Karnataka Times
Trending Stories, Viral News, Gossips & Everything in Kannada

Loose Mada: ಬಹುಶಃ ಈ ಸಿನೆಮಾ ಒಪ್ಪಿಕೊಂಡಿದ್ದರೆ ಲೂಸ್ ಮಾದ ಯೋಗಿ ಸೂಪರ್ ಸ್ಟಾರ್ ಆಗುತ್ತಿದ್ದರು.

Advertisement

ಡ್ರಾಮಾ (Drama) 2012 ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ. ಹೌದು ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ಈ ಚಿತ್ರದಲ್ಲಿ ಯಶ್ (Yash) ರಾಧಿಕಾ ಪಂಡಿತ್ (Radhika Pandit) ಸತೀಶ್ ನೀನಾಸಂ (Sathish Ninasam) ಸಿಂಧು ಲೋಕನಾಥ್ (Sindhu Lokanath) ಮತ್ತು ರೆಬಲ್ ಸ್ಟಾರ್ ಅಂಬರೀಶ್ (Ambreesh) ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.ಇನ್ಜುಬವಿಮರ್ಶಕರಿಂದ ಮೆಚ್ಚುಗೆ ಗಳಿಸಿದ ಡ್ರಾಮಾ ಬಾಕ್ಸ್ ಆಫೀಸ್ ನಲ್ಲೂನ(Box Office) ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್ ವೃತ್ತಿ ಜೀವನದಲ್ಲಿ ಡ್ರಾಮಾ ಮತ್ತೊಂದು ಯಶಸ್ಸಿನ ಮೆಟ್ಟಿಲಾಯ್ತು ಎನ್ನಬಹುದು. ಇಂತಿಪ್ಪ ಡ್ರಾಮಾ ಸಿನಿಮಾದ ಸ್ಕ್ರಿಪ್ಟ್ ಮೊದಲು ಹೋಗಿದ್ದು ಲೂಸ್ ಮಾದ ಯೋಗಿ (Loose Maada Yogi) ಬಳಿ ಅನ್ನೋದು ನಿಮಗೆ ಗೊತ್ತಾ?

ಹೌದು ಡ್ರಾಮಾ ಸ್ಕ್ರಿಪ್ಟ್ ರೆಡಿ ಆದಮೇಲೆ ಯೋಗರಾಜ್ ಭಟ್ ತಲೆಗೆ ಮೊದಲು ಹೊಳೆದ ಹೆಸರು ಲೂಸ್ ಮಾದ ಯೋಗಿ. ಡ್ರಾಮಾ ಸಿನಿಮಾದಲ್ಲಿ ನಟಿಸಲು ಯೋಗೀಶ್ ಬಳಿ ಭಟ್ರು ಕೇಳಿಕೊಂಡಿದ್ದರಂತೆ. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಡ್ರಾಮಾ ತಂಡ ಸೇರಿಕೊಳ್ಳಲಿಲ್ಲ ಎಂದು ಈ ಹಿಂದೆ ಯೋಗೀಶ್ ನಂ.1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಡ್ರಾಮಾ ಸಿನಿಮಾದ ಆಫರ್ ಬಂದಿತ್ತು. ನನ್ನ ಬಳಿ ಡೇಟ್ಸ್ ಇರಲಿಲ್ಲ. ಡೇಟ್ಸ್ ಅಡ್ಜಸ್ಟ್ ಮಾಡಬಹುದಾ ಸ್ವಲ್ಪ ಮುಂದಕ್ಕೆ ಹೋಗಬಹುದಾ ಎಂದು ಯೋಗರಾಜ್ ಭಟ್ ಬಳಿ ಕೇಳಿದೆ. ಆದ್ರೆ ಅವರು ಆಗಲ್ಲ ಅಂದರು. ಅದರ ಬಗ್ಗೆ ಬೇಜಾರಿಲ್ಲ ಎಂದು ಲೂಸ್ ಮಾದ ಯೋಗೀಶ್ ಹೇಳಿದ್ದಾರೆ.

ಬಳಿಕ ಈ ಸಿನಿಮಾವನ್ನ ನಟ ಯಶ್ ಅವರಿಗೆ ನೀಡಲಾಗಿತ್ತು. ನಟ ಯಶ್ ನಟಿ ರಾಧಿಕಾ ಪಂಡಿತ್ ನಟ ನೀನಾಸಂ ಸತೀಶ್ ಹಾಗೆಯೇ ನಟಿ ಸಿಂಧು ಈ ಸಿನಿಮಾದಲ್ಲಿ ನಟಿಸಿ ಈ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ಟಾಗಲು ಕಾರಣರಾಗಿದ್ದರು. ಇನ್ನು ಎಂದಿಗೂ ಕೂಡ ಡ್ರಾಮ ಸಿನಿಮಾವನ್ನು ಅದೆಷ್ಟೋ ಜನರು ಮೆಚ್ಚಿಕೊಳ್ಳುತ್ತಾರೆ. ಇನ್ನು ಡ್ರಾಮಾ ಸಿನಿಮಾದಲ್ಲಿ ಯಶ್ ಬದಲಿಗೆ ಯೋಗಿ ನಟಿಸಿದ್ದರೆ ಆ ಸಿನಿಮಾ ಯಾವ ರೀತಿ ಇರುತ್ತಿತ್ತು ಎನ್ನುವುದನ್ನು ನೀವು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

ಇನ್ನು ಲೂಸ್‌ ಮಾದ ಯೋಗಿ (Loose Mada Yogi) ಕನ್ನಡ ಚಿತ್ರರಂಗದ ಉತ್ತಮ ನಟ. ಹೊಸ ರೀತಿಯ ಕಥೆಗಳಿಗೆ ಸೂಕ್ತವಾಗುವ ಮಾಸ್‌ ಹೀರೊ. ಹೆಡ್‌ ಬುಷ್‌ (Head Bush) ಸಿನಿಮಾದ ನಂತರ ಅವರ ಕರಿಯರ್‌ ಮತ್ತೊಮ್ಮೆ ಏರುಗತಿಯಲ್ಲಿದ್ದು ಕಿರೀಟ ಸಿನಿಮಾ ನಿರ್ದೇಶನ ಮಾಡಿದ್ದ ಕಿರಣ್‌ ಚಂದ್ರ (Kiran Chandra) ಆ್ಯಕ್ಷನ್‌ ಕಟ್‌ ಹೇಳಲಿರುವ ಹೊಸ ಸಿನಿಮಾದಲ್ಲಿ ಯೋಗಿ ನಾಯಕರಾಗಿ ನಟಿಸುತ್ತಿದ್ದಾರೆ.ದುನಿಯಾ (Duniya) ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದ ಯೋಗಿ ಇದುವರೆಗೆ ನಟಿಸಿದ ಸಿನಿಮಾಗಳಲ್ಲಿ ಅವರ ನಟನೆಯಿಂದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಸದ್ಯ ಈಗ ಕಿರಣ್‌ ಚಂದ್ರ ಸಿನಿಮಾದಲ್ಲಿಯೂ ಹೊಸ ರೀತಿಯ ಪಾತ್ರವನ್ನೇ ಅವರು ಒಪ್ಪಿಕೊಂಡಿದ್ದಾರೆ.

Leave A Reply

Your email address will not be published.