Karnataka Times
Trending Stories, Viral News, Gossips & Everything in Kannada

Actor Sudeep: ಪಠಾಣ್ ಸಿನೆಮಾ ನೋಡಿದ್ದೀರಾ ಎಂದ ಪತ್ರಕರ್ತೆಗೆ ಕಿಚ್ಚನ ಖಡಕ್‌ ಉತ್ತರ ಹೀಗಿತ್ತು.

Advertisement

ಕಿಚ್ಚಾ ಸುದೀಪ್‌(Kiccha Sudeep) ಸ್ಯಾಂಡಲ್‌ ವುಡ್‌ ನ ಫೇಮಸ್‌ ನಟ,, ಕರುನಾಡ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿರುವ ಕಿಚ್ಚ ತಮ್ಮ ನಟನಾ ಕೌಶಲ್ಯದಿಂದ ಕರುನಾಡಿನ ಜನರ ಮನಸ್ಸಲ್ಲಿ ಮನೆ ಮಾಡಿದ್ದಾರೆ.ಕಿಚ್ಚ ಉತ್ತಮ ನಟ ಹೇಗೋ ಹಾಗೆ ಉತ್ತಮ ಮಾತುಕಾರನು ಹೌದು..ಕಿಚ್ಚ ಸುದೀಪ್ ಅವರ ಡೈಲಾಗ್‌ ಗೆ (Dilogue)ಸಾಕಷ್ಟು ಅಭಿಮಾನಿಗಳಿದ್ದಾರೆ. ಅಲ್ಲದೆ ಯಾರಾದರೂ ಸುದೀಪ್ ರನ್ನು ಕೆಣಕುವಂತಾ ಪ್ರಶ್ನೆ ಕೇಳಿದರೆ ಖಡಕ್‌ ಉತ್ತರ ನೀಡುತ್ತಾರೆ.

ಇತ್ತೀಚಿನ ಒಂದು ಸಂದರ್ಶನದಲ್ಲಿ ಮಹಿಳೆಯೊಬ್ಬರು ಸುದೀಪ್ ಗೆ ನೀವು ಪಠಾಣ್‌(Pathaan) ಸಿನೆಮಾವನ್ನು ನೋಡಿದ್ದೀರಾ..? ಈಗಿನ ಕಾಲಘಟ್ಟದಲ್ಲಿ ಯಾರು ನಿಮಗೆ ಪ್ರಬಲ ಹೀರೋ ಎನಿಸುತ್ತಾರೆ ಎಂದು ಕಾಂಟ್ರವರ್ಶಿಯಲ್‌ ಪ್ರಶ್ನೆ ಕೇಳಿದ್ದು, ಅದಕ್ಕೆ ಸುದೀಪ್‌ ಖಡಕ್‌ ಉತ್ತರ ನೀಡಿದ್ದಾರೆ.

ನನಗೆ ನಾನೇ ದೊಡ್ಡ ಸ್ಟಾರ್, ನನ್ನ ಜೀವನದ ಸ್ಟಾರ್ ನಾನೇ, ನಾನು ಇತರ ನಟರನ್ನು, ಸ್ಟಾರ್‌ ಗಳನ್ನು ಗೌರವಿಸುತ್ತೇನೆ. ನಾನೊಬ್ಬ ಹೀರೋ ಆಗಿ ಇನ್ನೊಬ್ಬ ಹೀರೋವನ್ನು ಯಾಕೆ ದೊಡ್ಡ ಹೀರೋ ಎನ್ನಲಿ ಎಂದಿದ್ದಾರೆ. ಇನ್ನು ಪಠಾಣ್‌ ಸಿನೆಮಾ ನೋಡಿದ್ದೀರಾ ಎಂಬ ಪ್ರಶ್ನೆಗೆ, ನಾನು ಇದುವರೆಗೂ ಪಠಾಣ್‌ ಮೂವಿ ನೋಡಿಲ್ಲ. ನಾನು ಕನ್ನಡ ಸಿನೆಮಾ ನೋಡುವುದರಲ್ಲಿ ಬ್ಯೂಸಿಯಾಗಿದ್ದೇ , ಇತ್ತೀಚಿಗೆ ಚಾರ್ಲಿ(Charlie) ಸಿನೆಮಾ ನೋಡಿದೆ.

ಕನ್ನಡದಲ್ಲಿ ನೋಡುವುದಕ್ಕೆ ಸಾಲು ಸಾಲು ಸಿನೆಮಾಗಳಿವೆ ಅವುಗಳನ್ನು ನೋಡಿದ ಮೇಲೆ ಬೇರೆ ಸಿನೆಮಾಗಳನ್ನು ನೋಡುವ ಯೋಜನೆ ಮಾಡುತ್ತೇನೆ ಎಂದು ಖಡಕ್‌ ಉತ್ತರ ನೀಡಿದ್ದಾರೆ. ಈ ಮೂಲಕ ಕನ್ನಡದ ಸಿನೆಮಾಗಳಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.

ಬಾಲಿವುಡ್‌ (Bollywood)ಸಿನೆಮಾಗಳೆಂದರೆ ಬಹು ಕೋಟಿ ಸಿನೆಮಾ ಅವುಗಳ ಮಟ್ಟಕ್ಕೆ ಕನ್ನಡಿಗರು ಸಿನೆಮಾ ಮಾಡಲು ಸಾಧ್ಯವಾಗುತ್ತದೆಯೇ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಯಾವಾಗ ಸೌತ್‌ ಇಂಡಿಯನ್ ಸಿನೆಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದವೋ ಆಗ ದಕ್ಷಿಣ ಭಾರತದ ಸಿನೆಮಾಗಳ ಮೇಲೆ ಜನರ ಭರವಸೆ ಹೆಚ್ಚಾಗಿದೆ. ಕನ್ನಡದವರು ಕೂಡಾ ನೂರಾರು ಕೋಟಿ ಹೂಡಿಕೆ ಮಾಡಿ ಸಿನೆಮಾಗಳನ್ನು ತೆರೆ ಮೇಲೆ ತರುತ್ತಿದ್ದಾರೆ.

Leave A Reply

Your email address will not be published.