ಸಿನೆಮಾರಂಗದಲ್ಲಿ ಫ್ಯಾನ್ಸ್ ವಾರ್ ಇಂದು ಕಾಮನ್ ಆಗಿದ್ದು ಇದೇ ರೀತಿಯ ವಾತಾವರಣ ಈಗ ಕ್ರಿಕೆಟ್ ರಂಗಕ್ಕೂ ಬಂದು ತಲುಪಿದೆ . ಭಾರತೀಯ ವಿಕೇಟ್ ಕೀಪರ್ ಕೆ ಎಲ್ ರಾಹುಲ್ (KL Rahul) ವ ಕೆಲದಿನದ ಹಿಂದೆ ಮಾಜಿ ಕ್ರಿಕೆಟಿಗ ವೆಂಕಟೇಶ್ವರ (Venkatesh Prasad) ಅವರು ಮಾಡಿದ್ದ ಟೀಕೆ ಸದ್ಯ ವೈರಲ್ ಆಗಿತ್ತು ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಾಡಿದ್ದ ಸಾಧನೆ ಈಗ ಮಾಜಿ ಕ್ರಿಕೆಟಿಗನಿಗೆ ಟಕ್ಕರ್ ಕೊಟ್ಟಂತೆ ಆಗಿದೆ.
ವೈರಲ್ ಆದ ಸ್ಟಾರ್ ಪೋಸ್ಟರ್:
ಸದ್ಯ ಕೆ ಎಲ್ ರಾಹುಲ್ ಅವರು ಮಾಡಿದ್ದ ಸಾಧನೆ ತಿಳಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾಧ್ (Venkatesh Prasad) ಅವರು ಮರು ಮಾತನಾಡದೆ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ರಾಹುಲ್ ಅವರ ಮಾವ ಸುನೀಲ್ ಶೆಟ್ಟಿ ಮಾತ್ರ ಈ ಟ್ವೀಟ್ ಗೆ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಮುಂಬಯಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಸುನಿಲ್ ಶೆಟ್ಟಿ (Sunil Shetty) ಭಾಗವಹಿಸಿ ತನ್ನ ಅಳಿಯನ ಬಗ್ಗೆ ಮಾತಾಡಿದ್ದಾರೆ. ಈ ಮೂಲಕ ಇದು ಕಲಿಯುಗ ಯಾವಾಗೂ ಕಲಿಯುತ್ತಲೇ ಇರುತ್ತೇವೆ.
ದೇವರು ಎಲ್ಲವನ್ನು ನೋಡ್ತಿದ್ದಾರೆ ಈಗ ಅದಕ್ಕೆ ಉತ್ತರ ಲಭಿಸಿದೆ. ಏನೆನೋ ಹೇಳ್ತಾರೆ ಎಂದು ಹಾಗೆಲ್ಲ ಎಲ್ಲದನ್ನು ಕೇಳಿ ಬೆಲೆ ಕೊಡಲು ಸಾಧ್ಯವಿಲ್ಲ. ಯಾವ ಟೀಕೆಗೂ ಬೆಲೆ ಇಲ್ಲ ಬಿಡಿ ಎಂದು ಪರೋಕ್ಷವಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಅಳಿಯನ ಸಪೋರ್ಟ್ ಮಾಡಲು ಮಾವ ಸದಾ ಸನ್ನದ್ಧರಾಗಿದ್ದರೆ ಎಂಬುದನ್ನು ಅವರು ತಿಳಿಸಿದ್ದಾರೆ. ಆದರೆ ಇದಕ್ಕೆ ಮಾಜಿ ಕ್ರಿಕೆಟಿಗ ಏನು ಹೇಳಿಲ್ಲ ಎಂಬುದನ್ನು ನಾವು ಕಾಣಬಹುದು. ಕೆ ಎಲ್ ರಾಹುಲ್ ಇತ್ತೀಚೆಗೆ ಹಲವು ಸರಣಿ ಆಟ ಆಡಿದ್ದರು ಉತ್ತಮ ಪ್ರದರ್ಶನ ನೀಡಿಲ್ಲ ಎಂಬ ಮಾತು ಸಹ ಕೇಳಿ ಬರುತ್ತಿದ್ದು ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ.
ಕೆ ಎಲ್ ರಾಹುಲ್ ಅವರು ಸುನಿಲ್ ಶೆಟ್ಟಿ ಅವರ ಪುತ್ರಿಯನ್ನು ಇತ್ತೀಚೆಗಷ್ಟೇ ವಿವಾಹವಾಗಿದ್ದು ಈ ವಿವಾಹಕ್ಕೆ ಹಲವಾರು ಗಣ್ಯರು ಸಾಕ್ಷಿಯಾಗಿದ್ದರು. ಇದೀಗ ಮದುವೆಯ ಬಳಿಕ ರಾಹುಲ್ ಕುಟುಂಬ ಇಂತಹ ಟೀಕೆಗಳಿಗೆ ಎದುರುತ್ತರ ಸಹ ನೀಡುತ್ತಿದ್ದಾರೆ ಎನ್ನಬಹುದು. ಇನ್ನು ಮುಂಬರುವ ಸರಣಿಯಲ್ಲಿ ರಾಹುಲ್ ಅವರ ಮೇಲೆ ನಿರೀಕ್ಷೆ ಹೆಚ್ಚಾಗೆ ಇದ್ದು ಈ ಭರವಸೆ ಉಳಿಸಿಕೊಳ್ತಾರಾ ಎಂದು ಕಾದು ನೋಡಬೇಕು.