಏಕೈಕ ಆಧಾರ ಆತನ ಕೆಲಸ. ಒಟ್ಟಾರೆಯಾಗಿ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಮೇಲೆ ಚಿತ್ರವನ್ನು ಕೇಂದ್ರೀಕರಿಸಲಾಗಿದೆ.

ಕಾಮಿಡಿ ಮಾಡುವ Kapil Sharma ಅವರನ್ನು ಗಂಭೀರ ಪಾತ್ರಕ್ಕೆ ನಂದಿತಾ ದಾಸ್ ಆಯ್ಕೆ ಮಾಡಿದ್ದು ಯಾಕೆ:

ಈ ಸಿನಿಮಾದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ನಂದಿತಾ ದಾಸ್ ಅವರನ್ನ ನೀವು ಕಪಿಲ್ ಶರ್ಮ ಯಾಕೆ ಆಯ್ಕೆ ಮಾಡಿಕೊಂಡಿರಿ ಎಂದು ಪ್ರಶ್ನೆ ಕೇಳಲಾಗಿತ್ತು. ಕಪಿಲ್ ಶರ್ಮ ಕೂಡ ಕಥೆ ಹೇಳಿದಾಗ ನಾನೇ ಏಕೆ ಎಂದು ಪ್ರಶ್ನೆ ಮಾಡಿದ್ದರಂತೆ. ಗ್ಲೋಬಲ್ ಸ್ಟಾರ್ ಶಾರುಖ್ ಖಾನ್ ಒಪ್ಪಿಕೊಂಡರು ನಾನು ಸಿನಿಮಾಕ್ಕೆ ಅವರನ್ನ ತೆಗೆದುಕೊಳ್ಳುತ್ತಿರಲಿಲ್ಲ, ಯಾಕೆಂದರೆ ನೀವು ಸಾಮಾನ್ಯ ಮುಖ ಹೊಂದಿರುವುದರಿಂದ ನೀವು ಈ ಕಥೆಗೆ ಸರಿಯಾದ ಆಯ್ಕೆ ಎಂದು ನಿಮ್ಮನ್ನು ಆಯ್ಕೆ ಮಾಡಿದ್ದೇನೆ. ಎಂದು ಉತ್ತರಿಸಿದ್ದರು.

Leave A Reply

Your email address will not be published.