Karnataka Times
Trending Stories, Viral News, Gossips & Everything in Kannada

Kabzaa Movie: ಕಬ್ಜ ಚಿತ್ರದ ನಮಾಮಿ ಹಾಡು ಶೂಟಿಂಗ್ ಮಾಡುವಾಗ ಆಗಿತ್ತು ಆಘಾತ, ಸತ್ಯ ತಡವಾಗಿ ಹೊರಕ್ಕೆ

Advertisement

ಕಬ್ಜ (Kabza) ಚಿತ್ರದ ನಮಾಮಿ ನಮಾಮಿ (Namami Namami) ಹಾಡು ಸದ್ಯ ಎಲ್ಲರ ಗಮನ ಸೆಳೆದಿದ್ದು ಈ ಹಾಡು ಸಿನಿಮಾದಲ್ಲಿ ನಟಿಯ ಪರಿಚಯವನ್ನು ಸೂಚಿಸುತ್ತದೆ ಎನ್ನಬಹುದು. ಹೌದು ಆಕೆಯ ಪಾತ್ರವು ನಟರಾಜ್ (Nataraj) ಅವರನ್ನು ಹೇಗೆ ಆರಾಧಿಸುತ್ತದೆ ಎಂಬುದನ್ನು ಒತ್ತಿಹೇಳುತ್ತದೆ ಎನ್ನಬಹುದು. ಇನ್ನು ರಾಷ್ಟ್ರಪ್ರಶಸ್ತಿ (National Award) ವಿಜೇತ ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್ (Chinni Prakash) ಅವರ ನೃತ್ಯ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದೆ. ಇನ್ನು ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಶ್ರಿಯಾ ಸರಣ್ (Shriya Sharan) ಚಿನ್ನಿ ಪ್ರಕಾಶ್ ಜೊತೆ ಕೆಲಸ ಮಾಡಲು ಎಷ್ಟು ಖುಷಿಯಾಯಿತು ಎಂಬುದನ್ನ ತಿಳಿಸಿದರು.

ಇನ್ನು ಶ್ರಿಯಾ ಕ್ಲಾಸಿಕಲ್ ಡ್ಯಾನ್ಸರ್(Clasical Dancer) ಆಗಿದ್ದು ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಇದು ಉಪಯೋಗಕ್ಕೆ ಬಂತು ಎನ್ನುತ್ತಾರೆ . ಶ್ರೀಯಾ ಅವರು ಚಿನ್ನಿ ಪ್ರಕಾಶ್ ರವರ ಕೆಲಸ ಮತ್ತು ಅವರು ಹೇಳುವ ಕಥೆಗಳ ದೃಷ್ಟಿಯಿಂದ ಅವರು ಬಹಳ ಆಕರ್ಷಕ ವ್ಯಕ್ತಿ ಎಂದು ಹೇಳಿದ್ದು ಚಿನ್ನಿ ಪ್ರಕಾಶ್ ತಲರವರು ಇದೇ ಮೊದಲ ಬಾರಿಗೆ ಶಾಸ್ತ್ರೀಯ ಹಾಡು ಮಾಡಿದ್ದಾರೆ. ಇನ್ನು ಬಹಳ ದಿನಗಳ ನಂತರ ಶ್ರಿಯಾ ಮಾಡುತ್ತಿರುವ ಶಾಸ್ತ್ರೀಯ ಹಾಡು ಕೂಡ ಇದಾಗಿದೆ. ಇನ್ನು ಈ ನಡುವೆ ಶ್ರೀಯಾ ರವರು ಹಾಡಿನ ಚಿತ್ರೀಕರಣ ಸಮಯದಲ್ಲಿ ತಮಗೆ ಸೈನಸ್ ಅಟ್ಯಾಕ್ ಗೆ ತುತ್ತಾದ ವಿಚಾರ ಹಂಚಿಕೊಂಡಿದ್ದಾರೆ.

ಚಿತ್ರೀಕರಣದ ಸೆಟ್ ಬಹಳ ಅದ್ಬುತವಾಗಿತ್ತು ಆದರೆ ನನಗೆ ಬಹಳ ಕೆಟ್ಟದಾದ ಸೈನಸ್ ಅಟ್ಯಾಕ್ ಆಗಿದ್ದು ನನಗೆ ಏನು ನೆನಪಿದೆ ಎಂದೆ ಸಿತಾರ ರವರ ಮಾಡಿದ್ದ ಔಟ್ ಫುಟ್ ಧರಸಿ ಮೇಕಪ್ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತೆ. ಆದರೆ ಯಾವಾಗ ನಾನು ಕ್ಯಾಮೆರಾ ಮುಂದೆ ನಿಂತೆನೋ ಆಗ ಸಾಂಗ್ ಪ್ಲೇ ಮಾಡಿದರು. ನಿಜಕ್ಕೂ ಆಸಮಯದಲ್ಲಿವ ಮನಸ್ಸು ಹಗುರವಾಯಿತು ಎನ್ನುತ್ತಾರೆ ಶ್ರೀಯಾ ಶರಣ್. ಈ ವೇಳೆ ಚಿನ್ನಿ ಪ್ರಕಾಶ್ ರವರಿಗೆ ಧನ್ಯವಾದ ತಿಳಿಸಿದ ನಟಿ ನಿಜಕ್ಕೂ ಚಿನ್ನಿ ಪ್ರಕಾಶ್ ರವರು ಅದ್ಬುತವಾಗಿ ನೃತ್ಯ ಸಂಯೋಜನೆ ಮಾಡಿದರು. ಅವರು ಹೃದಯೊಪೂರ್ವಕವಾಗಿ ಕೆಲಸ ಮ‍ಾಡಿದ್ದಕ್ಕೆ ಈ ಹಾಡು ಇಷ್ಟು ಅದ್ಬುತವಾಗಿ ಮೂಡಿ ಬಂದಿದೆ. ನಿಜಕ್ಕೂ ಈ ರೀತಿಯ ಅದ್ಬುತವಾದ ಸೆಟ್ ನಲ್ಲಿ ನಾನು ನೃತ್ಯ ಮಾಡಿದ್ದು ಒಂದು ರೀತಿ ಮ್ಯಾಜಿಕ್ ಎನಿಸಿತು ಎನ್ನುತ್ತಾರೆ ಶ್ರಿಯಾ ಶರಣ್.

Leave A Reply

Your email address will not be published.